Cooking Hacks: ಬೆಂಡೆಕಾಯಿ ಕಟ್ ಮಾಡುವಾಗ ಕೈಗೆ ಅಂಟುವ ಜಿಡ್ಡಿನಿಂದ ಬೇಸತ್ತಿದ್ದೀರಾ? ಅಥವಾ ಪಲ್ಯ ಮಾಡುವಾಗ ಅದು ಮುದ್ದೆಯಾಗುತ್ತಿದೆಯೇ? ಹಾಗಿದ್ದರೆ ಬೆಂಡೆಕಾಯಿಯನ್ನು ಸುಲಭವಾಗಿ ಕಟ್ ಮಾಡಲು ಮತ್ತು ಪಲ್ಯ ಗರಿಗರಿಯಾಗಿ ಬರಲು ಈ ಸ್ಮಾರ್ಟ್ ಕಿಚನ್ ಟ್ರಿಕ್ಸ್ ಅನುಸರಿಸಿ.
ಕೆಲವು ಸ್ಮಾರ್ಟ್ ಟಿಪ್ಸ್ ಬೆಂಡೆಕಾಯಿ ಪಲ್ಯ ಅಥವಾ ಫ್ರೈ ಎಂದರೆ ಎಲ್ಲರಿಗೂ ಇಷ್ಟ. ಆದರೆ ಅದನ್ನು ಕಟ್ ಮಾಡುವುದು ಮಾತ್ರ ದೊಡ್ಡ ತಲೆನೋವು. ಬೆಂಡೆಕಾಯಿಯಲ್ಲಿರುವ ನೈಸರ್ಗಿಕ ಜಿಡ್ಡು (Mucilage) ಕೈಗೆ, ಚಾಕುಗೆ ಮತ್ತು ಕಟಿಂಗ್ ಬೋರ್ಡ್‌ಗೆ ಅಂಟಿಕೊಂಡು ಎಲ್ಲವನ್ನೂ ಮೆಸ್ಸಿಯಾಗಿ ಮಾಡುತ್ತದೆ. ಈ ಜಿಡ್ಡಿನ ಸಮಸ್ಯೆಗೆ ಶಾಶ್ವತವಾಗಿ ಅಸ್ತು ಹಾಡಿ, ಬೆಂಡೆಕಾಯಿ ತುಂಡುಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಟ್ ಮಾಡಲು ಗೃಹಿಣಿಯರಿಗಾಗಿ ಇಲ್ಲಿವೆ ಕೆಲವು ಸ್ಮಾರ್ಟ್ ಟಿಪ್ಸ್.
26
1. ಸಂಪೂರ್ಣವಾಗಿ ಒಣಗಿಸುವುದು ಮುಖ್ಯ
1. ಸಂಪೂರ್ಣವಾಗಿ ಒಣಗಿಸುವುದು ಮುಖ್ಯ ಬೆಂಡೆಕಾಯಿ ಕಟ್ ಮಾಡುವಾಗ ಜಿಡ್ಡು ಹೆಚ್ಚಾಗಲು ಮುಖ್ಯ ಕಾರಣವೆಂದರೆ ಅದರಲ್ಲಿರುವ ನೀರಿನಂಶ ಅಥವಾ ತೇವಾಂಶ. ಬೆಂಡೆಕಾಯಿಗಳನ್ನು ತೊಳೆದ ತಕ್ಷಣ ಕಟ್ ಮಾಡಬೇಡಿ. ಅಡುಗೆ ಮಾಡುವ ಕನಿಷ್ಠ ಅರ್ಧ ಗಂಟೆ ಮುಂಚಿತವಾಗಿ ಬೆಂಡೆಕಾಯಿಗಳನ್ನು ತೊಳೆದು, ಒಣ ಕಾಟನ್ ಬಟ್ಟೆಯ ಮೇಲೆ ಹರಡಿ ನೀರು ಪೂರ್ತಿ ಆರಲು ಬಿಡಿ. ಬೆಂಡೆಕಾಯಿ ಎಷ್ಟು ಒಣಗಿರುತ್ತದೆಯೋ, ಜಿಡ್ಡು ಅಷ್ಟು ಕಡಿಮೆ ಇರುತ್ತದೆ.
