ಹೆಚ್ಚಾಗಿ ಯಾರಾದ್ರೂ ನಿಮಗೆ ನೀವು ಆರೋಗ್ಯವಾಗಿದ್ದೀರಾ? ಏನು ಸಮಸ್ಯೆ ಇಲ್ಲವೇ? ಎಂದು ಕೇಳಿದಾಗ ನಾವು ನಾರ್ಮಲ್ ಆಗಿ ಇಲ್ಲ, ಇಲ್ಲಿವರೆಗೆ ಅಂತ ರೋಗ ಏನು ಬಂದಿಲ್ಲಾ ಆರಾಮವಾಗಿದ್ದೇನೆ ಎಂದು ಹೇಳ್ತೀವಿ ಅಲ್ವಾ?
ಆದ್ರೆ ನಿಜವಾಗಿಯೂ ನಾವು ಆರೋಗ್ಯದಿಂದ (healthy) ಇದ್ದೀವಾ? ನಮಗೆ ಯಾವುದೇ ಸಮಸ್ಯೆನೆ ಇಲ್ಲವಾ? ಆರೋಗ್ಯ ಸಮಸ್ಯೆ ಅಂದ್ರೆ ದೊಡ್ಡ ದೊಡ್ಡ ಕಾಯಿಲೆಗಳು ಮಾತ್ರನಾ? ಯಾಕೆ ಜನರು ಸಣ್ಣ ಸಣ್ಣ ರೋಗ ಲಕ್ಷಣಗಳನ್ನು ಪರಿಗಣಿಸೋದೆ ಇಲ್ಲ ಮುಂದೆ, ಅದುವೇ ದೊಡ್ಡ ಕಾಯಿಲೆಗೆ ದಾರಿ ಮಾಡಿಕೊಡುತ್ತೆ.
ಹೌದು, ಸಾಮಾನ್ಯವಾಗಿ ನಾವು ಕ್ಯಾನ್ಸರ್ (cancer), ಹೃದಯ ಸಮಸ್ಯೆ, ಡಯಾಬಿಟೀಸ್, ಬ್ಲಡ್ ಪ್ರೆಶರ್ ಈ ಮೊದಲಾದ ಸಮಸ್ಯೆ ಇದ್ರೆ ಮಾತ್ರ ನಾವು ಯಾವುದೋ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದೇವೆ ಅಂದುಕೊಳ್ಳುತ್ತೇವೆ. ಸಣ್ಣ ಪುಟ್ಟ ಸಮಸ್ಯೆಗಳನ್ನೆಲ್ಲಾ ಇಗ್ನೋರ್ ಮಾಡ್ತೀವಿ. ಅದುವೇ ನಾವು ಮಾಡೋ ತಪ್ಪು.
ಗಂಭೀರ ಸಮಸ್ಯೆಗಳು ನಿಜವಾಗಿ ಆರಂಭವಾಗುವುದು ಯಾವಾಗ ಗೊತ್ತಾ? ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡಾಗ. ಅಂದ್ರೆ ಸರಿಯಾಗಿ ನಿದ್ರೆ ಬಾರದೇ ಇರೋದು, ಕರುಳಿನ ಆರೋಗ್ಯ ಸರಿಯಾಗಿರದೇ ಇರೋದು, ಬ್ಲೋಟಿಂಗ್, ಸಿಹಿ ತಿನ್ನುವ ಹಂಬಲ, ತೂಕ ಏರಿಕೆ (weight gain) ಇವೆಲ್ಲವೂ ಗಂಭೀರ ಸಮಸ್ಯೆಗೆ ಮುನ್ನುಡಿ ಬರೆಯುವ ಕಾಯಿಲೆಗಳು.
ಇಷ್ಟೇ ಅಲ್ಲ ಜೀವನದಲ್ಲಿ ಖುಷಿಯೇ ಇಲ್ಲದಿರುವುದು, ಮೊಬೈಲ್ ಫೋನ್ ಗೆ ಹೆಚ್ಚು ಅಡಿಕ್ಟ್ ಆಗಿರೋದು, ಸೂರ್ಯನ ಬೆಳಕೇ ಮೈಮೇಲೆ ಬೀಳದಂತೆ ಒಳಗೆ ಇರೋದು, ಪ್ರತಿಯೊಂದು ವಿಷಯಕ್ಕೂ ಇರಿಟೇಟ್ ಆಗೋದು ಇವೆಲ್ಲವೂ ಕಾಯಿಲೆಯ ಆರಂಭಿಕ ಲಕ್ಷಣಗಳು.
ಈ ಲಕ್ಷಣಗಳು ನಮ್ಮ ಕಂಡು ಬಂದ ತಕ್ಷಣವೇ ನಾವು ಅಲರ್ಟ್ ಆಗಬೇಕು. ನಮ್ಮ ಜೀವನದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಇಂದಿನಿಂದಲೇ ಮಾಡುವ ಮೂಲಕ, ನಮ್ಮ ಆರೋಗ್ಯವನ್ನು ಸರಿಪಡಿಸಬಹುದು, ಆ ಮೂಲಕ ದೊಡ್ಡ ಕಾಯಿಲೆಗೆ ತುತ್ತಾಗೋದನ್ನು ತಡೆಯಬಹುದು.
ಪ್ರತಿದಿನ ವ್ಯಾಯಾಮ ಮಾಡೋದು, ವಾಕಿಂಗ್ ಮಾಡೋದು, ಮೆಡಿಟೇಶನ್ (meditation) ಮಾಡೋದು, ಉತ್ತಮ ಆಹಾರ ಸೇವನೆ, ಮನಸ್ಸಿಗೆ ಇಷ್ಟ ಬಂದಂತಹ ಕೆಲಸ ಮಾಡುವುದು, ಮನಸ್ಸನ್ನು ಆಕ್ಟೀವ್ ಆಗಿರುವಂತೆ ನೋಡಿಕೊಳ್ಳುವುದು, ಈ ಮೂಲಕ ನಾವು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸಬಹುದು.