ನಿಮ್ಮ ಚರ್ಮ ಈ ಸೀಸನ್‌ನಲ್ಲೂ ತೇವವಾಗಿರಬೇಕೆಂದರೆ ನೀವು ನೀರನ್ನು ಹೇರಳವಾಗಿ ಕುಡಿಯಬೇಕು. ಚಳಿಗಾಲದಲ್ಲಿ ಬಾಯಾರಿಕೆ ಹೆಚ್ಚಾಗಿ ಆಗುವುದಿಲ್ಲವೆಂದು ಕುಡಿಯದೆ ಇರುತ್ತಾರೆ. ಹೀಗೆ ಮಾಡಬಾರದು. ಇದರಿಂದ ದೇಹ, ಚರ್ಮ ನಿರ್ಜಲೀಕರಣಗೊಂಡು ಸಮಸ್ಯೆಗಳು ಬರುತ್ತವೆ. ನೀರನ್ನು ಹೇರಳವಾಗಿ ಕುಡಿದರೆ ನಿಮ್ಮ ಚರ್ಮ ತೇವವಾಗಿರುತ್ತದೆ. ಇವುಗಳ ಜೊತೆಗೆ ನಿಮ್ಮ ಚರ್ಮ ಆರೋಗ್ಯಕರವಾಗಿರಲು ನೀವು ತಿನ್ನುವ ಆಹಾರದಲ್ಲಿ ವಿಟಮಿನ್ ಎ, ವಿಟಮಿನ್ ಡಿ, ಕಬ್ಬಿಣ, ಕ್ಯಾಲ್ಸಿಯಂ, ಜಿಂಕ್ ಪೋಷಕಾಂಶಗಳು ಹೆಚ್ಚಾಗಿ ಇರುವಂತೆ ನೋಡಿಕೊಳ್ಳಬೇಕು.