ಮಧುಮೇಹಿಗಳು ರಾತ್ರಿಯಲ್ಲಿ ಹಾಲು ಕುಡಿಯುವುದು ಸುರಕ್ಷಿತವೇ?

First Published Jul 1, 2022, 1:41 PM IST

ನಮ್ಮ ದೇಶದಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಮಧುಮೇಹ. ಮಧುಮೇಹಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಹಾಗಾಗಿ ನಾವು ತಿನ್ನುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು (blood sugar level) ನಿಯಂತ್ರಿಸುವ ಮೂಲಕ ಈ ರೋಗ ನಿರ್ವಹಿಸಬೇಕಾಗುತ್ತದೆ. ಹಾಗಾದರೆ ಮಧುಮೇಹ ರೋಗಿಗಳು ರಾತ್ರಿಯಲ್ಲಿ ಹಾಲು ಕುಡಿಯುವುದು ಸರಿಯೇ ಅನ್ನೋ ಪ್ರಶ್ನೆ ಮೂಡುತ್ತೆ ಅಲ್ವಾ?

ಮಧುಮೇಹದಿಂದ (diabetes) ಬಳಲುತ್ತಿರುವವರಿಗೆ, ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಿಸುವುದು ತುಂಬಾ ಕಷ್ಟವಾಗುತ್ತದೆ. ಏನು ತಿನ್ನಬೇಕು, ಯಾವಾಗ ತಿನ್ನಬೇಕು ಮತ್ತು ಎಷ್ಟು ತಿನ್ನಬೇಕು, ಈ ಎಲ್ಲಾ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗುತ್ತದೆ. 
 

ಸಮತೋಲಿತ ಪೌಷ್ಠಿಕಾಂಶದ ದೃಷ್ಟಿಯಿಂದ ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ, ಆದರೆ ಇದು ಮಧುಮೇಹಿಗಳಿಗೆ (diabetes), ವಿಶೇಷವಾಗಿ ರಾತ್ರಿಯಲ್ಲಿ ಕುಡಿಯೋದು ಉತ್ತಮವೇ? ಅದರ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ.

ಹಾಲು ಮತ್ತು ಮಧುಮೇಹ
ಫ್ಯಾಟ್, ಕ್ಯಾಲ್ಸಿಯಂ, ಪ್ರೋಟೀನ್ಗಳು, ಜೀವಸತ್ವಗಳು ಮತ್ತು ಖನಿಜಗಳ ಜೊತೆಗೆ, ಹಾಲಿನಲ್ಲಿ ಲ್ಯಾಕ್ಟೋಸ್ (lactose) ರೂಪದಲ್ಲಿ ಕಾರ್ಬೋಹೈಡ್ರೇಟ್ಗಳು ಸಹ ಇರುತ್ತವ. ಈ ಕಾರಣದಿಂದಲೇ ಮಧುಮೇಹಿಗಳು ಇದನ್ನು ಕುಡಿಯಬೇಕೆ, ಇಲ್ಲವೇ ಅನ್ನೋದರ ಬಗ್ಗೆ ಯೋಚ್ನೆ ಮಾಡ್ತಾರೆ. 

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (blood sugar level) ನಿರ್ವಹಿಸಲು ಮಧುಮೇಹಿಗಳು ತಮ್ಮ ಕಾರ್ಬೋಹೈಡ್ರೇಟ್ ಸೇವನೆಯ ಮೇಲೆ ಕಣ್ಣಿಡಬೇಕಾಗಿದೆ. ಹಾಲಿನಲ್ಲಿರುವ ಲ್ಯಾಕ್ಟೋಸ್ ದೇಹಕ್ಕೆ ಹೋಗಿ ಸಕ್ಕರೆಯಾಗಿ ಬದಲಾಗುತ್ತದೆ, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಆದುದರಿಂದ ಆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತೆ. 

ಮಧುಮೇಹಿಗಳು ರಾತ್ರಿಯಲ್ಲಿ ಹಾಲು ಕುಡಿಯುವುದು ಸರಿಯೇ? 
ಹಾಲು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತೆ, ಏಕೆಂದರೆ ಲ್ಯಾಕ್ಟೋಸ್ ಅನ್ನು ಸಕ್ಕರೆಯಾಗಿ ಪರಿವರ್ತಿಸಲಾಗುತ್ತದೆ, ಆದ್ದರಿಂದ ಸಕ್ಕರೆ ರೋಗಿಗಳು ರಾತ್ರಿಯಲ್ಲಿ ಹಾಲು ಕುಡಿಯುವುದನ್ನು ತಪ್ಪಿಸಬೇಕು. 

ರಾತ್ರಿಯ ಸಮಯದಲ್ಲಿ ಲ್ಯಾಕ್ಟೋಸ್ ಒಡೆದಾಗ ಪಡೆದ ಶಕ್ತಿಯನ್ನು ಬಳಸಲು ದೇಹಕ್ಕೆ ಸಾಧ್ಯವಾಗೋದಿಲ್ಲ. ಆದ್ದರಿಂದ, ರಾತ್ರಿಯ ಬದಲಾಗಿ ಬೆಳಿಗ್ಗೆ ಉಪಾಹಾರದಲ್ಲಿ ಹಾಲು ಕುಡಿಯುವುದು ಉತ್ತಮ, ಆ ಸಮಯದಲ್ಲಿ ದೇಹದಲ್ಲಿ ಸಕ್ಕರೆ ಮಟ್ಟವು ಕಡಿಮೆ ಇರುತ್ತದೆ ಮತ್ತು ದೇಹಕ್ಕೆ ಶಕ್ತಿಯ ಅಗತ್ಯವಿರುತ್ತೆ. 

ರಾತ್ರಿಯಲ್ಲಿ ಹಾಲು ಕುಡಿಯುವುದರಿಂದ ಒಂದು ಲಾಭ ಎಂದರೆ ಇದರಿಂದ ಉತ್ತಮ ನಿದ್ರೆ ಬರುತ್ತದೆ, ಆದ್ದರಿಂದ ನೀವು ಮಲಗುವ ಮೊದಲು ಅರಿಶಿನ ಹಾಲನ್ನು ಸೇವಿಸಬಹುದು. ಅರಿಶಿನ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡುತ್ತದೆ. 

ಹಾಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಸುವುದೇ? 
ಹೌದು, ಹಾಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ, ಏಕೆಂದರೆ ಇದು ಹೆಚ್ಚಿನ ಕಾರ್ಬೋಹೈಡ್ರೇಟ್ ಹೊಂದಿದೆ. ಒಂದು ಕಪ್ ಹಸುವಿನ ಹಾಲಿನಲ್ಲಿ: ಕೊಬ್ಬು - 7 ಗ್ರಾಂ, ಕ್ಯಾಲೋರಿಗಳು - 152 ಗ್ರಾಂ,  ಕಾರ್ಬೋಹೈಡ್ರೇಟ್ಸ್ (carbohydrates)- 12 ಗ್ರಾಂ ಇರುತ್ತೆ.

ಆದ್ದರಿಂದ ಸಕ್ಕರೆ ರೋಗಿಗಳು ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿರುವ ಸ್ಕಿಮ್ ಹಾಲನ್ನು ಸೇವಿಸಬೇಕು. ಇದು ಹಸುವಿನ ಹಾಲಿನಂತೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಇದಲ್ಲದೆ, ಬಾದಾಮಿ ಹಾಲು, ಸೋಯಾ ಹಾಲು ಮತ್ತು ಅಗಸೆ ಹಾಲು ಸಹ ಕಾರ್ಬೋಹೈಡ್ರೇಟ್ಗಳು ಮತ್ತು ಕ್ಯಾಲೋರಿ ಕೂಡ ಕಡಿಮೆ ಇದೆ.

ಮಧುಮೇಹಿಗಳು ದಿನಕ್ಕೆ ಎಷ್ಟು ಹಾಲು ಕುಡಿಯಬಹುದು? ಮಧುಮೇಹ ಹೊಂದಿರುವ ಜನರು ಹಾಲಿನ ಪ್ರಮಾಣದ ಬಗ್ಗೆ ಗಮನ ಹರಿಸಬೇಕು, ಏಕೆಂದರೆ ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಪ್ರತಿ ಆಹಾರದ ಪರಿಣಾಮವು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಭಿನ್ನವಾಗಿರುತ್ತದೆ. ಆದ್ದರಿಂದ, ದೇಹಕ್ಕೆ ಅನುಗುಣವಾಗಿ ಆಹಾರ ಸೇವಿಸಿ. ಸಾಮಾನ್ಯವಾಗಿ ಒಂದು ದಿನದಲ್ಲಿ 3 ಕಪ್ ಹಾಲು ಕುಡಿಯಬಹುದು, ಆದರೆ ಒಂದು ಕಪ್ ಹಾಲಿನ ನಂತರ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ. 

click me!