ಮಲಗೋ ಟೈಮಲ್ಲಿ ಮಲಗ್ಲಿಲ್ಲ ಅಂದ್ರೆ ಮುಂದೆ ನಿದ್ರೆಯೇ ಬರೋಲ್ಲ ನೋಡಿ!

First Published Jun 16, 2022, 10:38 AM IST

ಇತ್ತೀಚಿನ ದಿನಗಳಲ್ಲಿ ಜನರು ತಡವಾಗಿ ಮಲಗುತ್ತಾರೆ. ಅಲ್ಲದೇ ತಡವಾಗಿ ಮಲಗೋದಕ್ಕೇನೆ ಒಗ್ಗಿಕೊಂಡಿದ್ದಾರೆ. ಯುವಕರಲ್ಲಿ ಈ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ತುಂಬಾನೇ ಹೆಚ್ಚುತ್ತಿದೆ. ರಾತ್ರಿ ತಡವಾಗಿ ಮಲಗೋದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಪ್ರೊಕ್ರೆಸ್ಟಿನೇಶನ್ ಸಿಂಡ್ರೋಮ್ ಗೆ ಕಾರಣವಾಗುತ್ತೆ.

ಇತ್ತೀಚಿಗೆ ಕೆಲಸ ಮಾಡುವ ರೀತಿ ಮತ್ತು ಬದಲಾದ ಜೀವನ ಶೈಲಿಯಿಂದಾಗಿ (lifestyle) ಅನೇಕ ರೋಗಗಳು ಸೃಷ್ಟಿಯಾಗುತ್ತಿವೆ, ಇದು ಇಲ್ಲಿಯವರೆಗೆ ಜನರಿಗೆ ತಿಳಿದಿಲ್ಲ. ಮೆಟ್ರೋ ನಗರಗಳಲ್ಲಿ ಶಿಫ್ಟ್ ಕೆಲಸ ಮಾಡುವ ಜನರು ಒತ್ತಡ, ನಿದ್ರಾಹೀನತೆ (sleepless) ಮತ್ತು ಸ್ಥೂಲಕಾಯ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. 

ಕೆಲವು ಮನಶ್ಶಾಸ್ತ್ರಜ್ಞರು ಮತ್ತು ಮನೋವೈದ್ಯರು ನಡೆಸಿದ ಅಧ್ಯಯನದಲ್ಲಿ ಇತ್ತೀಚಿನ ದಿನಗಳಲ್ಲಿ 21-30 ವರ್ಷ ವಯಸ್ಸಿನವರಲ್ಲಿ ಪ್ರೊಕ್ರೆಸ್ಟಿನೇಶನ್ ಸಿಂಡ್ರೋಮ್ (procrastination syndrome) ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳುತ್ತಾರೆ. ಈ ಜನರಲ್ಲಿ ಹೆಚ್ಚಿನವರು ತಡವಾಗಿ ಕೆಲಸ ಮಾಡುತ್ತಾರೆ ಅಥವಾ ರಾತ್ರಿ ಮತ್ತು ಬೆಳಿಗ್ಗೆ ಪಾಳಿಯಲ್ಲಿ (night and day shift) ಕೆಲಸ ಮಾಡುತ್ತಾರೆ. ಇದರಿಂದ ಸಮಸ್ಯೆ ಹೆಚ್ಚುತ್ತದೆ.

ಪ್ರೊಕ್ರೆಸ್ಟಿನೇಶನ್ ಸಿಂಡ್ರೋಮ್ ಎಂದರೇನು?

 ಪ್ರೊಕ್ರೆಸ್ಟಿನೇಶನ್ ಸಿಂಡ್ರೋಮ್ (Procrastination Syndrome) ಎಂದರೆ ಒಬ್ಬ ವ್ಯಕ್ತಿಯು ತನ್ನ ನಿದ್ರೆಯ ಬದಲಾಗುತ್ತಿರುವ ಸಮಯದಿಂದಾಗಿ ನಿದ್ರೆ ಬಾರದಂತೆ ಆಗುವ ಮಾನಸಿಕ ಸ್ಥಿತಿಯಾಗಿದೆ. ಅನೇಕ ಬಾರಿ ನೀವು ಮಲಗಿದ್ದರೂ ಸಹ, ಉದ್ದೇಶಪೂರ್ವಕವಾಗಿ ನಿದ್ರೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಂತಹ ಜನರು ಏನನ್ನಾದರೂ ತಿನ್ನುವ ಮೂಲಕ, ಫಿಲಂ ನೋಡುವ ಮೂಲಕ ಅಥವಾ ಒಟಿಟಿಯಲ್ಲಿ ಹೆಚ್ಚು ಸಮಯ ಕಳೆಯುವ ಮೂಲಕ ನಿದ್ರೆಯಿಂದ ದೂರ ಉಳಿಯುತ್ತಾರೆ. 

ನೀವು ಈ ದಿನಚರಿಯನ್ನು ದೀರ್ಘಕಾಲದವರೆಗೆ ಇಟ್ಟುಕೊಂಡರೆ, ನೀವು ಬಯಸಿದರೂ ನೀವು ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಾರೆ. ಇದರಿಂದಾಗಿ ಆರೋಗ್ಯ ಸಮಸ್ಯೆ ಕಾಡುತ್ತದೆ. ಇದನ್ನು ಪ್ರೊಕ್ರೆಸ್ಟಿನೇಶನ್ ಸಿಂಡ್ರೋಮ್ ಎಂದು ಕರೆಯಲಾಗುತ್ತೆ.

