ತೂಕ ಕಡಿಮೆ ಮಾಡ್ಬೇಕಂದ್ರೆ ಇವನ್ನೆಲ್ಲಾ ಚೆನ್ನಾಗಿ ಜಗಿದು ತಿನ್ನಿ !

Published : Apr 20, 2023, 06:30 PM IST

ಆಹಾರವನ್ನು ಚೆನ್ನಾಗಿ ಜಗಿಯುವುದು  ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ. ಅಷ್ಟೇ ಅಲ್ಲ, ಗ್ಯಾಸ್, ಆಮ್ಲೀಯತೆ, ಮಲಬದ್ಧತೆ ಇತ್ಯಾದಿಗಳ ಸಮಸ್ಯೆ ಸಹ ದೂರವಾಗುತ್ತೆ. ಇನ್ನೊಂದು ಉತ್ತಮ ವಿಷಯವೆಂದರೆ ಇದನ್ನು ಮಾಡುವ ಮೂಲಕ ನೀವು ಹೆಚ್ಚುತ್ತಿರುವ ತೂಕವನ್ನು ನಿಯಂತ್ರಣದಲ್ಲಿಡಬಹುದು.

PREV
17
ತೂಕ ಕಡಿಮೆ ಮಾಡ್ಬೇಕಂದ್ರೆ ಇವನ್ನೆಲ್ಲಾ ಚೆನ್ನಾಗಿ ಜಗಿದು ತಿನ್ನಿ !

ಬಾಲ್ಯದಿಂದಲೂ ನಿಧಾನವಾಗಿ ಜಗಿಯಲು (chewing food slowly) ನಮಗೆ ಕಲಿಸಲಾಗುತ್ತದೆ. ಈ ಅಭ್ಯಾಸ ಜೀರ್ಣಾಂಗ ವ್ಯವಸ್ಥೆಯನ್ನು (Digestive System) ಆರೋಗ್ಯಕರವಾಗಿರಿಸುವುದರ ಜೊತೆಗೆ ಇಡೀ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಇತ್ತೀಚೆಗೆ, ಜಪಾನ್ ನ ವಸೆಡಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಸಂಶೋಧನೆಯೂ ಇದನ್ನು ದೃಢಪಡಿಸಿದೆ. ಈ ಸಂಶೋಧನೆಯ ಪ್ರಕಾರ, ನಿಧಾನವಾಗಿ ಜಗಿಯುವ ಮೂಲಕ ತೂಕ ಹೆಚ್ಚಾಗೋದನ್ನು ಸಹ ನಿಯಂತ್ರಿಸಬಹುದು.

27

ಸಾಮಾನ್ಯವಾಗಿ, ಜಗಿಯುವ ಆಹಾರ ಚಯಾಪಚಯ ಶಕ್ತಿಯ ಬಳಕೆಯನ್ನು ಹೆಚ್ಚಿಸುತ್ತದೆ. ಕರುಳಿನ ಸಕ್ರಿಯತೆಯನ್ನು ಹೆಚ್ಚಿಸುತ್ತದೆ. ಊಟದ ನಂತರ ದೇಹದಲ್ಲಿ ಶಾಖ ಹೆಚ್ಚಾಗುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಡಿಐಟಿ (diet induced Thermogenesis) ಎಂದು ಕರೆಯಲಾಗುತ್ತದೆ.

