ಈ ಹಸಿರು ಎಲೆ ಅನೇಕರಿಗೆ ವರ, ಯಾರು ಪಾನ್ ತಿನ್ನಬಾರದು?

Published : Jan 20, 2026, 06:19 PM IST

Betel Leaves Health Benefits: ಈ ಹಸಿರು ಎಲೆ ಅನೇಕರಿಗೆ ವರ, ಯಾರು ಪಾನ್ ತಿನ್ನಬಾರದು?  ದಿನಾಲೂ ವಿಳ್ಯೆದೆಲೆ ತಿಂದ್ರೆ ಜೀರ್ಣ ಕ್ರಿಯೆ ಸುಧಾರಿಸೋದು ಮಾತ್ರವಲ್ಲ, ಬೇರೆ ಬೇರೆ ಔಷಧೀಯ ಗುಣಗಳೂ ಇವೆ. ಅದಕ್ಕೆ ಅನ್ಸುತ್ತೆ ನಮ್ಮ ಪೂರ್ವಿಕರು ಈ ಎಲೆಗೆ ಪೂಜೆಯಲ್ಲಿ ವಿಶೇಷ ಸ್ಥಾನ ನೀಡಿದ್ದು. 

PREV
16
ವೀಳ್ಯದೆಲೆ ಸೀಕ್ರೆಟ್

ವೀಳ್ಯದೆಲೆಗೆ ಭಾರತದಲ್ಲಿ ವಿಶೇಷ ಸ್ಥಾನವಿದೆ. ಈ ಎಲೆಗಳಲ್ಲಿದೇ ಯಾವ ಪೂಜೆಯೂ ನಡೆಯುವುದಿಲ್ಲ. ಆರೋಗ್ಯಕ್ಕೆ ಸಿಕ್ಕಾಪಟ್ಟೆ ಒಳ್ಳೇದು ಅನ್ನುವ ಕಾರಣಕ್ಕೆ ಬಹುಶಃ ಈ ಎಲೆಗೆ ನಮ್ಮ ಪೂರ್ವಿಕರು ವಿಶೇಷ ಸ್ಥಾನ ನೀಡಿರಹುದು. ಪ್ರತಿ ದಿನವೂ ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಬಹುಶಃ ಈ ಪಾನ್‌ನಿಂದ ಸಿಗೋ ಲಾಭ ಅಷ್ಟಿಷ್ಟಲ್ಲ.

26
ಆರೋಗ್ಯದ ದೃಷ್ಟಿಯಿಂದಲೂ ಬಹಳ ಉಪಯೋಗಕಾರಿ

ಪಾನ್ ಕೇವಲ ಬಾಯಿ ಫ್ರೆಶ್ ಮಾಡೋಲ್ಲ. ಆರೋಗ್ಯದ ದೃಷ್ಟಿಯಿಂದಲೂ ಬಹಳ ಉಪಯೋಗಕಾರಿ. ಪಾನ್ ಎಲೆಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವೂ ಇದೆ. ಇವುಗಳ ಇತಿಹಾಸ ಸುಮಾರು ಐದು ಸಾವಿರ ವರ್ಷಗಳ ಹಿಂದಿನದು. ಅನೇಕ ಪುರಾತನ ಹಾಗೂ ಧಾರ್ಮಿಕ ಗ್ರಂಥಗಳಲ್ಲೂ ಪಾನ್ ಎಲೆಗಳ ಬಗ್ಗೆ ಉಲ್ಲೇಖವಿದೆ. ಪಾನ್ ಎಂಬ ಪದ ಸಂಸ್ಕೃತದ ಪರ್ಣ ಎಂಬ ಪದದಿಂದ ಬಂದಿದ್ದು, ಅದರ ಅರ್ಥ ಎಲೆ.

36
ಪಾನ್ ಎಲೆಗಳನ್ನು ಹೇಗೆ ಸೇವಿಸಬಹುದು?

