ಮಹಿಳೆಯರೇ ಎಚ್ಚರ..ಮಧುಮೇಹ ಮತ್ತು ಬಂಜೆತನಕ್ಕೆ ಇದೇ ಕಾರಣ!

Published : Feb 18, 2024, 02:39 PM IST

ಇತ್ತೀಚಿನ ಕೆಲ ವರ್ಷಗಳಲ್ಲಿ ಅನೇಕ ಮಹಿಳೆಯರು ಮಧುಮೇಹ ಮತ್ತು ಬಂಜೆತನದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಕಾರಣ ಏನೂಂತ ಹಲವರಿಗೆ ಗೊತ್ತಿರುವುದಿಲ್ಲ. ಆದರೆ ಬಹುತೇಕ ಮಹಿಳೆಯರು ಮಾಡೋ ಈ ತಪ್ಪು ಇಂಥಾ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ?

PREV
19
ಮಹಿಳೆಯರೇ ಎಚ್ಚರ..ಮಧುಮೇಹ ಮತ್ತು ಬಂಜೆತನಕ್ಕೆ ಇದೇ ಕಾರಣ!

ಆರೋಗ್ಯವಾಗಿರಲು ಆಹಾರಕ್ರಮವೂ ಸರಿಯಾಗಿರಬೇಕು. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸರಿಯಾದ ಪ್ರಮಾಣದಲ್ಲಿ ಆಹಾರವನ್ನು ತಿನ್ನಬೇಕು. ಆದರೆ ಅನೇಕ ಮಹಿಳೆಯರು ಕೆಲಸದ ಒತ್ತಡದಿಂದ ಸರಿಯಾದ ಸಮಯಕ್ಕೆ ಆಹಾರ ತಿನ್ನುವುದಿಲ್ಲ. ಇದು ನಂತರದ ವರ್ಷಗಳಲ್ಲಿ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. 

29

ವಿಶೇಷವಾಗಿ ಬೆಳಗಿನ ಉಪಾಹಾರವನ್ನು ಬಿಡಲೇಬಾರದು ಎನ್ನುತ್ತಾರೆ ತಜ್ಞರು. ಬೆಳಗಿನ ಉಪಾಹಾರವು ಬಹಳ ಮುಖ್ಯವಾದುದಾದರೂ, ಅನೇಕ ಜನರು ಉಪಹಾರವನ್ನು ಬಿಟ್ಟುಬಿಡುತ್ತಾರೆ.

39

ಬಿಡುವಿಲ್ಲದ ಕೆಲಸ, ಸಮಯದ ಅಭಾವ, ಬೆಳಗಿನ ಹಸಿವಿನ ಕೊರತೆ ಹೀಗೆ ಹಲವು ಕಾರಣಗಳಿಂದ ಅನೇಕರು ಉಪಹಾರವನ್ನು ತ್ಯಜಿಸುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ.

49

ಮಧ್ಯಂತರ ಉಪವಾಸದ ಭಾಗವಾಗಿ ಕೆಲವರು ಉಪಾಹಾರವನ್ನು ಸಹ ಬಿಡುತ್ತಾರೆ. ಮಧ್ಯಂತರ ಉಪವಾಸವು ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.

59

ಆದರೆ ಇದು ಎಲ್ಲರ ಆರೋಗ್ಯಕ್ಕೆ ಸಮಾನವಾಗಿ ಉಪಯುಕ್ತವಲ್ಲ ಎನ್ನುತ್ತಾರೆ ವೈದ್ಯರು. ಅದರಲ್ಲೂ ಮಹಿಳೆಯರಿಗೆ ಇಂಥಾ ಉಪವಾಸದಿಂದ ತೊಂದರೆಯೇ ಹೆಚ್ಚು

69

ಆರೋಗ್ಯ ತಜ್ಞರ ಪ್ರಕಾರ, ಬೆಳಿಗ್ಗೆ ನಿಯಮಿತವಾಗಿ ತಿನ್ನುದೇ ಇರುವ ಅಭ್ಯಾಸ ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆ, ಮಧುಮೇಹ ಮತ್ತು ಬಂಜೆತನದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞ ವೈದ್ಯರು ತಿಳಿಸುತ್ತಾರೆ.

79

ಮಹಿಳೆಯರು ದಿನವಿಡೀ ಕೆಲಸ ಮಾಡುವ ಕಾರಣ ಬೆಳಗಿನ ಉಪಾಹಾರ ಸೇವಿಸದಿದ್ದರೆ ಸುಸ್ತಾದ ಅನುಭವ ಪಡೆಯುತ್ತಾರೆ. ಕೆಲವು ಮಹಿಳೆಯರಿಗೆ ಋತುಚಕ್ರದ ಸಮಸ್ಯೆಗಳು ಹೆಚ್ಚಾಗಲು ಬೆಳಗಿನ ಉಪಾಹಾರವನ್ನು ಬಿಡುವುದು ಕೂಡಾ ಒಂದು ಕಾರಣವಾಗಿದೆ.

89

ಮಹಿಳೆಯರು ಪ್ರೋಟೀನ್ ಭರಿತ ಉಪಾಹಾರವನ್ನು ಸೇವಿಸಬೇಕು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಮೊಟ್ಟೆ ಮತ್ತು ಬೆಣ್ಣೆಯಂತಹ ಆಹಾರವನ್ನು ಸೇವಿಸಬೇಕು. ಏಕೆಂದರೆ ಅವು ಪ್ರೋಟೀನ್‌ನ ಉತ್ತಮ ಮೂಲಗಳಾಗಿವೆ. ಇದು ತುಂಬಾ ಹಸಿವಾಗದಂತೆ ತಡೆಯುತ್ತದೆ. ಹೃದಯದ ಆರೋಗ್ಯವನ್ನು ಸಹ ಕಾಪಾಡುತ್ತವೆ. 

99

ಮಹಿಳೆಯರು ಪ್ರೋಟೀನ್‌ಗಳ ಜೊತೆಗೆ ಕಾರ್ಬೋಹೈಡ್ರೇಟ್‌ಗಳು ಮತ್ತು ಆರೋಗ್ಯಕರ ಕೊಬ್ಬನ್ನು ಬೆಳಿಗ್ಗೆ ತಿನ್ನಲು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Read more Photos on
click me!

Recommended Stories