ಮದ್ವೆಯಾದ್ಮೇಲೆ ಬರೀ ಹೆಣ್ಮಕ್ಕಳಲ್ಲ, ಪುರುಷರೂ ಊದಿಕೊಳ್ಳೋದ್ಯಾಕೆ?

First Published | Mar 1, 2024, 1:55 PM IST

ಮದುವೆಯ ನಂತರ ಪುರುಷರ ತೂಕ ಹೆಚ್ಚಳು ಶುರುವಾಗುತ್ತದೆ,ಅನ್ನೋದು ಇತ್ತೀಚಿನ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ವಿಜ್ಞಾನಿಗಳ ಪ್ರಕಾರ, ಪುರುಷರು ಮದುವೆಯ ನಂತರ ಸೋಮಾರಿಯಾಗಲು ಪ್ರಾರಂಭಿಸುತ್ತಾರೆ. ಇನ್ನೂ ಕೆಲವು ಆಸಕ್ತಿಕರ ವಿಷಯಗಳ ಬಗ್ಗೆ ತಿಳಿಯೋಣ. 
 

ಮದುವೆಯಾದಾಗ ಮಹಿಳೆಯರು ಮತ್ತು ಪುರುಷರ ಜೀವನದಲ್ಲಿ ಅನೇಕ ಪ್ರಮುಖ ಬದಲಾವಣೆಗಳು (changes in life) ಉಂಟಾಗುತ್ತವೆ. ಯಾಕಂದ್ರೆ ಮದುವೆಯ ನಂತರ, ಇಬ್ಬರೂ ದೈಹಿಕ ಬದಲಾವಣೆಗಳು (Physical Changes) ಸೇರಿದಂತೆ ಅನೇಕ ಬದಲಾವಣೆಗಳಿಗೆ ಒಳಗಾಗೋದು ಸಹಜ. ಪುರುಷರನ್ನೇ ನೋಡಿ ಮದುವೆ ನಂತರ, ಪುರುಷರ ಹೊಟ್ಟೆ ಹೊರಬರಲು ಪ್ರಾರಂಭಿಸುತ್ತದೆ ಮತ್ತು ಅವರ ತೂಕ ಹೆಚ್ಚಾಗಲು(weight gain) ಪ್ರಾರಂಭಿಸುತ್ತದೆ. ಇದನ್ನು ನೀವೂ ನೋಡಿರಬಹುದು ಅಲ್ವಾ?. 
 

ಹೆಚ್ಚಾಗಿ ಜನರು ತೂಕ ಹೆಚ್ಚಾಗೋದಕ್ಕೂ, ಮದುವೆಗೂ ಯಾವುದೇ ಸಂಬಂಧವಿಲ್ಲ ಎಂದು ಭಾವಿಸುತ್ತಾರೆ, ಆದರೆ ಇತ್ತೀಚಿನ ಸಂಶೋಧನೆಯು ಬಹಳ ಶಾಕಿಂಗ್ ವಿಷಯಗಳನ್ನು ಬಹಿರಂಗಪಡಿಸಿದೆ. ಮದುವೆಯ ನಂತರ, ಪುರುಷರ ತೂಕ (weight gain in men) ಮತ್ತು ಬೊಜ್ಜು ಹೆಚ್ಚುತ್ತೆ ಎಂದು ಸಂಶೋಧಕರು ಹೇಳಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಮದುವೆಯ ನಂತರ ಮಹಿಳೆಯರ ತೂಕದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಆಗೋದಿಲ್ಲ.  
 

Tap to resize

ಇದಷ್ಟೇ ಅಲ್ಲ ಡೈಲಿ ಮೇಲ್ ವರದಿಯ ಪ್ರಕಾರ, ಚೀನಾದಲ್ಲಿ ನಡೆಸಿದ ಅಧ್ಯಯನವು ಮದುವೆಯ ನಂತರ ಪುರುಷರು ದಪ್ಪಗಾಗುತ್ತಾರೆ, ಜೊತೆಗೆ ಸೋಮಾರಿಯಾಗುತ್ತಾರೆ (laziness) ಎಂದು ಹೇಳಿದೆ. ಮದುವೆಯಾದ 5 ವರ್ಷಗಳಲ್ಲಿ ಪುರುಷರು ತೂಕ ಹೆಚ್ಚಾಗಲು ಪ್ರಾರಂಭಿಸುತ್ತಾರೆ ಅದಕ್ಕೆ ಕಾರಣ ಏನೆಂದರೆ ಈ ಸಮಯದಲ್ಲಿ ಅವರು ಹೆಚ್ಚು ಕ್ಯಾಲೊರಿ ಆಹಾರವನ್ನು ತಿನ್ನುತ್ತಾರೆ ಮತ್ತು ಕಡಿಮೆ ವ್ಯಾಯಾಮ ಮಾಡುತ್ತಾರೆ. 
 

ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳ ಪ್ರಕಾರ, ಮದುವೆ ಪುರುಷರ ಬಾಡಿ ಮಾಸ್ ಇಂಡೆಕ್ಸ್ ಅಂದರೆ ಬಿಎಂಐ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಮದುವೆಯ ನಂತರ, 5.2 ಪ್ರತಿಶತದಷ್ಟು ಪುರುಷರು ಹೆಚ್ಚು ದಪ್ಪಗಾಗುತ್ತಾರೆ, ಅದರಲ್ಲೂ ಬೊಜ್ಜು (obesity)ಪ್ರಮಾಣವು 2.5 ಪ್ರತಿಶತದಷ್ಟು ಹೆಚ್ಚುತ್ತೆ. ವಿಶೇಷವೆಂದರೆ ಸಂಶೋಧನೆಯಲ್ಲಿ ಮಹಿಳೆಯರಲ್ಲಿ ಅಂತಹ ಬದಲಾವಣೆ ಕಂಡು ಬರೋದಿಲ್ಲ. ಮದುವೆಯ ನಂತರ ತೂಕವನ್ನು ಹೆಚ್ಚಿಸುವಲ್ಲಿ ಪುರುಷರೇ ಮುಂದಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಮತ್ತೊಂದು ಸಂಶೋಧನೆಯ ಪ್ರಕಾರ ಮದುವೆ ನಂತರ ಹೆಚ್ಚುವ ತೂಕವನ್ನು ಸಾಮಾನ್ಯವಾಗಿ 'ಸಂತೋಷದ ಕೊಬ್ಬು' ಅಂದರೆ ಹ್ಯಾಪಿ ಫ್ಯಾಟ್  (Happy Fat) ಎಂದು ಕರೆಯಲಾಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ (European countries) ನಡೆಸಿದ ಅನೇಕ ಅಧ್ಯಯನಗಳಲ್ಲಿ ಇದು ದೃಢಪಟ್ಟಿದೆ. 
 

ಸಂಶೋಧನೆ ನಡೆಸುತ್ತಿರುವ ತಜ್ಞರ ಪ್ರಕಾರ, ಪುರುಷರು ವಯಸ್ಸಾದಂತೆ ಬೊಜ್ಜಿನ ಗಂಭೀರ ಅಪಾಯವನ್ನು ಎದುರಿಸಬಹುದು, ಆದ್ದರಿಂದ ಮದುವೆಯ ನಂತರ ಆರೋಗ್ಯಕರ ಆಹಾರ ಪದ್ಧತಿಯನ್ನು (healthy food habits) ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮದುವೆಯ ನಂತರವೂ ಪುರುಷರು ನಿಯಮಿತವಾಗಿ ವ್ಯಾಯಾಮ ಮಾಡಬೇಕು, ಇದರಿಂದ ಅವರ ದೇಹದ ತೂಕ ಹೆಚ್ಚಾಗುವುದಿಲ್ಲ.

ಎಕನಾಮಿಕ್ಸ್ ಅಂಡ್ ಹ್ಯೂಮನ್ ಬಯಾಲಜಿಯಲ್ಲಿ ಪ್ರಕಟವಾದ ಅಧ್ಯಯನವು, ಮದುವೆಯ ನಂತರದ ಮೊದಲ ಐದು ವರ್ಷಗಳಲ್ಲಿ ಪುರುಷರ ಬಿಎಂಐ ಹೆಚ್ಚಾಗುತ್ತಲೇ ಇರುವುದರಿಂದ, ನಂತರ ಅವರ ತೂಕ ಸ್ಥಿರಗೊಳ್ಳುತ್ತದೆ ಎಂದು ಕಂಡುಹಿಡಿದಿದೆ.ಅಷ್ಟೇ ಅಲ್ಲ  ಒಬ್ಬ ವ್ಯಕ್ತಿಯು ತನ್ನ ಇಂಟಿಮೇಟ್ ರಿಲೇಶನ್ ಶಿಪ್ (intimate relationship) ಬಗ್ಗೆ ಹೆಚ್ಚು ತೃಪ್ತಿಯನ್ನು ಹೊಂದಿದ್ದರೆ, ಆ ಪುರುಷರಲ್ಲಿ ಬೊಜ್ಜು ಹೆಚ್ಚುವ ಸಾಧ್ಯತೆ ಹೆಚ್ಚು ಅನ್ನೋದು ತಿಳಿದು ಬಂದಿದೆ. 
 

Latest Videos

click me!