ಸಾಂಸ್ಕೃತಿಕ ಮಹತ್ವ ಮತ್ತು ಬಾಯಿ ಸ್ವಚ್ಛತೆಗೆ ಮಾತ್ರವಲ್ಲ, ಪಾನ್ ಎಲೆಗಳು ಆರೋಗ್ಯಕ್ಕೂ ಒಳ್ಳೆಯದು. ಹಾಗಾದರೆ ಯಾರು ಇದನ್ನು ಸೇವಿಸಬೇಕು? ಏಕೆ ಸೇವಿಸಬೇಕು?

ಪಾನ್ ಎಲೆಗಳನ್ನು ಹೇಗೆ ಸೇವಿಸಬಹುದು?

- ಖಾಲಿ ಹೊಟ್ಟೆಯಲ್ಲಿ ಚೆವ್ ಮಾಡಬಹುದು.

- ಪಾನ್ ಎಲೆ ಚಹಾ ತಯಾರಿಸಿ ಕುಡಿಯಬಹುದು.

- ವಿವಿಧ ಪಾಕವಿಧಾನಗಳಲ್ಲಿ ಬಳಸಬಹುದು

ಪಾನ್ ಥಂಡಾಯಿ (ತಂಪು ಪಾನೀಯ) ರೆಸಿಪಿ:

ಬೇಕಾಗುವ ಪದಾರ್ಥಗಳು, ಪಾನ್ ಎಲೆ, ಗುಲ್ಕಂಡ್, ಹಾಲು, ವೆನಿಲಾ ಎಸೆನ್ಸ್, ಥಂಡಾಯಿ ಪೌಡರ್

46
ತಯಾರಿಸುವ ವಿಧಾನ:

ಪಾನ್ ಥಂಡಾಯಿ ತಯಾರಿಸುವುದು ಸುಲಭ. ಮೊದಲು ಥಂಡಾಯಿ ಮಿಶ್ರಣವನ್ನು ಸ್ವಲ್ಪ ನೀರಿನಲ್ಲಿ ನೆನೆಸಿಡಿ. ಪಾನ್ ಎಲೆಗಳನ್ನು ಚೆನ್ನಾಗಿ ತೊಳೆಯಿರಿ. ಈಗ ನೆನೆಸಿದ ಥಂಡಾಯಿ ಮಿಶ್ರಣ, ಪಾನ್ ಎಲೆಗಳು ಮತ್ತು ಹಾಲು ಅಥವಾ ನೀರನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ಮೂತ್ ಆಗಿದ ಮೇಲೆ ಪಾನ್ ಥಂಡಾಯಿ ಸಿದ್ಧ. ಗ್ಲಾಸ್‌ಗೆ ಸುರಿದು, ಐಸ್ ಕ್ಯೂಬ್‌ಗಳೊಂದಿಗೆ ತಣ್ಣಗಾಗಿ ಸರ್ವ್ ಮಾಡಿ

56
ವಿಳ್ಯದೆಲೆ ತಿಂದ್ರೇನು ಲಾಭ:
  • ಪಾನ್ ಎಲೆಗಳಲ್ಲಿ ಆ್ಯಂಟಿ-ಮೈಕ್ರೋಬಿಯಲ್ ಗುಣಗಳಿರುತ್ತವೆ.
  • ಬಾಯಿಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತವೆ
  • ಊಟದ ನಂತರ ಪಾನ್ ಎಲೆ ಜಗಿಗದರೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ
  • ಬಾಯಿ ದುರ್ವಾಸನೆ (bad breath) ಮತ್ತು ಹಾಲಿಟೋಸಿಸ್ ಸಮಸ್ಯೆ ಕಡಿಮೆಯಾಗುತ್ತದೆ
  • ತೂಕ ಕಡಿಮೆ ಮಾಡುತ್ತೆ.
  • ಮಲಬದ್ಧತೆ ಮತ್ತು ನೋವಿಗೂ ಪರಿಹಾರ ಕೊಡುತ್ತದೆ
66
ಡಿಸ್ಕ್ಲೈಮರ್

ಈ ಲೇಖನದಲ್ಲಿರುವ ಮಾಹಿತಿ ಸಾಮಾನ್ಯ ಅರಿವಿಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ದಯವಿಟ್ಟು ತಜ್ಞ ವೈದ್ಯರ ಸಲಹೆ ಪಡೆಯಿರಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories