ತಿಂಗಳ ಕಾಲ ಮೊಟ್ಟೆ ತಿನ್ನದೇ ಇದ್ರೆ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತೆ?

First Published Feb 22, 2024, 1:53 PM IST

ನೀವು ಯಾವಾಗಲೂ ಮೊಟ್ಟೆ ತಿನ್ನೋರು ಆಗಿದ್ರೆ, ನಿಮ್ಮ ಊಟದಿಂದ ಮೊಟ್ಟೆಗಳನ್ನು ಸಂಪೂರ್ಣವಾಗಿ ತ್ಯಜಿಸಿದರೆ ದೇಹಕ್ಕೆ ಏನಾಗುತ್ತದೆ ಎಂಬುದನ್ನು ತಿಳ್ಕೊಳ್ಳೋದು ಮುಖ್ಯ. ನೀವು ಒಂದು ತಿಂಗಳವರೆಗೆ ಮೊಟ್ಟೆ ತಿನ್ನದಿದ್ದರೆ ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?  ಇಲ್ಲಿದೆ ಆ ಬಗ್ಗೆ ಸಂಪೂರ್ಣ ವರದಿ. 
 

ಮೊಟ್ಟೆ ತಿನ್ನೋದಕ್ಕೆ (eating eggs) ತುಂಬಾ ಟೇಸ್ಟಿಯಾಗಿರೋದು ಮಾತ್ರವಲ್ಲ, ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಅಗತ್ಯವಾದ ಪ್ರಮುಖ ಪೋಷಕಾಂಶಗಳನ್ನು ಸಹ ಇವು ನೀಡುತ್ತೆ. ಅಷ್ಟೇ ಅಲ್ಲ ಮೊಟ್ಟೆ ಭಾರತದ ಅನೇಕ ಮನೆಗಳಿಗೆ ಪ್ರಮುಖ ಆಹಾರವಾಗಿ ಮಾರ್ಪಟ್ಟಿವೆ, ಬ್ರೇಕ್ ಫಾಸ್ಟ್ ಗಂತೂ. ಮೊಟ್ಟೆ ಬೇಕೇ ಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಸಸ್ಯಾಹಾರವನ್ನು ಜೀವನಶೈಲಿಯ ಆಯ್ಕೆಯಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಮೊಟ್ಟೆ ಸೇರಿದಂತೆ ಯಾವುದೇ ರೀತಿಯ ಮಾಂಸ ಅಥವಾ ಡೈರಿ ಉತ್ಪನ್ನಗಳನ್ನು ಇದರಲಿ ಸೇರಿಸೋದೆ ಇಲ್ಲ
 

ನಮ್ಮ ದೈನಂದಿನ ಆಹಾರದಿಂದ ಮೊಟ್ಟೆಗಳನ್ನು ತೆಗೆದುಹಾಕುವುದು ದೇಹದ ಮೇಲೆ ಹಲವಾರು ಪರಿಣಾಮಗಳನ್ನು ಬೀರುತ್ತದೆ. ಮೊದಲನೆಯದಾಗಿ, ಮೊಟ್ಟೆಗಳು ಪ್ರೋಟೀನ್, ಅಗತ್ಯ ಅಮೈನೋ ಆಮ್ಲಗಳು, ಜೀವಸತ್ವಗಳು (ಬಿ 12, ಡಿ ಮತ್ತು ಕೋಲೀನ್ ನಂತಹ) ಮತ್ತು ಖನಿಜಗಳಿಂದ (ಸೆಲೆನಿಯಂ ಮತ್ತು ರಂಜಕದಂತಹ) ಸಮೃದ್ಧವಾಗಿರೋದರಿಂದ ಇದು ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ ಇದು ಸ್ನಾಯು ನಿರ್ವಹಣೆ, ಮಾನಸಿಕ ಆರೋಗ್ಯ (mental health) ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಬೆಂಬಲದ ಮೇಲೆ ಪರಿಣಾಮ ಬೀರುತ್ತದೆ. 
 

