ಕಾಲು ಸೆಳೆತ ಆಗಾಗ ಬರ್ತಿದ್ದರೆ ನಿರ್ಲಕ್ಷ್ಯ ಮಾಡ್ಬೇಡಿ. ಕಾಲು ನಿಮಗೆ ಮೊದಲೇ ಅಪಾಯದ ಸೂಚನೆ ನೀಡ್ತಿರುತ್ತದೆ. ಸಾಮಾನ್ಯ ಅಂದ್ಕೊಂಡಿದ್ದ ಕಾಲು ಸೆಳೆತಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ ಅಂದ್ರೆ ಮುಂದೆ ಅಪಾಯ ತಪ್ಪಿದ್ದಲ್ಲ.
ದೇಹದಲ್ಲಿ ಯಾವುದೇ ಸಣ್ಣಪುಟ್ಟ ನೋವು, ಸೆಳೆತ ಕಾಣಿಸಿಕೊಂಡ್ರೂ ಅದನ್ನು ನಿರ್ಲಕ್ಷ್ಯಿಸಬಾರದು. ನಮ್ಮ ದೇಹ ನಮಗೆ ಮೊದಲೇ ಸೂಚನೆ ನೀಡುತ್ತದೆ. ಆರಂಭದಲ್ಲಿಯೇ ನಾವು ಎಚ್ಚೆತ್ತುಕೊಂಡಲ್ಲಿ ಮುಂದಾಗುವ ಸಮಸ್ಯೆ ತಡೆಯಬಹುದು. ಕಾಲಿನ ಸೆಳೆತ ಕೂಡ ಇದ್ರಲ್ಲಿ ಒಂದು. ಕಾಲಿನಲ್ಲಿ ಆಗಾಗ ಸೆಳೆತ ಕಾಣಿಸಿಕೊಳ್ತಿದ್ದರೆ ಅದನ್ನು ನಿರ್ಜಲೀಕರಣ, ಆಯಾಸ ಅಥವಾ ಇಡೀ ದಿನ ನಿಂತು ಕೆಲ್ಸ ಮಾಡೋದ್ರಿಂದ ಬಂದಿದೆ ಅಂತ ಜನ ಭಾವಿಸ್ತಾರೆ. ಆದ್ರೆ ಹೃದ್ರೋಗ ತಜ್ಞರ ಪ್ರಕಾರ, ಕಾಲು ಸೆಳೆತ ಆಳವಾದ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ. ಅದನ್ನು ನಿರ್ಲಕ್ಷಿಸಿದ್ರೆ ಕೆಲವು ಗಂಭೀರ ಪರಿಣಾಮ ಉಂಟಾಗ್ಬಹುದು.
26
ಕಾಲು ಸೆಳೆತಕ್ಕೆ ನಾನಾ ಕಾರಣ
ರಕ್ತಪರಿಚಲನೆಯಿಂದ ಹಿಡಿದು ಪೌಷ್ಟಿಕಾಂಶ ಮತ್ತು ಹಾರ್ಮೋನುಗಳ ಸಮಸ್ಯೆಗಳವರೆಗೆ ಹಲವಾರು ಸಂಭಾವ್ಯ ಕಾರಣ ಇದಕ್ಕಿದೆ. ನಿಮಗೆ ಯಾಔ ಸಂದರ್ಭದಲ್ಲಿ ಕಾಲು ಸೆಳೆತ ಬರ್ತಿದೆ ಎಂಬುದರ ಮೇಲೆ ಕಾರಣ ಏನು ಎಂಬುದನ್ನು ಪತ್ತೆ ಮಾಡಲಾಗುತ್ತದೆ. ನೀವು ನಡೆಯವಾಗ ಅಥವಾ ವಿಶ್ರಾಂತಿಯಲ್ಲಿದ್ದಾಗ್ಲೂ ಕಾಲು ಸೆಳೆತವಿದ್ರೆ ಬಾಹ್ಯ ಅಪಧಮನಿ ಕಾಯಿಲೆಯ ಸಂಕೇತವಾಗಿರಬಹುದು. ಇದು ಕಾಲುಗಳಲ್ಲಿನ ಅಪಧಮನಿಗಳ ಅಡಚಣೆಯಿಂದ ಉಂಟಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ ಅದು ಕೈಕಾಲುಗಳಿಗೆ ಅಪಾಯವನ್ನುಂಟುಮಾಡಬಹುದು.