37

ಇದು ತೂಕ ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುವ ಅಂಶ. ಸಂಶೋಧನೆಯಲ್ಲಿ, ವಿಜ್ಞಾನಿಗಳು ನಿಧಾನವಾಗಿ ಜಗಿಯುವ ಮತ್ತು ತಿನ್ನುವ ಜನರು ಡಿಐಟಿಯಲ್ಲಿ ಹೆಚ್ಚಳವನ್ನು ಹೊಂದಿದ್ದಾರೆ ಮತ್ತು ಅವರ ಕರುಳಿನ ಪ್ರದೇಶದಲ್ಲಿ ರಕ್ತ ಪರಿಚಲನೆಯೂ ಉತ್ತಮವಾಗಿ ನಡೆಯುತ್ತಿದೆ ಎಂದು ಕಂಡುಕೊಂಡಿದ್ದಾರೆ. ಇದು ಅವರ ದೇಹದಲ್ಲಿ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸರಿಯಾಗಿ ಮಾಡಿ, ತೂಕ ನಿಯಂತ್ರಿಸಲು (control weight gain) ಸಹಾಯ ಮಾಡಿದೆ. ಆದ್ದರಿಂದ ನೀವು ಹೆಚ್ಚು ಸದೃಢವಾಗಿರಲು ಬಯಸಿದರೆ, ಚೆನ್ನಾಗಿ ಜಗಿದು ಆಹಾರ ಸೇವಿಸಿ.

47

ತಜ್ಞರು ತಿಳಿಸುವಂತೆ ಲಾಲಾರಸದಲ್ಲಿ ಅನೇಕ ಕಿಣ್ವಗಳಿವೆ, ಇದು ಕಾರ್ಬೋಹೈಡ್ರೇಟ್ಸನ್ನು ಆಹಾರದೊಂದಿಗೆ ಜೀರ್ಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಆಹಾರವನ್ನು ಜಗಿಯುವುದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ ಮತ್ತು ವ್ಯಕ್ತಿಯ ಅತಿಯಾಗಿ ತಿನ್ನುವ ಅಭ್ಯಾಸ (over eating) ಸಹ ದೂರವಾಗುತ್ತೆ. ಇದು ತೂಕವನ್ನು ಸಹ ನಿಯಂತ್ರಿಸುತ್ತದೆ. 

57

ಆಹಾರವನ್ನು ಜಗಿದು ತಿನ್ನೋದ್ರಿಂದ ಇನ್ನೇನು ಪ್ರಯೋಜನಗಳಿವೆ?
ಆಹಾರವನ್ನು ಚೆನ್ನಾಗಿ ಜಗಿಯುವುದು ಹೆಚ್ಚು ಹೆಚ್ಚು ಪೌಷ್ಠಿಕಾಂಶ ಮತ್ತು ಶ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ದಿನವಿಡಿ ದೇಹಕ್ಕೆ ಬೇಕಾದ ಶಕ್ತಿ (energy for body) ಸಿಗುತ್ತೆ. 

67

ಆಹಾರವನ್ನು ಜಗಿದು ತಿನ್ನುವುದು ಹಲ್ಲುಗಳ ಆರೋಗ್ಯಕ್ಕೂ ಒಳ್ಳೆಯದು. ಇದು ಹಲ್ಲುಗಳು ಮತ್ತು ಬಾಯಿಯ ಉತ್ತಮ ವ್ಯಾಯಾಮಕ್ಕೆ (mouth exercise) ಕಾರಣವಾಗುತ್ತದೆ. ಇದರಿಂದ ಮುಖದಲ್ಲೂ ಉತ್ತಮ ರಕ್ತಪರಿಚಲನೆ ಉಂಟಾಗಿ, ಮುಖ ಹೊಳೆಯಲು ಪ್ರಾರಂಭವಾಗುತ್ತದೆ. 

77

ಆಹಾರವನ್ನು ಜಗಿಯುವುದರಿಂದ ಆಹಾರವು ಸಂಪೂರ್ಣವಾಗಿ ಜೀರ್ಣವಾಗುತ್ತದೆ, ಇದರಿಂದಾಗಿ ಕರುಳಿನಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಕಡಿಮೆ. ಹಾಗಾಗಿ ನೀವು ಆರೋಗ್ಯದಿಂದ ಉಳಿಯಲು ಸಾಧ್ಯವಾಗುತ್ತೆ. ಇನ್ನು ಮುಂದೆ ಆಹಾರ ಸೇವಿಸುವಾಗ ಸರಿಯಾಗಿ ಜಗಿದು ಸೇವಿಸಿ. 

Read more Photos on
click me!

Recommended Stories