ನೀವು ತಡವಾಗಿ ಮಲಗಲು ಏಕೆ ಅಭ್ಯಾಸ ಮಾಡಿಕೊಳ್ಳುತ್ತೀರಿ?

 ವಾಸ್ತವವಾಗಿ, ಮೆಟ್ರೋ ನಗರಗಳಲ್ಲಿ, ಜನರು ರಾತ್ರಿ ಕೆಲಸ ಮುಗಿಸಿ ಬೆಳಗ್ಗೆ ಅಥವಾ ಸಂಜೆ ಮನೆಗೆ ತಲುಪುತ್ತಾರೆ. ಕಚೇರಿಯಲ್ಲಿ ದಿನವಿಡೀ ಕೆಲಸ ಮಾಡಿ, ಬಳಿಕ ಟ್ರಾವೆಲ್‌ನಲ್ಲಿ ಅನೇಕ ಗಂಟೆಗಳ ಕಾಲ ಕಳೆದ ನಂತರ, ಜನರು ಎಲ್ಲಾ ಕೆಲಸಗಳಿಂದ ಮುಕ್ತವಾಗಿ ಮನೆ ತಲುಪಿದಾಗ, ಅವರು ಕೆಲವೊಮ್ಮೆ ತಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಲು ಬಯಸುತ್ತಾರೆ. 

ಕಚೇರಿಯಿಂದ ಬಂದ ತಕ್ಷಣ, ಮಲಗುವುದು ಕೆಲವೊಮ್ಮೆ ದಿನವಿಡೀ ಕೆಲಸ ಮಾಡಿ ಮಲಗೋದಾ? ನನಗಾಗಿ ಟೈಮ್ ಮೀಸಲಿಡೋದು ಬೇಡವೇ ಎಂದು ಅನಿಸಬಹುದು. ಅಂತಹ ಜನರು ನಿದ್ರೆ ತಪ್ಪಿಸುತ್ತಾರೆ. ಅವರು ತಡವಾಗಿ ಮನೆಗೆ ಬಂದಾಗ ಹೆಚ್ಚಾಗಿ ಕುಟುಂಬದ ಉಳಿದ ಸದಸ್ಯರು ನಿದ್ರೆ ಮಾಡುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಜನರು ತಡರಾತ್ರಿಯವರೆಗೆ (Late Night)ಏನಾದರೂ ವಿಡೀಯೋ, ಮೊಬೈಲ್ ನೋಡಿಕೊಂಡು ಸಮಯ ಕಳೆಯುತ್ತಾರೆ.

ತಡವಾಗಿ ಮಲಗೋದ್ರಿಂದ ಉಂಟಾಗುವ ಅನಾನುಕೂಲಗಳು

 ದೀರ್ಘಕಾಲದವರೆಗೆ ಎಚ್ಚರವಾಗಿರುವುದನ್ನು ನೀವು ಅಭ್ಯಾಸ ಮಾಡಿಕೊಂಡರೆ, ಅದು ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡಬಹುದು. ಇದರಿಂದ ಮಾನಸಿಕ (mental problem) ಮತ್ತು ಶಾರೀರಿಕವಾಗಿ ಹಲವಾರು ಸಮಸ್ಯೆಗಳು ಕಂಡು ಬರಬಹುದು. 

 ಇಂದು ಮುಂದೆ ನಿದ್ರೆ ಮಾಡಲು ಸಾಧ್ಯ ಆಗದೇ ಇರುವಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. 
ಅಂತಹ ಜನರಲ್ಲಿ ಬೊಜ್ಜು (obesity) ವೇಗವಾಗಿ ಹೆಚ್ಚಾಗುತ್ತದೆ. 
ತಡರಾತ್ರಿ ಮಲಗುವ ಜನರಲ್ಲಿ ಒತ್ತಡ (stress) ಹೆಚ್ಚಾಗುತ್ತದೆ. ಇದರಿಂದ ಮಾನಸಿಕವಾಗಿ ತೊಂದರೆ ಉಂಟಾಗುತ್ತೆ.

ಇದನ್ನು ದೀರ್ಘಕಾಲದವರೆಗೆ ಮಾಡುವುದರಿಂದ ನಿಮ್ಮ ಕೆಲಸದ ದಕ್ಷತೆ ಮೇಲೆ ಪರಿಣಾಮ ಬೀರುತ್ತದೆ.
ಅಂತಹ ಜನರಲ್ಲಿ, ಹೃದಯಾಘಾತ (heart attack) ಮತ್ತು ಹೃದಯ ಸ್ತಂಭನದ ಅಪಾಯವು ಹೆಚ್ಚಾಗುತ್ತದೆ.
ಆದುದರಿಂದ ಸರಿಯಾದ ಸಮಯಕ್ಕೆ ನಿದ್ರೆ ಮಾಡುವಂತಹ ಅಭ್ಯಾಸವನ್ನು ರೂಢಿ ಮಾಡಿಕೊಳ್ಳುವುದು ಉತ್ತಮ.

click me!