36
ಹಾರ್ಮೋನ್ ಏರುಪೇರು
ಎಲೆಕ್ಟ್ರೋಲೈಟ್ ಅಸಮತೋಲನ ಇದಕ್ಕೆ ಕಾರಣ ಆಗ್ಬಹುದು. ಮೆಗ್ನೀಸಿಯಮ್, ಪೊಟ್ಯಾಸಿಯಮ್ ಅಥವಾ ಕ್ಯಾಲ್ಸಿಯಂ ಕೊರತೆ ಆದಾಗ ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ನರ ಸರಿಯಾಗಿ ಕೆಲ್ಸ ಮಾಡದಿರಲು ಕೆಲವು ಔಷಧಿಗಳು, ಔಷಧಿಗಳ ಅತಿಯಾದ ಬಳಕೆ ಮತ್ತು ಥೈರಾಯ್ಡ್ ಅಸ್ವಸ್ಥತೆ, ರಕ್ತಹೀನತೆ ಮತ್ತು ವಿಟಮಿನ್ ಡಿ ಕೊರತೆ ಕೂಡ ಕಾರಣವಾಗುತ್ತದೆ. ಚಯಾಪಚಯ ಅಥವಾ ಹಾರ್ಮೋನುಗಳ ಸಮಸ್ಯೆಗಳು ಕಾಲು ಸೆಳೆತಕ್ಕೆ ಕಾರಣವಾಗಬಹುದು. ಭಾರೀ ವ್ಯಾಯಾಮ ಮಾಡಿದಾಗ, ನಿದ್ರೆಯ ಕೊರತೆಯಿಂದ ಸ್ನಾಯುಗಳು ಬಿಗಿಯಾಗುತ್ತವೆ. ಸ್ನಾಯುರಜ್ಜುಗಳು ಗಟ್ಟಿಯಾಗುತ್ತವೆ.
ಅತಿಯಾಗಿ ಕೆಲ್ಸ ಮಾಡಿದಾಗ, ದೇಹದಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಾಗ ಅಥವಾ ದೀರ್ಘಕಾಲ ಕುಳಿತ ನಂತರ ಕಾಡುವ ಕಾಲು ಸೆಳೆತ ಸಾಮಾನ್ಯವಾಗಿ ಸ್ವಲ್ಪ ಸಮಯ ಇರುತ್ತದೆ. ನಂತ್ರ ತಾನಾಗಿಯೇ ಇದು ಸರಿಯಾಗುತ್ತದೆ. ಇದಕ್ಕೆ ಯಾವುದೇ ಚಿಕಿತ್ಸೆ ಅಗತ್ಯವಿಲ್ಲ. ಆದ್ರೆ ಪದೇ ಪದೇ ಸಂಭವಿಸುವ ಸೆಳೆತಗಳು, ವಿಶೇಷವಾಗಿ ವಿಶ್ರಾಂತಿ ಪಡೆಯುವಾಗ ಅಥವಾ ಮಲಗಿರುವಾಗ ನಿರಂತರ ನೋವು, ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಕಾಡ್ತಿದ್ದರೆ ಅದನ್ನು ನೀವು ಗಂಭಿರವಾಗಿ ತೆಗೆದುಕೊಳ್ಳುವ ಅಗತ್ಯವಿದೆ.
56
ಚಿಕಿತ್ಸೆ ಯಾವಾಗ?
ಕಾಲು ಸೆಳೆತಗಳು ವಾರದಲ್ಲಿ ಹಲವಾರು ಬಾರಿ ಕಾಡಿದ್ರೆ, ನಿಮ್ಮ ನಿದ್ರೆಗೆ ತೊಂದ್ರೆಯುಂಟು ಮಾಡಿದ್ರೆ, ವಾರವಾದ್ರೂ ಸೆಳೆತ ಕಡಿಮೆ ಆಗಿಲ್ಲ ಎಂದಾಗ ಚಿಕಿತ್ಸೆ ಅಗತ್ಯವಿರುತ್ತದೆ. ದೌರ್ಬಲ್ಯ, ಊತ ಅಥವಾ ಚರ್ಮದ ಬಣ್ಣದಲ್ಲಿ ಬದಲಾವಣೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಹಿರಿಯರು ಮತ್ತು ಮಧುಮೇಹ, ಥೈರಾಯ್ಡ್ ಕಾಯಿಲೆ, ಮೂತ್ರಪಿಂಡ ಕಾಯಿಲೆ ಅಥವಾ ನರ ಸಮಸ್ಯೆಗಳ ಇತಿಹಾಸ ಹೊಂದಿರುವವರಿಗೆ ಪರೀಕ್ಷೆ ಅತ್ಯಗತ್ಯ.
66
ಏನು ಚಿಕಿತ್ಸೆ?
ಆರಂಭಿಕ ಪರೀಕ್ಷೆಯು ಸಾಮಾನ್ಯವಾಗಿ ಎಲೆಕ್ಟ್ರೋಲೈಟ್ಗಳು, ಮೂತ್ರಪಿಂಡದ ಕಾರ್ಯ, ರಕ್ತದಲ್ಲಿನ ಸಕ್ಕರೆ ಮಟ್ಟಗಳು ಮತ್ತು ಥೈರಾಯ್ಡ್ ಸ್ಥಿತಿಯನ್ನು ಪತ್ತೆ ಹಚ್ಚಲು ರಕ್ತ ಪರೀಕ್ಷೆ ಮಾಡಲಾಗುತ್ತದೆ. ಅಲ್ಲಿ ಸಮಸ್ಯೆ ಕಂಡು ಬಂದಲ್ಲಿ ನರದ ಬಗ್ಗೆ ಹೆಚ್ಚಿನ ಪರೀಕ್ಷೆ ಅಥವಾ ಎಲೆಕ್ಟ್ರೋಮ್ಯೋಗ್ರಫಿಯನ್ನು ಶಿಫಾರಸು ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.