ಅಧಿಕ ರಕ್ತದೊತ್ತಡಕ್ಕೆ ಈ ಹರ್ಬಲ್ ಟೀ ಬೆಸ್ಟ್, ಟ್ರೈ ಮಾಡಿ, ಕೂಲ್ ಆಗಿರಿ

First Published May 7, 2024, 6:25 PM IST

ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ ಸಮಸ್ಯೆ ಸಾಮಾನ್ಯ. ಈ ಸಮಸ್ಯೆ ನಿವಾರಿಸಲು ನಿಮಗಾಗಿ ಇಲ್ಲಿದೆ ಅತ್ಯುತ್ತಮವಾದ 7 ಹರ್ಬಲ್ ಟೀ ಬಗ್ಗೆ ಮಾಹಿತಿ. ಇವುಗಳನ್ನು ಸೇವಿಸುವ ಮೂಲಕ ಸಮಸ್ಯೆ ನಿವಾರಿಸಿ.
 

ಈ ಬ್ಯುಸಿ ಲೈಫ್‌ಸ್ಟೈಲ್‌ನಿಂದ ಅತಿಯಾದ ಒತ್ತಡ, ದೈಹಿಕ ನಿಷ್ಕ್ರಿಯತೆಯಿಂದ (Physical Passiveness) ಹೆಚ್ಚಿನ ಜನರಲ್ಲಿ ಅಧಿಕ ರಕ್ತದೊತ್ತಡ (hypertension) ಸಮಸ್ಯೆ ಕಾಡುತ್ತದೆ. ಈ ಸಮಸ್ಯೆ ನಿವಾರಿಸೋದಕ್ಕೆ ನೀವು ಹರ್ಬಲ್ ಟೀಗಳನ್ನು(herbal tea) ಟ್ರೈ ಮಾಡಬಹುದು. ಅದಕ್ಕಾಗಿ ಯಾವ ಚಹಾ ಸೇವಿಸಬಹುದು ಅನ್ನೋದನ್ನು ನೋಡೋಣ. 

ದಾಸವಾಳ ಚಹಾ (Hibiscus Tea) : ದಾಸವಾಳ ಚಹಾದಲ್ಲಿ ಆಂಟಿ ಆಕ್ಸಿಡೆಂಟ್ಸ್ ಅಧಿಕವಾಗಿದೆ. ಇದು ರಕ್ತನಾಳಗಳನ್ನು ರಿಲಾಕ್ಸ್ ಮಾಡುತ್ತದೆ. ಇದರಿಂದಾಗಿ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತೆ. 

ಹೋತಾರ್ನ್ ಟೀ (Hawthorn Tea): ಈ ಚಹಾ ಕುಡಿಯೋದರಿಂದ ರಕ್ತದ ಹರಿವು ಹೆಚ್ಚುತ್ತದೆ. ಅಷ್ಟೇ ಆಲ್ಲ ಹೃದಯದ ಮಸಲ್ ಗಳು ಸಹ ಬಲಗೊಳ್ಳುತ್ತದೆ. ಜೊತೆಗೆ ರಕ್ತದೊತ್ತಡವನ್ನು ಸಹ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. 
 

ತುಳಸಿ ಚಹಾ (Holy Basil Tea): ತುಳಸಿ ಚಹಾ ಸಹ ಅತ್ಯುತ್ತಮ ಹರ್ಬಲ್ ಟೀ ಆಗಿದ್ದು, ಇದನ್ನು ಸೇವಿಸೋದರಿಂದ ರಕ್ತನಾಳ ಆರಾಮವಾಗಿರುತ್ತೆ, ಜೊತೆಗೆ ರಕ್ತದೊತ್ತಡ ಕಡಿಮೆಯಾಗುತ್ತದೆ. 
 

ಮಿಸ್ಟ್ಲೆಟೋ ಟೀ (Mistletoe Tea) : ರಕ್ತನಾಳನ್ನು ಹಿಗ್ಗುವಂತೆ ಮಾಡುತ್ತದೆ, ಇದರಿಂದ ರಕ್ತದ ಹರಿವು (Blood Circulation) ಸರಾಗವಾಗಿ ಸಾಗುತ್ತದೆ. ಇದರಿಂದಾಗಿ ಬ್ಲಡ್ ಪ್ರೆಶರ್ (Blood Pressure) ಕೂಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. 
 

ಕ್ಯಾಟ್ಸ್ ಕ್ಲೋ ಟೀ (Cats Clow Tea): ಇದು ಕೂಡ ಒಂದು ರೀತಿಯ ಆಯುರ್ವೇದ ಗಿಡವಾಗಿದ್ದು, ಇದರ ಬೇರುಗಳಿಂದ ಮಾಡಿದ ಚಹಾ ಸೇವನೆಯು ದೇಹದ ಇಮ್ಯೂನಿಟಿ (Immunity Power) ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಕುಡಿಯೋದರಿಂದ ರಕ್ತನಾಳಗಳು ವಿಕಸಿತವಾಗುತ್ತದೆ, ಇದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. 
 

ಗಾರ್ಲಿಕ್ ಟೀ (Garlic tea): ಈ ಟೀ ಸಹ ರಕ್ತ ನಾಳಗಳು ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಅಲ್ಲದೇ ಮೂತ್ರವಿಸರ್ಜನೆ ಹೆಚ್ಚಿಸುತ್ತದೆ. ಇದರಿಂದ ದೇಹದಿಂದ ಬೇಡವಾದ ಅಂಶಗಳು ಹೊರ ಹೋಗುತ್ತವೆ. ಅಲ್ಲದೇ ರಕ್ತದೊತ್ತಡವನ್ನು ನಿಯಂತ್ರಿಸುತ್ತೆ. 

ಅರಶಿನ ಟೀ (Turmeric Tea): ಅರಿಶಿನ ಟೀ ನಿಯಮಿತವಾಗಿ ಸೇವಿಸೋದರಿಂದ ಉರಿಯೂತ ಕಡಿಮೆ ಮಾಡುತ್ತದೆ, ರಕ್ತ ನಾಳಗಳ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. 

click me!