ಎರಡನೆಯದಾಗಿ, ಮೊಟ್ಟೆಗಳು ತಮ್ಮ ಪ್ರೋಟೀನ್ ಅಂಶದಿಂದಾಗಿ ಹೊಟ್ಟೆ ತುಂಬಿದ ಭಾವನೆಯನ್ನು ನೀಡುವುದರಿಂದ ಜನರಿಗೆ ಮತ್ತೆ ಮತ್ತೆ ತಿನ್ನುವ ಹಂಬಲ ಉಂಟಾಗೋದಿಲ್ಲ, ಆದರೆ ಇದನ್ನು ತಿನ್ನದೇ ಇದ್ದರೆ ಹೆಚ್ಚಿನ ತಿಂಡಿ ಅಥವಾ ಅತಿಯಾಗಿ ತಿನ್ನಲು ಕಾರಣವಾಗಬಹುದು. ಕೊನೆಯದಾಗಿ, ಮೊಟ್ಟೆಗಳು ಆಹಾರದ ಕೊಲೆಸ್ಟ್ರಾಲ್ ಅನ್ನು ಹೊಂದಿರುವುದರಿಂದ ಕೊಲೆಸ್ಟ್ರಾಲ್ ಮಟ್ಟದ (cholesterol level) ಮೆಲೆ ಪರಿಣಾಮ ಬೀರಬಹುದು.
 

ಒಂದು ವೇಳೆ ನೀವು ಮೊಟ್ಟೆಯನ್ನು ಸಂಪೂರ್ಣವಾಗಿ ತ್ಯಜಿಸುವ ಬಗ್ಗೆ ಯೋಚನೆ ಮಾಡಿದ್ರೆ, ಅದರ ಬದಲಾಗಿ ಮಾಂಸ, ಮೀನು, ಬೀನ್ಸ್, ಮಸೂರ, ಟೋಫು ಮತ್ತು ಬೀಜಗಳಂತಹ ಇತರ ಮೂಲಗಳಿಂದ ದೇಹಕ್ಕೆ ಬೇಕಾದ ಪ್ರೋಟೀನ್ ಪಡೆಯಬಹುದು. ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನು (balanced and healthy food) ಕಾಪಾಡಿಕೊಳ್ಳಲು ನೀವು ಈ ಪೋಷಕಾಂಶಗಳನ್ನು ಇತರ ಮೂಲಗಳಿಂದ ಪಡೆಯುತ್ತೀರಿ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಉದಾಹರಣೆಗೆ, ವಿಟಮಿನ್ ಡಿ ಬಲವರ್ಧಿತ ಹಾಲು ಮತ್ತು ಸಾಲ್ಮನ್ ನಂತಹ ಕೊಬ್ಬಿನ ಮೀನುಗಳಲ್ಲಿ ಕಂಡುಬರುತ್ತದೆ. ವಿಟಮಿನ್ ಬಿ 12 ಮಾಂಸ, ಮೀನು ಮತ್ತು ಡೈರಿ ಉತ್ಪನ್ನಗಳಲ್ಲಿ ಕಂಡುಬರುತ್ತದೆ, ಕಬ್ಬಿಣವು ಮಾಂಸ, ಕೋಳಿ, ಮೀನು, ಬೀನ್ಸ್ ಮತ್ತು ಧಾನ್ಯಗಳಲ್ಲಿ ಕಂಡುಬರುತ್ತದೆ. ಹಾಗಾಗಿ ಇವುಗಳನ್ನು ಸೇವಿಸೋದನ್ನು ಮರೆಯಬೇಡಿ. 

ನಿಮ್ಮ ಆಹಾರದಲ್ಲಿ ಮೊಟ್ಟೆ ಸೇರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ? 
ಮೊಟ್ಟೆಗಳು ಪೋಷಕಾಂಶಗಳ ಅತ್ಯುತ್ತಮ ಮೂಲ:
ಅವು ಅತ್ಯಂತ ಪೌಷ್ಟಿಕ ಆಹಾರಗಳಲ್ಲಿ ಒಂದು. ಅವು ನಿಮಗೆ ಅಗತ್ಯವಿರುವ ಪ್ರತಿಯೊಂದು ಪೋಷಕಾಂಶದ ಸ್ವಲ್ಪ ಭಾಗವನ್ನು ಹೊಂದಿರುತ್ತವೆ. ರಂಜಕ (Zinc), ವಿಟಮಿನ್ ಎ, ಬಿ, ಡಿ ಮತ್ತು ಇ ನಂತಹ ಜೀವಸತ್ವಗಳು (vitamins) ಮತ್ತು ಖನಿಜಗಳನ್ನು (Minerals) ಹೊಂದಿರುತ್ತವೆ.
 

