ಕೀಲು ನೋವು, ಕಾಲು ನೋವು... ತಕ್ಷಣ ಪರಿಹಾರ ನೀಡುತ್ತೆ ಅಲ್ಯೂಮಿನಿಯಂ ಫಾಯಿಲ್
ಫುಡ್ ರಾಪ್ಪಿಂಗ್ ಮಾಡಲು ಅಲ್ಯೂಮಿನಿಯಂ ಫಾಯಿಲ್ ಬಳಸುವುದು ಎಲ್ಲರಿಗೂ ಗೊತ್ತು. ಆದರೆ ನೋವಿನಿಂದ ಕೂಡಿದ ದೇಹದ ಭಾಗಗಳನ್ನು ಕಟ್ಟಲು ಇದನ್ನು ಬಳಸಲು ಅನೇಕರು ಯೋಚಿಸುವುದಿಲ್ಲ. ಇದು ವಿಚಿತ್ರವಾದ ಆಲೋಚನೆಯಂತೆ ಕಾಣಿಸಬಹುದು, ಆದರೆ ಅಲ್ಯೂಮಿನಿಯಂ ಫಾಯಿಲ್ ಹಲವು ಸಮಸ್ಯೆ ನಿವಾರಣೆ ಮಾಡುತ್ತದೆ ಅನ್ನೋದು ತಿಳಿದಿದೆಯೇ?
ದೇಹದ ನೋವಿನ ಭಾಗಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತುವುದರಿಂದ ಅನೇಕ ಅನುಕೂಲಗಳು ಮತ್ತು ಪ್ರಯೋಜನಗಳಿವೆ. ಉದಾಹರಣೆಗೆ, ಇದು ಆಯಾಸಕ್ಕೆ ಅದ್ಭುತ ಪರಿಹಾರ. ಕೀಲು ನೋವನ್ನು ನಿವಾರಿಸುತ್ತದೆ, ಸುಟ್ಟ ಗಾಯದ ನೋವನ್ನು ಕಡಿಮೆ ಮಾಡುತ್ತದೆ ಮತ್ತು ಶೀತವನ್ನು ಗುಣಪಡಿಸಲೂ ಇದನ್ನು ಬಳಸಬಹುದು.
ಕಾಲಿಗೆ ತುಂಬಾ ಚಳಿ ಆಗುತ್ತಿದೆಯೇ?
ಕೆಲವೊಮ್ಮೆ ಕಾಲಿನ ಪಾದಗಳಿಗೆ ತುಂಬಾ ಚಳಿ ಆಗುತ್ತದೆ. ಹೀಗೆ ಆದರೆ ಐದರಿಂದ ಏಳು ಹಾಳೆ ಅಲ್ಯೂಮಿನಿಯಂ ಫಾಯಿಲ್ ತೆಗೆದುಕೊಂಡು ಅವುಗಳನ್ನು ಕಾಲುಗಳ ಸುತ್ತಲೂ ಕಟ್ಟಿಕೊಳ್ಳಿ. ಸುಮಾರು ಒಂದು ಗಂಟೆ ಅವುಗಳನ್ನು ಬಿಡಿ. ನಂತರ ಒಂದು ಗಂಟೆ ನಂತರ ಫಾಯಿಲ್ ಅನ್ನು ತೆಗೆದು ಹಾಕಿ. ಪ್ರತಿದಿನ ಸಂಜೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ಎರಡು ರಾತ್ರಿ ನಂತರ, ವ್ಯತ್ಯಾಸವನ್ನು ಗಮನಿಸಬಹುದು.
