How to detect breast cancer early: ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ (Breast Cancer) ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಯಾವುದೇ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಬಹುದು.
ಸ್ತನ ಕ್ಯಾನ್ಸರ್ ಎನ್ನುವುದು ಸ್ತನದಲ್ಲಿನ ಅಸಹಜ ಜೀವಕೋಶಗಳು ನಿಯಂತ್ರಣವಿಲ್ಲದೆ ಬೆಳೆದು ಗಡ್ಡೆಯನ್ನು ರೂಪಿಸುವ ಒಂದು ಕಾಯಿಲೆಯಾಗಿದೆ. ಸ್ವಯಂ ಪರೀಕ್ಷೆ ಮತ್ತು ಮ್ಯಾಮೋಗ್ರಾಮ್‌ಗಳ ಮೂಲಕ ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ, ಬದುಕುಳಿಯುವ ಸಾಧ್ಯತೆ ಹೆಚ್ಚಾಗುತ್ತದೆ.
27
ಒಂದು ಗಡ್ಡೆಯಿಂದ ಪ್ರಾರಂಭವಾಗುತ್ತೆ
ಸ್ತನ ಕ್ಯಾನ್ಸರ್ ಸಾಮಾನ್ಯವಾಗಿ ಸ್ತನದಲ್ಲಿ ಒಂದು ಗಡ್ಡೆಯಿಂದ ಪ್ರಾರಂಭವಾಗುತ್ತದೆ. ಗಡ್ಡೆಯ ಗಾತ್ರ ಹೆಚ್ಚಾದಂತೆ, ಇದು ದೇಹದ ಇತರ ಭಾಗಗಳಿಗೆ ಹರಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಇದು ದುಗ್ಧರಸ ಗ್ರಂಥಿಗಳು (lymph nodes) ಮತ್ತು ರಕ್ತದ ಮೂಲಕ ಶ್ವಾಸಕೋಶ, ಯಕೃತ್ತು, ಮೆದುಳು ಮತ್ತು ಮೂಳೆಗಳಂತಹ ಇತರ ಅಂಗಗಳಿಗೂ ಹರಡಬಹುದು.
37
ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ
ಸ್ಥೂಲಕಾಯ, ವ್ಯಾಯಾಮದ ಕೊರತೆ, ಮಕ್ಕಳಿಲ್ಲದಿರುವುದು, ಕಡಿಮೆ ಅವಧಿಗೆ ಸ್ತನ್ಯಪಾನ ಮಾಡುವುದು, ಮದ್ಯಪಾನ ಮತ್ತು ಹಾರ್ಮೋನ್ ಚಿಕಿತ್ಸೆಗಳು ಸ್ತನ ಕ್ಯಾನ್ಸರ್‌ನ ಕೆಲವು ಪ್ರಮುಖ ಕಾರಣಗಳಾಗಿವೆ. BRCA ಟೆಸ್ಟ್ ಮೂಲಕ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಮುಂಚಿತವಾಗಿ ತಿಳಿದುಕೊಳ್ಳಬಹುದು. ಇದರಿಂದ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪ್ರಾರಂಭಿಸುವುದು ಮುಖ್ಯವಾಗಿದೆ.
ಸ್ತನಗಳಲ್ಲಿ ಅಥವಾ ಕಂಕುಳಲ್ಲಿ ನೋವಿಲ್ಲದ ಗಡ್ಡೆ, ಸ್ತನದ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ, ತೊಟ್ಟಿನ ಚರ್ಮದಲ್ಲಿ ಬದಲಾವಣೆ, ಬಣ್ಣ ಬದಲಾಗುವುದು, ಸುಕ್ಕುಗಟ್ಟುವುದು ಅಥವಾ ಒಳಗೆಳೆದುಕೊಳ್ಳುವುದು, ತೊಟ್ಟಿನಿಂದ ರಕ್ತ ಅಥವಾ ಇತರ ದ್ರವ ಬರುವುದು, ಸ್ತನ ಅಥವಾ ತೊಟ್ಟಿನ ಭಾಗದಲ್ಲಿ ಊತ ಅಥವಾ ಕೆಂಪಾಗುವುದು ಸ್ತನ ಕ್ಯಾನ್ಸರ್‌ನ ಲಕ್ಷಣಗಳಾಗಿವೆ.
57
ಎಲ್ಲಾ ಗಡ್ಡೆಗಳೂ ಕ್ಯಾನ್ಸರ್ ಆಗಿರಬೇಕಿಲ್ಲ
ಸ್ತನದಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಗಡ್ಡೆಗಳೂ ಕ್ಯಾನ್ಸರ್ ಆಗಿರಬೇಕಿಲ್ಲ. ಸ್ತನದಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಅಲ್ಲದ ಗಡ್ಡೆ ಎಂದರೆ ಫೈಬ್ರೊಡಿನೋಮಾ. ಸ್ತನದಲ್ಲಿ ಗಡ್ಡೆ ಅಥವಾ ಇತರ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.
67
ಮ್ಯಾಮೋಗ್ರಾಮ್ ಟೆಸ್ಟ್
ಮಹಿಳೆಯರು ಪ್ರತಿ ತಿಂಗಳು ತಮ್ಮ ಸ್ತನಗಳಲ್ಲಿ ಏನಾದರೂ ಬದಲಾವಣೆ ಅಥವಾ ಗಡ್ಡೆಗಳಿವೆಯೇ ಎಂದು ಸ್ವಯಂ ಪರೀಕ್ಷೆ ಮಾಡಿಕೊಳ್ಳಬೇಕು. ಮ್ಯಾಮೋಗ್ರಾಮ್ ಸ್ತನ ಕ್ಯಾನ್ಸರ್ ಸಾಧ್ಯತೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಇದು ಎಕ್ಸ್-ರೇ ಬಳಸಿ ಸ್ತನಗಳ ಚಿತ್ರವನ್ನು ತೆಗೆದುಕೊಳ್ಳುವ ಪರೀಕ್ಷೆಯಾಗಿದೆ. ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಕ್ಯಾನ್ಸರ್ ಪತ್ತೆಹಚ್ಚಲು ಇದು ಸಹಕಾರಿ. ಅಲ್ಟ್ರಾಸೌಂಡ್ ಸ್ಕ್ಯಾನ್, ಎಂಆರ್‌ಐ (MRI) ಮತ್ತು ಬಯಾಪ್ಸಿ (Biopsy) ಇತರ ಪರೀಕ್ಷೆಗಳಲ್ಲಿ ಸೇರಿವೆ.
77
ಸ್ತನ ಕ್ಯಾನ್ಸರ್ ಬರಲು ಕೆಲವು ಕಾರಣಗಳು
ಗರ್ಭನಿರೋಧಕ ಮಾತ್ರೆಗಳ ಅತಿಯಾದ ಬಳಕೆಯು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ. ಧೂಮಪಾನ ಕೂಡ ಸ್ತನ ಕ್ಯಾನ್ಸರ್‌ಗೆ ಕಾರಣವಾಗಬಹುದು. ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಿ. ಪರೋಕ್ಷ ಧೂಮಪಾನದಿಂದಲೂ (Passive smoking) ದೂರವಿರಿ. ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳ ಸಂಪರ್ಕಕ್ಕೆ ಬರುವುದು ಕೂಡ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.