ಕೆಲಸದಲ್ಲಿ stress ಆಯ್ತಾ? ತಲೆ ನೋವಾ? ತಲೆನೇ ಓಡ್ತಿಲ್ವಾ? ಬಾಸ್ ಏನೋ ಟಾಸ್ಕ್ ಕೊಟ್ಟಾಗ ಪ್ಯಾನಿಕ್ ಆಗಿ ಏನು ಮಾಡಬೇಕು ಎಂದು ತಿಳಿಯುತ್ತಿಲ್ವಾ? ಇಂಥ ಸಮಸ್ಯೆಗೆ ಹೆಬ್ಬೆರಳಿನಲ್ಲಿದೆ ಪರಿಹಾರ. ಇಲ್ಲಿದೆ ನೋಡಿ ಫಟಾಫಟ್ ರಿಸಲ್ಟ್
ನಮ್ಮ ಅಂಗೈನಲ್ಲಿಯೇ ಅಕ್ಯುಪಂಚರ್ ಪಾಯಿಂಟ್ಸ್ಗಳಿವೆ. ಅಕ್ಯೂಪ್ರೆಷರ್ ಎಂಬುದು ಒತ್ತಡದ ಮೂಲಕ ರೋಗಲಕ್ಷಣಗಳನ್ನು ನಿವಾರಿಸುವ ಒಂದು ಚಿಕಿತ್ಸಾ ಪದ್ಧತಿಯಾಗಿದೆ. ಅಂಗೈಯಲ್ಲಿನ ನಿರ್ದಿಷ್ಟ ಬಿಂದುಗಳನ್ನು (ಅಕ್ಯೂಪ್ರೆಷರ್ ಪಾಯಿಂಟ್) ಒತ್ತಿದರೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು, ಉದಾಹರಣೆಗೆ ತಲೆನೋವು, ವಾಕರಿಕೆ, ನಿದ್ರಾಹೀನತೆ ಇತ್ಯಾದಿ.
27
ಪ್ರಾಚೀನ ಚೀನೀ ಚಿಕಿತ್ಸಾ ವಿಧಾನ
ಅಕ್ಯೂಪ್ರೆಷರ್ ಒಂದು ಪ್ರಾಚೀನ ಚೀನೀ ಚಿಕಿತ್ಸಾ ವಿಧಾನ. ದೇಹದ ನಿರ್ದಿಷ್ಟ ಬಿಂದುಗಳಲ್ಲಿ (ಅಕ್ಯೂಪ್ರೆಷರ್ ಪಾಯಿಂಟ್) ಒತ್ತಡವನ್ನು ಉಂಟುಮಾಡಿ ಶಕ್ತಿಯ ಹರಿವನ್ನು ಹೆಚ್ಚಿಸುವ ಮೂಲಕ ನೋವು ಮತ್ತು ರೋಗಲಕ್ಷಣಗಳನ್ನು ನಿವಾರಿಸುವುದು ಇದರ ಉದ್ದೇಶ.
37
ಅಂಗೈಯಲ್ಲಿ ಆರೋಗ್ಯ
ಅಂಗೈಯಲ್ಲಿ ಅನೇಕ ಅಕ್ಯೂಪ್ರೆಷರ್ ಪಾಯಿಂಟ್‌ಗಳಿವೆ. ಉದಾಹರಣೆಗೆ, ಅಂಗೈಯ ಮಧ್ಯಭಾಗದಲ್ಲಿರುವ ಪಾಯಿಂಟ್ ಒತ್ತಿದರೆ ಜೀರ್ಣಾಂಗ ಸಂಬಂಧಿತ ಸಮಸ್ಯೆಗಳು, ಒತ್ತಡ, ಮತ್ತು ತಲೆನೋವಿಗೆ ಪರಿಹಾರ ಸಿಗುತ್ತದೆ. ಹೀಗೆ ಹಲವಾರು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ.
ಎಷ್ಟೋ ಸಂದರ್ಭಗಳಲ್ಲಿ ಕೆಲಸದ ಸಮಯದಲ್ಲಿ ಇಲ್ಲವೇ ಮನೆಯಲ್ಲಿಯಾದರೂ ಸಿಕ್ಕಾಪಟ್ಟೆ ಸ್ಟ್ರೆಸ್ ಆಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ತಲೆಯೇ ಓಡುವುದಿಲ್ಲ. Mind Block ಆಗಿ ಹೋಗುತ್ತದೆ. ಏನು ಮಾಡಬೇಕು ಎನ್ನುವುದೇ ತಿಳಿಯುವುದಿಲ್ಲ. ಒತ್ತಡ ಹೆಚ್ಚಾದಾಗಲೂ ಮುಂದೇನು ಎನ್ನುವುದು ಅರಿಯದೇ ಕಸಿವಿಸಿ ಆಗುವುದು ಇದೆ.
57
ಫಟಾಫಟ್ ಉಪಾಯ
ಇಂಥ ಸಂದರ್ಭಗಳಲ್ಲಿ ಫಟಾಫಟ್ ಉಪಾಯವನ್ನು ಹೇಳಲಾಗಿದೆ. ತಲೆನೋವು, ಮೈಂಡ್ ಬ್ಲಾಕ್, ಸ್ಟ್ರೆಸ್ (mind block, stress) ಆದಾಗ ಹೀಗೆ ಮಾಡಿ ಎಂದು ಇದರಲ್ಲಿ ತೋರಿಸಲಾಗಿದೆ. ಬಾಸ್ ಕೆಲಸ ಹೇಳಿದಾಗ ಏನು ಮಾಡಬೇಕು ಎಂದು ಸಡನ್ ಆಗಿ ತೋಚದೆ ಪ್ಯಾನಿಕ್ ಆಗಿದ್ದ ಸಂದರ್ಭದಲ್ಲಿಯೂ ಇದು ಪರಿಣಾಮಕಾರಿ ಎನ್ನಲಾಗಿದೆ.
67
ಹಾಗಿದ್ದರೆ ಏನು ಮಾಡಬೇಕು?
ಹಾಗಿದ್ದರೆ ಏನು ಮಾಡಬೇಕು? ಎಡಗೈ ಹೆಬ್ಬೆರಳಿನ ತುದಿಯನ್ನು ಪ್ರೆಸ್ ಮಾಡುತ್ತಾ ಇರಬೇಕು. 5-10 ನಿಮಿಷ ಹೀಗೆ ಮಾಡಿದರೆ ಶೀಘ್ರವಾಗಿ ಮನಸ್ಸು ನಿರಾಳವಾಗಿ, ಮುಂದಿನ ಕೆಲಸದ ಬಗ್ಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಇದು ಪ್ರಯೋಜನಕಾರಿಯಾಗುತ್ತದೆ. ಅದರ ವಿಡಿಯೋ ಈ ಕೆಳಗೆ ಇದೆ.
77
ಇಲ್ಲಿದೆ ನೋಡಿ ವಿಡಿಯೋ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.