Salman Khan ಸಹೋದರಿಯ ರೆಸ್ಟೋರೆಂಟಲ್ಲಿ ತಿಂದ್ರೆ ಬರೋ ಬಿಲ್ ರೇಟಲ್ಲಿ ಮನೆ ಕಟ್ಟಿಸಬಹುದು, ಅಷ್ಟೊಂದು ದುಬಾರಿ!

Published : Nov 04, 2025, 01:27 PM IST

ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರ ಮುಂಬೈ ರೆಸ್ಟೋರೆಂಟ್ ಮರ್ಸಿಯಲ್ಲಿ ಊಟ ಮಾಡುವ ಪ್ಲ್ಯಾನ್ ನಿಮಗಿದ್ದರೆ, ನಿಮ್ಮ ಜೇಬಿನಿಂದ ಎಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಅನ್ನೋದು ಗೊತ್ತಾ? ಈ ಹಣದಲ್ಲಿ ಒಂದು ಮನೆಯನ್ನೆ ಕಟ್ಟಿಸಬಹುದು ನೋಡಿ.

PREV
110
ಸಲ್ಮಾನ್ ಖಾನ್ ಸಹೋದರಿಯ ಐಷಾರಾಮಿ ರೆಸ್ಟೋರೆಂಟ್

ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಒಡೆತನದ ಮುಂಬೈನಲ್ಲಿರುವ ಐಷಾರಾಮಿ ರೆಸ್ಟೋರೆಂಟ್ ಮರ್ಸಿಯ ಮೆನು ವೈರಲ್ ಅಗುತ್ತಿದೆ. ಈ ರೆಸ್ಟೋರೆಂಟ್ ಯುರೋಪಿಯನ್, ಇಟಾಲಿಯನ್ ಮತ್ತು ಕಾಂಟಿನೆಂಟಲ್ ಆಹಾರಗಳು ಸೇರಿದಂತೆ ವಿವಿಧ ರೀತಿಯ ಭಕ್ಷ್ಯಗಳು ಲಭ್ಯವಿದೆ. ಆದ್ದರಿಂದ, ನೀವು ಅಲ್ಲಿ ಊಟ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಪ್ರತಿಯೊಂದು ಖಾದ್ಯದ ಬೆಲೆ ಎಷ್ಟು ಅನ್ನೋದನ್ನು ತಿಳ್ಕೊಂಡ್ರೆ ಉತ್ತಮ.

210
ಡೊಮ್ ಪೆರಿಗ್ನಾನ್ ರೋಸ್ ಷಾಂಪೇನ್ ಬೆಲೆ 2 ಲಕ್ಷ ರೂಪಾಯಿ

ಈಗಾಗಲೇ ಮೆರ್ಸಿಯ ಮೆನುವಿನ ರೀಲ್ಸ್ ಗಳು ಸೋಶಿಯಲ್ ಮೀಡಿಯಾದಲ್ಲಿವ್ ಐರಲ್ ಆಗುತ್ತಿವೆ. ಮೆನುವಿನಲ್ಲಿರುವ ಅತ್ಯಂತ ದುಬಾರಿ ವಸ್ತುವೆಂದರೆ ಫ್ರಾನ್ಸ್‌ನಿಂದ ಬಂದಿರುವ ಡೊಮ್ ಪೆರಿಗ್ನಾನ್ ರೋಸ್ ಷಾಂಪೇನ್, ಇದರ ಬೆಲೆ 2 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.

310
ಟ್ರಫಲ್ ಪಾಸ್ತಾ ಬೆಲೆ ₹8,500.

ಆಹಾರ ಪದಾರ್ಥಗಳಲ್ಲಿ, ಹರ್ಬ್ -ಕ್ರಸ್ಟೆಡ್ ಲಾಂಬ್ ಲೋಯಿನ್ ಈ ರೆಸ್ಟೋರೆಂಟ್ ನ ವಿಶಿಷ್ಟ ಖಾದ್ಯವಾಗಿದ್ದು, ಇದು ಸುಮಾರು ₹10,000 ಬೆಲೆ ಹೊಂದಿದೆ. ಮತ್ತೊಂದು ವಿಶೇಷ ಆಹಾರ ಎದಂದರೆ ಅದು ಟ್ರಫಲ್ ಪಾಸ್ತಾ, ಇದರ ಬೆಲೆ ₹8,500.