ಕೀಲು ನೋವು
ಕೀಲು ನೋವು ಕಾಣಿಸಿಕೊಂಡರೆ ಆ ಜಾಗಕ್ಕೆ ಅಲ್ಯೂಮಿನಿಯಂ ಫಾಯಿಲ್ ಹಾಳೆಯಲ್ಲಿ ಸುತ್ತಿಕೊಳ್ಳುವುದು ಸಹ ನೋವಿನ ವಿರುದ್ಧ ಸಹಾಯ ಮಾಡುತ್ತದೆ. ಫಾಯಿಲ್ ಅನ್ನು ಅದರ ಸ್ಥಳದಲ್ಲಿ ಸರಿಯಾಗಿ ಇರಿಸಲು ಸಹಾಯ ಮಾಡುತ್ತದೆ.
ಮಲಗುವ ಮುನ್ನ ನೋವಿನ ಜಾಯಿಂಟ್ ಸುತ್ತಲೂ ಫಾಯಿಲ್ ಸುತ್ತಿ ಮತ್ತು ರಾತ್ರಿ ಸಮಯದಲ್ಲಿ ಅದನ್ನು ಇರಿಸಿ. ಸುಮಾರು 7 ರಾತ್ರಿ ಇದನ್ನು ಮಾಡಿ. ಇದರಿಂದ ನೋವು ನಿವಾರಣೆಯಾಗುತ್ತದೆ.
ಆಯಾಸ
ಆಯಾಸದಿಂದ ಬಳಲುತ್ತಿದ್ದರೆ ನಾಲ್ಕು ಗಂಟೆ ಕಾಲ ಫ್ರೀಜರ್‌ನಲ್ಲಿ ಅಲ್ಯೂಮಿನಿಯಂ ಫಾಯಿಲ್‌ನ ಕೆಲವು ಹಾಳೆಗಳನ್ನು ಹಾಕಿ. ನಂತರ ಅವನ್ನು ನಿಮ್ಮ ಮುಖದ ಮೇಲೆ, ವಿಶೇಷವಾಗಿ ನಿಮ್ಮ ಕಣ್ಣು ರೆಪ್ಪೆಗಳು ಮತ್ತು ಕೆನ್ನೆ ಮೇಲೆ ಇರಿಸಿ. ಆರಾಮವಾಗಿರಿ .
ಇದು ತುಂಬಾ ಆರಾಮ ನೀಡುತ್ತದೆ. ಅರ್ಧ ಗಂಟೆ ಹಾಗೆ ಇರಿಸುವುದರಿಂದ ಅಲ್ಯೂಮಿನಿಯಂ ಫಾಯಿಲ್ ಉತ್ತಮ ಪರಿಣಾಮ ಬೀರುತ್ತದೆ. ಇದು ನಿಜವಾಗಿಯೂ ಕೆಲಸ ಮಾಡುತ್ತದೆ ಎಂದು ಅನೇಕರ ಅಭಿಪ್ರಾಯ!
ಅಲ್ಯೂಮಿನಿಯಂ ಫಾಯಿಲ್ ದೈನಂದಿನ ನೋವುಗಳನ್ನು ಕಡಿಮೆ ಮಾಡುತ್ತದೆ. ಆದರಿದು ಎಂದಿಗೂ ವೃತ್ತಿಪರ ವೈದ್ಯಕೀಯ ಆರೈಕೆಯ ಸ್ಥಾನವನ್ನು ಪಡೆಯಲಾರದು. ಇದು ಒಂದು ಬಾರಿಗೆ ಮಾತ್ರ ಆರಾಮ ನೀಡಬಲ್ಲದು. ಆದರೆ ಶಾಶ್ವತ ಪರಿಹಾರ ಸಾಧ್ಯವೇ ಇಲ್ಲ.
ಯಾವುದೇ ಮನೆಮದ್ದುಗಳನ್ನು ಪ್ರಯತ್ನಿಸುವ ಮೊದಲು ವೈದ್ಯರೊಂದಿಗೆ ಸಮಾಲೋಚಿಸಲು ಮರೆಯದಿರಿ ಮತ್ತು ವೈದ್ಯರು ಶಿಫಾರಸು ಮಾಡುವ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿ.