ಬೆಳ್ ಬೆಳಗ್ಗೇನೆ ಈ 5 ಕೆಲ್ಸ ಮಾಡಿ ಸಾಕು; ಯಾವ್ ಕಾಫಿ, ಜ್ಯೂಸು ಬೇಡ..ಆಕ್ಟಿವಾಗಿ, ಆರೋಗ್ಯವಾಗಿ ಇರ್ತೀರಾ!

Published : Aug 14, 2025, 12:03 PM ISTUpdated : Aug 14, 2025, 12:04 PM IST

“ಬೆಳಿಗ್ಗೆ ಬೆಳಿಗ್ಗೆನೇ  ಚಹಾ ಅಥವಾ ಕಾಫಿ ಕುಡಿಯುವುದರಿಂದ ಡಬಲ್ ಎನರ್ಜಿ ಬರುತ್ತದೆ”. ಈ ಆಲೋಚನೆಯೇ ಸಂಪೂರ್ಣವಾಗಿ ತಪ್ಪು. ಏಕೆಂದರೆ ಅದು ಅನೇಕ ರೋಗಗಳನ್ನು ಆಹ್ವಾನಿಸುತ್ತದೆಯೇ ಹೊರತು, ಒಂದು ಪರ್ಸೆಂಟು ಪ್ರಯೋಜನವಾಗಲ್ಲ.  ಮತ್ತೇನ್ ಮಾಡ್ಬೇಕು ಅಂತೀರಾ?.

PREV
16
ಇವೇ ನೋಡಿ ಆರೋಗ್ಯಕರ ಅಭ್ಯಾಸ

ನಿಮ್ಮ ಇಡೀ ದಿನ ಹೇಗಿರುತ್ತದೆ ಎಂಬುದು ನಿಮ್ಮ ಬೆಳಗಿನ ದಿನಚರಿಯ ಮೇಲೆ ಅವಲಂಬಿತವಾಗಿರುತ್ತದೆ. ಅಂದರೆ ನೀವು ಉತ್ತಮ ಅಭ್ಯಾಸವನ್ನ ಅಳವಡಿಸಿಕೊಳ್ಳಬೇಕಾದ ಸಮಯ ಇದು. ಆದರೆ ಅನೇಕ ಜನರಿದ್ದಾರೆ ಅವರಿಗೆ ಕಾಫಿ ಅಥವಾ ಚಹಾ ಕುಡಿಯದೆ ಬೆಳಗ್ಗೆ ಆರಂಭವಾಗಲ್ಲ ಅಥವಾ ಅದಿದ್ದರೇನೇ ಅವರ ಮುಂದಿನ ದಿನಚರಿ ಸಾಗುವುದು. ಮತ್ತೆ ಕೆಲವರು ಹಲ್ಲುಜ್ಜಿರಲ್ಲ ಆಗಲೇ ಕಾಫಿ, ಟೀ ಮತ್ತೊಂದು ಬೇಕು. ಅವರ ಪ್ರಕಾರ, ಚಹಾ ಅಥವಾ ಕಾಫಿ ಕುಡಿಯುವುದರಿಂದ ಡಬಲ್ ಎನರ್ಜಿ ಬರುತ್ತದೆ. ಈ ಆಲೋಚನೆಯೇ ಸಂಪೂರ್ಣವಾಗಿ ತಪ್ಪು. ಏಕೆಂದರೆ ಅದು ಅನೇಕ ರೋಗಗಳನ್ನು ಆಹ್ವಾನಿಸುತ್ತದೆಯೇ ಹೊರತು, ಒಂದು ಪರ್ಸೆಂಟು ಪ್ರಯೋಜನವಾಗಲ್ಲ. ಮತ್ತೇನ್ ಮಾಡ್ಬೇಕು ಅಂತೀರಾ?. ನೀವು ಬೆಳಗ್ಗೆ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ನೀವು ದಿನವಿಡೀ ಚೈತನ್ಯಶೀಲರಾಗಿರಬಹುದು.

26
ದಿನವಿಡೀ ಆಕ್ಟಿವ್ ಆಗಿರಿ

ಆರೋಗ್ಯಕರ ದಿನಚರಿ ಅನುಸರಿಸಿದರೆ ಎಷ್ಟೆಲ್ಲಾ ಲಾಭಗಳಿವೆ ಅಂದ್ರೆ ನೀವು ನಿಮ್ಮ ಕೆಲಸದ ಮೇಲೆ ಚೆನ್ನಾಗಿ ಗಮನಹರಿಸಬಹುದು. ಸೃಜನಶೀಲವಾಗಿ ಏನನ್ನಾದರೂ ಮಾಡಬಹುದು. ಇಂದು ನಾವು ಅಂತಹ ಕೆಲವು ಅಭ್ಯಾಸಗಳ ಬಗ್ಗೆ ನಿಮಗೆ ಹೇಳಲಿದ್ದೇವೆ. ಇದನ್ನು ಫಾಲೋ ಮಾಡಿದ್ರೆ ನೀವು ಚಹಾ ಅಥವಾ ಕಾಫಿ ಕುಡಿಯದೆ ದಿನವಿಡೀ ಆಕ್ಟಿವ್ ಆಗಿರಬಹುದು. ಹಾಗಾದ್ರೆ ಆ ಅಭ್ಯಾಸಗಳ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ...

36
ಬೆಳಗ್ಗೆ ಬೇಗ ಎದ್ದೇಳಿ

ನಮ್ಮ ಮನೆಯಲ್ಲಿ ಅಪ್ಪ-ಅಮ್ಮ, ಹಿರಿಯರು ಬೆಳಗ್ಗೆ ಬೇಗನೆ ಏಳುತ್ತಾರೆ ಅಲ್ಲವೇ. ಇಷ್ಟು ವಯಸ್ಸಾದರೂ ಅವರು ಹೆಚ್ಚು ಆಕ್ಟಿವ್ ಆಗಿರುವುದನ್ನು ನೀವು ಗಮನಿಸಿರಬೇಕು. ವಾಸ್ತವವಾಗಿ ಸೂರ್ಯೋದಯಕ್ಕೆ ಮೊದಲು ಎಚ್ಚರಗೊಳ್ಳುವುದರಿಂದ ನೀವು ಬೆಳಗಿನ ತಾಜಾ ಗಾಳಿಯನ್ನು ಸವಿಯಲು ಸಾಧ್ಯವಾಗುತ್ತದೆ. ಇದು ನಿಮ್ಮನ್ನು ಶಕ್ತಿಯುತವಾಗಿಡಲು ಅತ್ಯುತ್ತಮ ಮತ್ತು ಸುಲಭವಾದ ಮಾರ್ಗವಾಗಿದೆ. ಅಷ್ಟೇ ಅಲ್ಲ, ಬೆಳಗ್ಗೆ ಬೇಗನೆ ಏಳುವುದು ಮನಸ್ಸನ್ನು ಶಾಂತವಾಗಿರಿಸುತ್ತದೆ.

46
ವ್ಯಾಯಾಮ, ಧ್ಯಾನ ಮತ್ತು ನಡಿಗೆ

ಬೆಳಗ್ಗೆ ವ್ಯಾಯಾಮ ಮಾಡುವುದು ಒಳ್ಳೆಯದು. ನೀವು ನಡೆದಾಡಿದರೆ ಇನ್ನೂ ಉತ್ತಮ. ನೀವು ವ್ಯಾಯಾಮ ಮಾಡುವಾಗ ನಿಮ್ಮ ಪ್ರತಿಯೊಂದು ರಕ್ತನಾಳವೂ ಶಕ್ತಿಯಿಂದ ತುಂಬಿರುತ್ತದೆ. ಒಟ್ಟಾರೆಯಾಗಿ ಇದು ನಿಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿರಿಸುತ್ತದೆ. ಇದು ಸಂತೋಷದ ಹಾರ್ಮೋನುಗಳನ್ನು ಸಹ ಬಿಡುಗಡೆ ಮಾಡಿ, ದಿನವಿಡೀ ನಿಮ್ಮನ್ನು ಸಂತೋಷವಾಗಿರಿಸುತ್ತದೆ. ನೀವು ಧ್ಯಾನವನ್ನೂ ಮಾಡಬೇಕು. ಇದು ನಿಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ.

56
ತಣ್ಣೀರಿನಿಂದ ಸ್ನಾನ ಮಾಡಿ

ನೀವು ತಣ್ಣೀರಿನಿಂದ ಸ್ನಾನ ಮಾಡಿದರಂತೂ ನಿಮ್ಮ ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸಬಹುದು. ಇದು ದೇಹದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರೊಂದಿಗೆ ನಿಮ್ಮ ಮನಸ್ಥಿತಿಯೂ ಸುಧಾರಿಸುತ್ತದೆ. ನಿಮ್ಮ ದೇಹದ ಪ್ರತಿಯೊಂದು ರಂಧ್ರ ರಂಧ್ರವೂ ತಾಜಾತನದಿಂದ ತುಂಬಿರುತ್ತದೆ.

66
ಆರೋಗ್ಯಕರ ಉಪಹಾರ ಸೇವಿಸಿ

ಆರೋಗ್ಯಕರ ಉಪಹಾರ ಸೇವಿಸಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಇದು ನಿಮಗೆ ಸಾಕಷ್ಟು ಶಕ್ತಿಯನ್ನು ನೀಡುವುದರ ಜೊತೆಗೆ, ನಿಮ್ಮ ದೇಹಕ್ಕೆ ಸಂಪೂರ್ಣ ಪೋಷಣೆಯನ್ನು ಸಹ ಒದಗಿಸುತ್ತದೆ . ನೀವು ಉಪಾಹಾರಕ್ಕಾಗಿ ಜ್ಯೂಸ್, ಹಣ್ಣುಗಳು ಅಥವಾ ಮೊಟ್ಟೆಗಳನ್ನು ಸೇವಿಸಬಹುದು. ದಲಿಯಾ (Dalia) ಕೂಡ ಒಂದು ಉತ್ತಮ ಆಯ್ಕೆಯಾಗಿದೆ.

Read more Photos on
click me!

Recommended Stories