ನುಗ್ಗೆಕಾಯಿಯನ್ನು ಸಾರು, ಸಾಂಬಾರ್, ಪಲ್ಯ ಮಾಡಿ ನೀವು ತಿಂದಿರಬಹುದು. ಆದರೆ ಈ ಬಾರಿ ಇದರ ಕಷಾಯ ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಸುತ್ತೇವೆ. ನುಗ್ಗೆಕಾಯಿ ಕಷಾಯ ಕುಡಿಯುವ ಮೂಲಕ ನೀವು ಕೆಲವೇ ದಿನಗಳಲ್ಲಿ ಸ್ಥೂಲಕಾಯತೆಯನ್ನು (reduce obesity) ಕಡಿಮೆ ಮಾಡುತ್ತೀರಿ. ಇದರಲ್ಲಿರುವ ವಿಟಮಿನ್ ಎ, ವಿಟಮಿನ್ ಬಿ 1, ವಿಟಮಿನ್ ಬಿ 2, ವಿಟಮಿನ್ ಬಿ 3, ವಿಟಮಿನ್ ಬಿ 6 ಮತ್ತು ವಿಟಮಿನ್ ಸಿ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಸತು ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ತೂಕ ಇಳಿಸಲು ಮತ್ತು ಉತ್ತಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತೆ.