Leftover Dough: ಬೆರೆಸಿದ ಹಿಟ್ಟನ್ನು ಎಂದಿಗೂ 2-3 ಗಂಟೆಗಳಿಗಿಂತ ಹೆಚ್ಚು ಕಾಲ ಇಡಬಾರದು ಮತ್ತು ಯಾವಾಗಲೂ ತಾಜಾ ಹಿಟ್ಟಿನಿಂದ ಮಾಡಿದ ಚಪಾತಿಯನ್ನೇ ತಿನ್ನಬೇಕು. ಇದು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.
ರಾತ್ರಿ ಉಳಿದ ಅನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಅಂತ ವೈದ್ಯರು ಸಾರಿ ಸಾರಿ ಹೇಳ್ತಾರೆ. ಆದರೆ ನೀವು ರಾತ್ರಿ ಕಲಸಿಟ್ಟ ಹಿಟ್ಟಿನಿಂದ ಬೆಳಗ್ಗೆ ಚಪಾತಿ ಮಾಡಿ ತಿಂದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅದರಲ್ಲೂ ರಾತ್ರಿ ಚಪಾತಿ ಮಾಡಿದ ನಂತರ ಹಿಟ್ಟು ಉಳಿದಿದ್ದರೆ ಅದನ್ನು ಎಂದಿಗೂ ಫ್ರಿಡ್ಜ್‌ನಲ್ಲಿ ಇಡಬಾರದು.
27
ತಾಜಾ ಹಿಟ್ಟಿನಿಂದ ಮಾಡಿದ ಚಪಾತಿ ತಿನ್ನಿ
ಒಂದು ವೇಳೆ ನೀವು ಅದನ್ನು ಫ್ರಿಡ್ಜ್‌ನಲ್ಲಿ ಇರಿಸಿ ಬೆಳಗ್ಗೆ ಬಳಸಿದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಬೆರೆಸಿದ ಹಿಟ್ಟನ್ನು ಎಂದಿಗೂ 2-3 ಗಂಟೆಗಳಿಗಿಂತ ಹೆಚ್ಚು ಕಾಲ ಇಡಬಾರದು ಮತ್ತು ಯಾವಾಗಲೂ ತಾಜಾ ಹಿಟ್ಟಿನಿಂದ ಮಾಡಿದ ಚಪಾತಿಯನ್ನೇ ತಿನ್ನಬೇಕು. ಇದು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.
37
ಏನೆಲ್ಲಾ ಸಮಸ್ಯೆಯಾಗಬಹುದು?
ಫ್ರಿಡ್ಜ್‌ನಲ್ಲಿ ಇಟ್ಟ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಹೆಚ್ಚು. ಆದರೆ ಜನರು ತಮ್ಮ ಸಮಯವನ್ನು ಉಳಿಸಲು ರಾತ್ರಿ ಹಿಟ್ಟನ್ನ ಕಲಸಿಡುತ್ತಾರೆ. ಆದರೆ ಹಾಗೆ ಮಾಡುವುದರಿಂದ ಕೆಲವು ರೋಗಗಳನ್ನ ನೀವೇ ಆಹ್ವಾನಿಸದಂತೆ. ಅದು ಯಾರಿಗೂ ತಿಳಿದಿರುವುದಿಲ್ಲ. ಇಲ್ಲಿ ರಾತ್ರಿ ಕಲಸಿಟ್ಟ ಹಿಟ್ಟನ್ನ ಅದರಲ್ಲೂ ಫ್ರಿಡ್ಜ್‌ನಲ್ಲಿ ಇಟ್ಟ ಹಿಟ್ಟನ್ನ ಬಳಸುವುದರಿಂದ ಏನೆಲ್ಲಾ ಸಮಸ್ಯೆಯಾಗಬಹುದೆಂದು ನೋಡೋಣ..
ಧೀರ್ಘಕಾಲ ಕಲಸಿಟ್ಟ ಹಿಟ್ಟಿನಿಂದ ಮಾಡಿದ ಚಪಾತಿ ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು ಮತ್ತು ಅದರಲ್ಲಿರುವ ಬ್ಯಾಕ್ಟೀರಿಯಾಗಳು ಹೊಟ್ಟೆ ನೋವು, ಮಲಬದ್ಧತೆ, ಅನಿಲ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಹೆಚ್ಚಿಸಬಹುದು.
57
ಫುಡ್ ಪಾಯಿಸನ್
ಹಿಟ್ಟನ್ನು ಬೆರೆಸಿದ 3-4 ಗಂಟೆಗಳಲ್ಲಿ ಹುದುಗುವಿಕೆ ಪ್ರಾರಂಭವಾಗುತ್ತದೆ. ಇದರಿಂದಾಗಿ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ ಮತ್ತು ಹಿಟ್ಟಿನಲ್ಲಿರುವ ಬ್ಯಾಕ್ಟೀರಿಯಾಗಳು ಫುಡ್ ಪಾಯಿಸನ್‌ಗೆ ಕಾರಣವಾಗುತ್ತವೆ.
67
ದುರ್ಬಲ ರೋಗನಿರೋಧಕ ಶಕ್ತಿ
ಕಲಸಿಟ್ಟ ಹಿಟ್ಟಿನಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾ ಅಂಶ ಮತ್ತು ಕಡಿಮೆ ಜೀವಸತ್ವಗಳು ಮತ್ತು ಖನಿಜಗಳು ಇರುವುದರಿಂದ, ಇದನ್ನು ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
77
ಗಮನಿಸಿ...
ನೀವು ಆರೋಗ್ಯವಾಗಿರಲು ಬಯಸಿದರೆ, ಯಾವಾಗಲೂ ತಾಜಾ ಹಿಟ್ಟಿನಿಂದ ಮಾಡಿದ ಚಪಾತಿ ತಿನ್ನಲು ಪ್ರಯತ್ನಿಸಿ. ಈಗಾಗಲೇ ಕಲಸಿಟ್ಟ ಹಿಟ್ಟಿನಿಂದ ಮಾಡಿದ ಚಪಾತಿ ರುಚಿ ಕಡಿಮೆ. ಆದರೆ ತಾಜಾ ಹಿಟ್ಟಿನಿಂದ ಮಾಡಿದ ಚಪಾತಿ ವಿಭಿನ್ನ ರುಚಿಯನ್ನು ಹೊಂದಿರುತ್ತದೆ.