Clove Water: ನೀವು ಲವಂಗದ ಆರೋಗ್ಯ ಪ್ರಯೋಜನಗಳ ಬಗ್ಗೆ ಕೇಳಿರಬಹುದು, ಆದರೆ ಲವಂಗ ನೀರಿನ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ? ಮಲಗುವ ಮುನ್ನ ಲವಂಗದ ನೀರನ್ನು ಕುಡಿದರೆ ನೀವು ಯಾವ ಪ್ರಯೋಜನಗಳನ್ನು ಪಡೆಯಬಹುದು ಎನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ.
ಲವಂಗವು ಔಷಧೀಯ ಗುಣಗಳಿಂದ ತುಂಬಿರುವ ಒಂದು ವಸ್ತುವಾಗಿ. ನೀವು ಅವುಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ಬಹಳಷ್ಟು ಕೇಳಿರಬಹುದು, ಆದರೆ ನೀವು ಎಂದಾದರೂ ಲವಂಗ ನೀರಿನ ಪ್ರಯೋಜನಗಳ ಬಗ್ಗೆ ತಿಳಿದುಕೊಂಡಿದ್ದೀರಾ? ನೀವು ಅದರ ಬಗ್ಗೆ ಮೊದಲ ಬಾರಿಗೆ ಕೇಳುತ್ತಿರಬಹುದು, ಆದರೆ ಲವಂಗದ ನೀರನ್ನು ಕುಡಿಯುವುದು ಹಳೆಯ ಮತ್ತು ಸರಳವಾದ ಮನೆಮದ್ದು. ಈ ನೀರು ತಯಾರಿಸಲು ತುಂಬಾ ಸುಲಭ ಮತ್ತು ತುಂಬಾ ಉಪಯುಕ್ತವಾಗಿದೆ. ಈ ನೀರು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನ ನೀಡುತ್ತೆ. ಇದರಲ್ಲಿರುವ ಯುಜೆನಾಲ್ ನಂತಹ ಅಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ನಿದ್ರೆಯನ್ನು ಉತ್ತೇಜಿಸುತ್ತದೆ ಮತ್ತು ದೇಹವನ್ನು ಬಲಪಡಿಸುತ್ತದೆ. ಇದನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಮಲಗುವ ಮುನ್ನ ಕುಡಿದರೆ ಯಾವ ಪ್ರಯೋಜನಗಳನ್ನು ಪಡೆಯಬಹುದು ಎನ್ನುವುದನ್ನು ನೋಡೋಣ.
26
ರಕ್ತದಲ್ಲಿನ ಸಕ್ಕರೆ ಮತ್ತು ಹೊಟ್ಟೆ ಉಬ್ಬರ ಸಮಸ್ಯೆ
ನೀವು ರಕ್ತದಲ್ಲಿ ಅಧಿಕ ಸಕ್ಕರೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಲವಂಗದ ನೀರು ಸರ್ವರೋಗ ನಿವಾರಕವಾಗಬಹುದು. ಲವಂಗವು ಇನ್ಸುಲಿನ್ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
ಮಲಗುವ ಮೊದಲು ಲವಂಗದ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಕಿಣ್ವಗಳು ಸಕ್ರಿಯಗೊಳ್ಳುತ್ತವೆ, ರಾತ್ರಿಯಿಡೀ ಗ್ಯಾಸ್, ಹೊಟ್ಟೆ ಉಬ್ಬರ ಅಥವಾ ಅಜೀರ್ಣವನ್ನು ಕಡಿಮೆ ಮಾಡುತ್ತದೆ. ಮಲಗುವ ಸಮಯದಲ್ಲಿ ಹಗುರವಾದ ಹೊಟ್ಟೆಯು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ.
36
ಆಳವಾದ ನಿದ್ರೆಗಾಗಿ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಲು
ನಿಮಗೆ ನಿದ್ದೆ ಬರುವುದು ಕಷ್ಟವಾಗಿದ್ದರೆ ಅಥವಾ ಪದೇ ಪದೇ ಎಚ್ಚರಗೊಳ್ಳುತ್ತಿದ್ದರೆ, ಮಲಗುವ ಮುನ್ನ ಲವಂಗದ ನೀರನ್ನು ಕುಡಿಯಲು ಪ್ರಾರಂಭಿಸಿ. ಲವಂಗವು ಶಾಂತಗೊಳಿಸುವ ಗುಣಗಳನ್ನು ಹೊಂದಿದೆ. ಅವು ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ನಿದ್ರಾಹೀನತೆ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ.
ನೀವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಲವಂಗದ ನೀರು ಪ್ರಯೋಜನಕಾರಿ. ಲವಂಗವು ಹಲವಾರು ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದನ್ನು ಪ್ರತಿದಿನ ಕುಡಿಯುವುದರಿಂದ ದೇಹಕ್ಕೆ ಸಮಸ್ಯೆಗಳ ವಿರುದ್ಧ ಹೋರಾಡಲು ತಾಕತ್ತು ದೊರೆಯುತ್ತದೆ.
ನಿಮಗೆ ಯಾವುದೇ ಬಾಯಿಯ ಸಮಸ್ಯೆಗಳಿದ್ದರೆ, ಲವಂಗದ ನೀರನ್ನು ಕುಡಿಯಲು ಪ್ರಾರಂಭಿಸಿ. ಲವಂಗವು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ರಾತ್ರಿಯಲ್ಲಿ ಇದನ್ನು ಕುಡಿಯುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಜೊತೆಗೆ ವಸಡು ಸಮಸ್ಯೆ ನಿವಾರಣೆಯಾಗುತ್ತದೆ.
ಲವಂಗದಲ್ಲಿರುವ ಯುಜೆನಾಲ್ ಸಂಯುಕ್ತವು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿನ ಸೌಮ್ಯವಾದ ಕೀಲು ನೋವು ಅಥವಾ ಊತವನ್ನು ನಿವಾರಿಸಲು ಸಹಾಯ ಮಾಡುತ್ತದೆ.
56
ಲವಂಗ ನೀರನ್ನು ಹೇಗೆ ತಯಾರಿಸುವುದು?
ಮೊದಲು, ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ.
ಲವಂಗ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಸಿ.
ಸ್ಟೌ ಆಫ್ ಮಾಡಿ ಮತ್ತು ಸ್ವಲ್ಪ ತಣ್ಣಗಾಗಲು ಬಿಡಿ, ನಂತರ ಸೋಸಿ.
ಮಲಗುವ ಮುನ್ನ ಅದು ಇನ್ನೂ ಉಗುರುಬೆಚ್ಚಗಿರುವಾಗಲೇ ಕುಡಿಯಿರಿ.
ರುಚಿಯನ್ನು ಹೆಚ್ಚಿಸಲು: ನೀವು ಸ್ವಲ್ಪ ನಿಂಬೆ ರಸ ಅಥವಾ ಜೇನುತುಪ್ಪವನ್ನು ಸೇರಿಸಬಹುದು.
66
ಗಮನಿಸಲೇಬೇಕಾದ ವಿಷಯ
ಹೆಚ್ಚು ಸಕ್ಕರೆ ಅಥವಾ ಸಿಹಿಯನ್ನು ಸೇರಿಸಬೇಡಿ.
ನಿಮಗೆ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗಳಿದ್ದರೆ, ಕಡಿಮೆ ರಕ್ತದ ಸಕ್ಕರೆ ಇದ್ದರೆ ಅಥವಾ ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿ ನಂತರವೇ ಕುಡಿಯಿರಿ.
ಗರ್ಭಿಣಿಯರು ಅಥವಾ ಹಾಲುಣಿಸುವ ಮಹಿಳೆಯರು ಇದನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
ನೀವು ಯಾವುದೇ ಅಲರ್ಜಿಯ ಪ್ರತಿಕ್ರಿಯೆಗಳು ಅಥವಾ ಹೊಟ್ಟೆ ನೋವನ್ನು ಅನುಭವಿಸಿದರೆ ಬಳಕೆಯನ್ನು ನಿಲ್ಲಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.