36
2. ನಿಂಬೆ ರಸದ ಮ್ಯಾಜಿಕ್
2. ನಿಂಬೆ ರಸದ ಮ್ಯಾಜಿಕ್ ಬೆಂಡೆಕಾಯಿ ಕಟ್ ಮಾಡುವ ಮೊದಲು ನೀವು ಬಳಸುವ ಚಾಕುವಿನ ಬ್ಲೇಡ್‌ಗೆ ಸ್ವಲ್ಪ ನಿಂಬೆ ರಸವನ್ನು ಹಚ್ಚಿ. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ಬೆಂಡೆಕಾಯಿಯ ಜಿಡ್ಡನ್ನು ತಕ್ಷಣವೇ ವಿಭಜಿಸುತ್ತದೆ. ಇದರಿಂದ ತುಂಡುಗಳು ಚಾಕುಗೆ ಅಂಟಿಕೊಳ್ಳದೆ ಸುಲಭವಾಗಿ ಕಟ್ ಆಗುತ್ತವೆ. ನಡುವೆ ಜಿಡ್ಡು ಬರುತ್ತಿದೆ ಎನಿಸಿದರೆ ಮತ್ತೆ ಸ್ವಲ್ಪ ನಿಂಬೆ ರಸ ಸವರಬಹುದು.
3. ಅಡುಗೆ ಎಣ್ಣೆಯ ಬಳಕೆ ನಿಮ್ಮ ಬಳಿ ನಿಂಬೆಹಣ್ಣು ಇಲ್ಲದಿದ್ದರೆ, ಚಾಕು ಮತ್ತು ನಿಮ್ಮ ಕೈಗಳಿಗೆ ಒಂದು ಅಥವಾ ಎರಡು ಹನಿ ಅಡುಗೆ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿಕೊಳ್ಳಿ. ಎಣ್ಣೆಯು ಒಂದು ರಕ್ಷಣಾತ್ಮಕ ಪದರದಂತೆ ಕೆಲಸ ಮಾಡಿ ಜಿಡ್ಡು ಕೈಗೆ ಅಂಟಿಕೊಳ್ಳದಂತೆ ನೋಡಿಕೊಳ್ಳುತ್ತದೆ.
56
4. ಬಂಚ್ ಕಟಿಂಗ್ ವಿಧಾನ (Bunch Cutting)
4. ಬಂಚ್ ಕಟಿಂಗ್ ವಿಧಾನ (Bunch Cutting) ಒಂದೊಂದೇ ಬೆಂಡೆಕಾಯಿಯನ್ನು ಕಟ್ ಮಾಡುತ್ತಾ ಕುಳಿತರೆ ಸಮಯ ವ್ಯರ್ಥವಾಗುತ್ತದೆ. ಬದಲಾಗಿ, ಒಂದೇ ಗಾತ್ರದ 4 ರಿಂದ 5 ಬೆಂಡೆಕಾಯಿಗಳನ್ನು ಒಟ್ಟಿಗೆ ಹಿಡಿದುಕೊಳ್ಳಿ. ಅವುಗಳ ತುದಿಗಳನ್ನು ಒಟ್ಟಿಗೆ ಕತ್ತರಿಸಿ, ನಂತರ ಕಟಿಂಗ್ ಬೋರ್ಡ್ ಮೇಲೆ ಇಟ್ಟು ಒಟ್ಟಿಗೆ ಕಟ್ ಮಾಡಿ. ಇದರಿಂದ ಸಮಯ ಉಳಿಯುತ್ತದೆ ಮತ್ತು ಕೆಲಸವೂ ವೇಗವಾಗಿ ಆಗುತ್ತದೆ.
66
ಪಲ್ಯ ಬೇಯುತ್ತಿರುವಾಗ ಇಷ್ಟು ಮಾಡಿ
ಪಲ್ಯ ಬೇಯುತ್ತಿರುವಾಗ ಇಷ್ಟು ಮಾಡಿ ಬೆಂಡೆಕಾಯಿ ಪಲ್ಯ ಮಾಡುವಾಗ ಬಾಣಲೆಯ ಮೇಲೆ ಮುಚ್ಚಳವನ್ನು (Lid) ಮುಚ್ಚಬೇಡಿ. ಮುಚ್ಚಳ ಮುಚ್ಚಿದರೆ ಆವಿಯಾದ ನೀರು ಒಳಗೆ ಬಿದ್ದು ಜಿಡ್ಡು ಹೆಚ್ಚಾಗುತ್ತದೆ. ಪಲ್ಯ ಬೇಯುತ್ತಿರುವಾಗ ಒಂದು ಚಮಚ ಮೊಸರು ಅಥವಾ ಸ್ವಲ್ಪ ನಿಂಬೆ ರಸ ಹಾಕಿದರೆ ಬೆಂಡೆಕಾಯಿ ತುಂಡುಗಳು ಒಂದಕ್ಕೊಂದು ಅಂಟಿಕೊಳ್ಳದೆ, ಗರಿಗರಿಯಾಗಿ (Crispy) ಬರುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.