410
ಟೆರಿಯಾಕಿ ಸಾಲ್ಮನ್ 4,000 ಬೆಲೆ

ಇನ್ನು ಇಲ್ಲಿನ ಜನಪ್ರಿಯ ಆಹಾರವಾದ ಟೆರಿಯಾಕಿ ಸಾಲ್ಮನ್ 4,000 ರೂಪಾಯಿಗಳಿಗೆ ಲಭ್ಯವಿದೆ. ನಾಲ್ಕು ಕೋರ್ಸ್‌ಗಳ ಪಿಜ್ಜಾ ಬೆಲೆ 1,100 ರೂಪಾಯಿಗಳು. ಮೆನುವಿನಲ್ಲಿರುವ ಇತರ ಪಿಜ್ಜಾಗಳ ಬೆಲೆ 800 ರೂಪಾಯಿಗಳಿಂದ 1,100 ರೂಪಾಯಿಗಳವರೆಗೆ ಇವೆ.

510
ವೈನ್‌ನ ಬೆಲೆ ಎಷ್ಟು?

ಇನ್ನು ಇಲ್ಲಿನ ಡ್ರಿಂಕ್ಸ್ ಬೆಲೆ ಕೇಳಿದ್ರೆ ಶಾಕ್ ಆಗೋದು ಖಚಿತಾ ಅಷ್ಟೊಂದು ದುಬಾರಿಯಾಗಿವೆ. ಒಂದು ಬಾಟಲಿ ವೈನ್ ಬೆಲೆ ₹188,550. ಅತ್ಯಂತ ದುಬಾರಿ ರೆಡ್ ವೈನ್ ₹140,000, ಅತ್ಯಂತ ದುಬಾರಿ ವೈಟ್ ವೈನ್ ₹69,000, ಮತ್ತು ಪ್ರೊಸೆಕೊ ಕೂಡ ₹50,000 ಬೆಲೆಯನ್ನು ಹೊಂದಿದೆ.

610
ಕಾಕ್‌ಟೇಲ್‌ಗಳ ಬೆಲೆ ಎಷ್ಟು?

ಮೆನುವಿನಲ್ಲಿರುವ ಎಲ್ಲಾ ಆಹಾರಗಳ ಬೆಲೆ ಅಚ್ಚರಿಗೊಳಿಸುತ್ತೆ. ಕಾಕ್‌ಟೇಲ್‌ಗಳ ಬೆಲೆ 900 ರಿಂದ 1,200 ರೂಪಾಯಿಗಳವರೆಗೆ ಇರುತ್ತದೆ, ಇದು 200,000 ರೂಪಾಯಿಗಳ ಷಾಂಪೇನ್‌ಗೆ ಹೋಲಿಸಿದರೆ ತುಂಬಾ ಚೀಪ್ ಆಗಿದೆ ಅಂತಾನೆ ಹೇಳಬಹುದು.

710
ಅನೇಕ ಸೆಲೆಬ್ರಿಟಿಗಳು ಇಲ್ಲಿ ಪಾರ್ಟಿ ಮಾಡುತ್ತಾರೆ

ಮರ್ಸಿ ಈಗಾಗಲೇ ಹೆಚ್ಚಿನ ಸಂಖ್ಯೆಯ ಬಾಲಿವುಡ್ ಸೆಲೆಬ್ರಿಟಿಗಳಿಗೆ ಆತಿಥ್ಯ ವಹಿಸಿದೆ. ರೆಸ್ಟೋರೆಂಟ್‌ನ ಮನಮೋಹಕ ವಾತಾವರಣ ಮತ್ತು ಐಷಾರಾಮಿ ಪ್ರೈವೆಸಿ ಇದನ್ನು ಕ್ಯಾಶುಯಲ್ ಡಿನ್ನರ್‌ಗಳಿಂದ ಹಿಡಿದು ಸೆಲೆಬ್ರಿಟಿಗಳ ಹುಟ್ಟುಹಬ್ಬದ ಪಾರ್ಟಿಗಳವರೆಗೆ ಎಲ್ಲದಕ್ಕೂ ನೆಚ್ಚಿನ ತಾಣವನ್ನಾಗಿ ಮಾಡಿದೆ.