ಪ್ರೋಟೀನ್ ಸಮೃದ್ಧವಾಗಿದೆ: ಒಂದು ದೊಡ್ಡ ಮೊಟ್ಟೆ 6 ಗ್ರಾಂ ಪ್ರೋಟೀನ್ ಅನ್ನು ಒದಗಿಸುತ್ತದೆ ಮತ್ತು ಇದನ್ನು ಉತ್ತಮ ಗುಣಮಟ್ಟದ ಪ್ರೋಟೀನ್ ಎಂದು ಪರಿಗಣಿಸಲಾಗುತ್ತದೆ ಯಾಕಂದ್ರೆ ಇದು ನಿಮ್ಮ ದೇಹಕ್ಕೆ ಪ್ರತಿದಿನ ಅಗತ್ಯವಿರುವ ಎಲ್ಲಾ ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ.
 

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು (Good for Health of Eyes): ಮೊಟ್ಟೆಗಳು ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಎನ್ನುವ ಅಂಶವನ್ನು ಹೊಂದಿರುತ್ತವೆ, ಅವು ಉತ್ಕರ್ಷಣ ನಿರೋಧಕಗಳಾಗಿದ್ದು, ಕಣ್ಣಿನ ಪೊರೆ (eye health) ಮತ್ತು ಮ್ಯಾಕ್ಯುಲರ್ ಕ್ಷೀಣತೆಯ ಅಪಾಯವನ್ನು ಕಡಿಮೆ ಮಾಡುತ್ತೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು (Heart Health): ಮೊಟ್ಟೆ ತಿನ್ನುವುದರಿಂದ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ ಮಾಡಬಹುದು ಏಕೆಂದರೆ ಇದರಲ್ಲಿರುವ ಒಮೆಗಾ 3-ಕೊಬ್ಬಿನಾಮ್ಲ ಹೃದಯಕ್ಕೆ ಪ್ರಯೋಜನಕಾರಿಯಾಗಿದೆ. ಮೊಟ್ಟೆ ಬೀಟೈನ್ ಮತ್ತು ಕೋಲೀನ್ ಸಹ ಹೊಂದಿರುತ್ತವೆ, ಇದು ಹೃದಯದ ಆರೋಗ್ಯವನ್ನು (healthy heart) ಉತ್ತೇಜಿಸುತ್ತದೆ.

ತೂಕ ಇಳಿಸಲು ಸಹಾಯ: ಮೊಟ್ಟೆಗಳಲ್ಲಿ ಹೆಚ್ಚಿನ ಪ್ರೋಟೀನ್ ಇದೆ ಮತ್ತು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಇದು ಒಟ್ಟಾರೆಯಾಗಿ ಕಡಿಮೆ ಕ್ಯಾಲೊರಿಗಳನ್ನು (low calory) ತಿನ್ನಲು ಕಾರಣವಾಗಬಹುದು.
 

ನಿಮ್ಮ ಆಹಾರದಿಂದ ಮೊಟ್ಟೆಗಳನ್ನು ಹೊರಗಿಡಲು ಬಯಸಿದ್ರೆ, ಈ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ… 
ಬೇಳೆಕಾಳುಗಳು:
ಅವು ಪ್ರೋಟೀನ್ ಮತ್ತು ಫೈಬರ್ ನ ಉತ್ತಮ ಮೂಲವಾಗಿದೆ. ಬೇಯಿಸಿದ ಒಂದು ಕಪ್ ಕಾಳುಗಳಲ್ಲಿ ಸುಮಾರು 18 ಗ್ರಾಂ ಪ್ರೋಟೀನ್ ಹೊಂದಿರುತ್ತವೆ.

ಕಡಲೆ: ಅವು ಪ್ರೋಟೀನ್ ಮತ್ತು ಫೈಬರ್ ನ ಸಮೃದ್ಧ ಮೂಲಗಳಾಗಿವೆ. ಒಂದು ಕಪ್ ನಲ್ಲಿ ಸುಮಾರು 15 ಗ್ರಾಂ ಪ್ರೋಟೀನ್ ಇರುತ್ತದೆ. 

ಟೋಫು: ಇದು ಪ್ರೋಟೀನ್ ನ ಉತ್ತಮ ಮೂಲವಾಗಿದೆ ಮತ್ತು ಎಲ್ಲಾ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡಿದೆ. ಇದು ಅರ್ಧ ಕಪ್ ಗೆ ಸುಮಾರು 10 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ.

ಕ್ವಿನೋವಾ: ಇದು ಸಂಪೂರ್ಣ ಪ್ರೋಟೀನ್ ಆಗಿದೆ, ಅಂದರೆ ಇದು ಎಲ್ಲಾ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಒಂದು ಕಪ್ ನಲ್ಲಿ ಸುಮಾರು 8 ಗ್ರಾಂ ಪ್ರೋಟೀನ್ ಇರುತ್ತದೆ

click me!