ಸ್ವಿಗ್ಗಿ, ಜೆಪ್ಟೊ, ಬ್ಲಿಂಕಿಟ್
ಜೊಮ್ಯಾಟೋ ಮಾತ್ರ ಅಲ್ಲ, ಸ್ವಿಗ್ಗಿ, ಜೆಪ್ಟೊ, ಬ್ಲಿಂಕಿಟ್, Swish, Zing ಮತ್ತು Ola Dash ಕೂಡ ಫಾಸ್ಟ್ ಫುಡ್ ಡೆಲಿವರಿ ಸರ್ವಿಸ್ ಮಾಡುತ್ತಿವೆ. ಜೊಮ್ಯಾಟೋಗೆ ಸ್ಪರ್ಧಿ ಸ್ವಿಗ್ಗಿ, 15 ನಿಮಿಷದ ಫುಡ್ ಡೆಲಿವರಿಗಾಗಿ Snacc ಅನ್ನೋ ಆಪ್ ಪ್ರಾರಂಭ ಮಾಡಿದೆ.
ಮೊದಲು Bolt ಆಪ್ ಮೂಲಕ ಫಾಸ್ಟ್ ಫುಡ್ ಡೆಲಿವರಿ ಮಾಡ್ತಿದ್ದ ಸ್ವಿಗ್ಗಿ ಈಗ Snacc ಆಪ್ ಕೂಡ ಬಳಸುತ್ತಿದೆ. ಜೊಮ್ಯಾಟೋದ ಫಾಸ್ಟ್ ಡೆಲಿವರಿ ವಿಭಾಗ ಬ್ಲಿಂಕಿಟ್ ೧೦ ನಿಮಿಷದಲ್ಲಿ ಫುಡ್ ಡೆಲಿವರಿ ಮಾಡುತ್ತಿದೆ. ಈ ಕಂಪನಿ ತನ್ನದೇ ಅಂಗಡಿಗಳಿಂದ ಗ್ರಾಹಕರಿಗೆ ಫುಡ್ ಡೆಲಿವರಿ ಮಾಡುತ್ತಿದೆ.
ಜೆಪ್ಟೊ ಕೂಡ ಫಾಸ್ಟ್ ಫುಡ್ ಡೆಲಿವರಿ ಮಾಡುತ್ತಿದೆ. ಈ ಕಂಪನಿ ತನ್ನ ಕೆಫೆಗಳಿಂದ ಹತ್ತಿರದ ಜಾಗಕ್ಕೆ ಫುಡ್ ಡೆಲಿವರಿ ಮಾಡುತ್ತಿದೆ.