810
ಮೆನು ಕೂಡ ಐಷಾರಾಮಿಯಾಗಿದೆ

ಈ ರೆಸ್ಟೋರೆಂಟ್ ನ ಮೆನುವಿನ ಹೆಚ್ಚಿನ ಬೆಲೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್ ಮತ್ತು ಚರ್ಚೆಗಳಿಗೆ ಆಹಾರವಾಗಿವೆ. ಆದರೆ, ಐಷಾರಾಮಿ ವಸ್ತುಗಳನ್ನು ಇಷ್ಟಪಡುವವರು ಮಾತ್ರ ಇಲ್ಲಿಗೆ ಬಂದು ವೈನ್‌ನಿಂದ ಹಿಡಿದು ಸಾಲ್ಮನ್ ವರೆಗೆ ಲಕ್ಷಗಟ್ಟಲೆ ಖರ್ಚು ಮಾಡುತ್ತಾರೆ. ಶಿಲ್ಪಾ ಶೆಟ್ಟಿ ಮತ್ತು ವಿರಾಟ್ ಕೊಹ್ಲಿ ರೆಸ್ಟೋರೆಂಟ್ ಗೆ ಹೋಲಿಕೆ ಮಾಡಿದ್ರೆ ಮರ್ಸಿ ತುಂಬಾನೆ ದುಬಾರಿ ಎನಿಸುತ್ತದೆ.

910
ಕೊಹ್ಲಿ ಒನ್ 8 ಕಮ್ಯೂನ್ ರೆಸ್ಟೋರೆಂಟ್

ವಿರಾಟ್ ಕೊಹ್ಲಿಯ ರೆಸ್ಟೋರೆಂಟ್ನ ಮೆನು ನೋಡಿದ್ರೂ ಶಾಕ್ ಆಗುತ್ತೆ. ಜೊಮಾಟೊ ಪ್ರಕಾರ, ಜುಹು ಔಟ್ಲೆಟ್ನಲ್ಲಿ ಆಹಾರದ ಬೆಲೆಗಳು ಹೀಗಿವೆ. ಸ್ಟೀಮ್ಡ್ ರೈಸ್ 318 ರೂಪಾಯಿ. ಸಾಲ್ಟೆಡ್ ಫ್ರೈಸ್ 348 ರೂಪಾಯಿ, ತಂದೂರಿ ರೊಟ್ಟಿ ಅಥವಾ ಬೇಬಿ ನಾನ್ 118 ರೂಪಾಯಿ. ಕಿಚಡಿ 620 ರೂಪಾಯಿ ಮತ್ತು ಮಸ್ಕಾರ್ಪೋನ್ ಚೀಸ್ಕೇಕ್ 748 ರೂಪಾಯಿಗೆ ಸಿಗ್ತಿದೆ. ಇಲ್ಲಿ ಸಾಕುಪ್ರಾಣಿಗಳಿಗೂ ಆಹಾರ ಸಿಗುತ್ತೆ. ಅದ್ರ ಬೆಲೆ 518 ರೂಪಾಯಿಯಿಂದ 818 ರೂಪಾಯಿವರೆಗಿದೆ.

1010
ಶಿಲ್ಪಾ ಶೆಟ್ಟಿಯ ಬಾಸ್ಟಿಯನ್ ರೆಸ್ಟೋರೆಂಟ್

ಶಿಲ್ಪಾ ಬಾಸ್ಟಿಯನ್ ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದು, ಕೊಹ್ಲಿ ರೆಸ್ಟೋರೆಂಟ್ ಗೆ ಹೋಲಿಕೆ ಮಾಡಿದ್ರೆ ಇದು ತುಂಬಾ ದುಬಾರಿ. ಇಲ್ಲಿ ಜಾಸ್ಮಿನ್ ಹರ್ಬಲ್ ಟೀ ಬೆಲೆ 920 ರೂಪಾಯಿ. ಬ್ರೇಕ್ಫಾಸ್ಟ್ ಟೀಗೆ 360 ರೂಪಾಯಿ. ಸ್ಪಾರ್ಕ್ಲಿಂಗ್ ವೈನ್ ಬೆಲೆ 1,59,500 ರೂಪಾಯಿವರೆಗಿದೆ. ಚಿಲ್ಲಿ ಗಾರ್ಲಿಕ್ ನೂಡಲ್ಸ್ಗೆ 675.. ಚಿಕನ್ ಬುರ್ರಿಟೋ 900 ರೂಪಾಯಿ.

Read more Photos on
click me!

Recommended Stories