ಕರಿಬೇವನ್ನು ತಿನ್ನೋದ್ರಿಂದ ಕೂದಲು ಆರೋಗ್ಯಕರವಾಗಿರುತ್ತೆ (healthy hair), ಅನ್ನೋದರ ಬಗ್ಗೆ ನೀವು ಕೇಳಿರಬಹುದು. ಕರಿಬೇವಿನ ಎಲೆಗಳ ನೀರು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಅನ್ನೋದು ನಿಮಗೆ ಗೊತ್ತಾ? . ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಯಾವುವು ಎಂಬುದು ಇಲ್ಲಿದೆ.
ಕರಿಬೇವಿನ ಎಲೆಗಳನ್ನು (curry leaves) ಅಡುಗೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತೆ. ಈ ಎಲೆಗಳು ರುಚಿಯಲ್ಲಿ ಉತ್ತಮವಾಗಿವೆ ಮತ್ತು ಅವುಗಳನ್ನು ತಿನ್ನೋದ್ರಿಂದ ಆರೋಗ್ಯವು ಸಹ ಉತ್ತಮವಾಗಿರುತ್ತದೆ. ಆದ್ರೆ ಇದರ ನೀರನ್ನು ಕುಡಿಯೋದ್ರಿಂದನೂ ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ? ಕರಿಬೇವಿನ ಎಲೆಗಳ ನೀರನ್ನು ತಯಾರಿಸಿ ಕುಡಿಯುವ ಪ್ರಯೋಜನಗಳು ಇಲ್ಲಿವೆ.
ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಆಂಟಿ-ಆಕ್ಸಿಡೆಂಟ್ಗಳು, ಉರಿಯೂತ ನಿವಾರಕ ಗುಣಲಕ್ಷಣಗಳು, ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಮತ್ತು ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುವುದರಿಂದ ಹಿಡಿದು ತೂಕ ನಷ್ಟದವರೆಗಿನ ಗುಣಲಕ್ಷಣಗಳನ್ನು ಹೊಂದಿವೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಯಿರಿ.
ತೂಕ ಇಳಿಕೆಗೆ ಸಹಾಯಕ: ಕರಿಬೇವಿನ ಎಲೆಗಳ ನೀರು ಕುಡಿಯುವುದರಿಂದ ತೂಕ ಸುಲಭವಾಗಿ ಇಳಿಸಿಕೊಳ್ಳಲು (weight loss) ಸಹಾಯ ಮಾಡುತ್ತದೆ. ಈ ನೀರು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಕರಗುವ ಮೂಲಕ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಇದು ಕೂದಲಿಗೂ ಉತ್ತಮ: ಕರಿಬೇವಿನ ಎಲೆಗಳ ನೀರು ದೇಹವನ್ನು ಆಂತರಿಕವಾಗಿ ಮಾತ್ರವಲ್ಲದೆ ಬಾಹ್ಯವಾಗಿಯೂ ಸುಧಾರಿಸುತ್ತದೆ. ಇದು ಕೂದಲಿನ ಆರೋಗ್ಯವನ್ನು ಸಹ ಉತ್ತಮಗೊಳಿಸುತ್ತೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳ ನೀರನ್ನು ಕುಡಿಯುವುದರಿಂದ ಕೂದಲಿಗೆ ಆಂಟಿ-ಆಕ್ಸಿಡೆಂಟ್ಗಳು ಮತ್ತು ಅಮೈನೋ ಆಮ್ಲಗಳನ್ನು ಒದಗಿಸುತ್ತದೆ, ಇದು ನೆತ್ತಿಯನ್ನು ತೇವಾಂಶದಿಂದ ಇರಿಸುತ್ತದೆ. ಜೊತೆಗೆ ಕೂದಲನ್ನು ಸಹ ಬಲಪಡಿಸುತ್ತೆ ಈ ಎಲೆಗಳ ಸೇವನೆಯು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಇರುತ್ತದೆ: ಕರಿಬೇವಿನ ಎಲೆಗಳಲ್ಲಿ ಆಂಟಿ-ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಎಲ್ ಡಿಎಲ್ ಅಂದರೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ. ಈ ಎಲೆಗಳ ನೀರು ಕುಡಿಯುವುದರಿಂದ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ: ಹೊಟ್ಟೆ ಕೆಟ್ಟಿದ್ದರೆ ಕರಿಬೇವಿನ ಎಲೆಗಳನ್ನು ತಿನ್ನಬಹುದು ಮತ್ತು ಅವುಗಳ ನೀರನ್ನು ಕುಡಿಯಬಹುದು. ಈ ಎಲೆಗಳ ನೀರನ್ನು ಕುಡಿಯುವುದರಿಂದ ಮಲಬದ್ಧತೆ (constipation) ಮತ್ತು ಹೊಟ್ಟೆಯುಬ್ಬರದಂತಹ ಸಮಸ್ಯೆಗಳು ನಿವಾರಣೆಯಾಗುತ್ತೆ.
ಮಾರ್ನಿಂಗ್ ಸಿಕ್ ನೆಸ್: ಕೆಲವು ಜನರು ಬೆಳಗ್ಗೆ ಎದ್ದಾಗ ಕೆಲವೊಂದು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಜ್ವರ ಬರುತ್ತಿರುವಂತೆ ಭಾಸವಾಗುತ್ತದೆ, ದೇಹದಲ್ಲಿ ನೋವು ಕಾಣಿಸಿಕೊಳ್ಳಲಿದೆ, ವಾಂತಿ ಸಹ ಉಂಟಾಗಬಹುದು. ಈ ಪರಿಸ್ಥಿತಿಯಲ್ಲಿ ಕರಿಬೇವಿನ ಎಲೆಯ ನೀರು ತುಂಬಾನೆ ಪರಿಣಾಮಕಾರಿಯಾಗಿದೆ. ಕರಿಬೇವಿನ ಎಲೆಯ ನೀರನ್ನು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಬಹುದು.