ಅತ್ಯಂತ ಕೊಳಕು ಸ್ಟ್ರೀಟ್ ಫುಡ್ ಸಿಗುವಂತಹ ದೇಶಗಳಿವು… ಭಾರತವೇ ನಂ 1 !

Published : May 15, 2025, 04:17 PM ISTUpdated : May 15, 2025, 04:21 PM IST

ಸ್ಟ್ರೀಟ್ ಫುಡ್ ಪ್ರಿಯರೇ ಗಮನವಿಟ್ಟು ಕೇಳಿ ಅತ್ಯಂತ ಕೊಳಕು ಬೀದಿ ಆಹಾರ ಸಿಗುವ ಪ್ರಪಂಚದ ಟಾಪ್ 10 ದೇಶಗಳಲ್ಲಿ ಭಾರತಕ್ಕಿದೆ ನಂ 1 ಪಟ್ಟ. ತಿನ್ನೋ ಮುನ್ನ ಹುಷಾರಾಗಿರಿ.   

PREV
111
ಅತ್ಯಂತ ಕೊಳಕು ಸ್ಟ್ರೀಟ್ ಫುಡ್ ಸಿಗುವಂತಹ ದೇಶಗಳಿವು… ಭಾರತವೇ ನಂ 1 !

ಸ್ಟ್ರೀಟ್ ಫುಡ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ. ಬೀದಿ ಬದಿ ತಿಂಡಿ ತಿನ್ನಲು ಎಲ್ಲರೂ ಇಷ್ಟ ಪಡ್ತಾರೆ. ಆದರೆ ಎಲ್ಲಾ ದೇಶಗಳಲ್ಲಿ ಶುಚಿ ರುಚಿಯಾದ ಸ್ಟ್ರೀಟ್ ಫುಡ್ ಸಿಗೋದೇ ಇಲ್ಲ. ಕೆಲವು ದೇಶಗಳಲ್ಲಂತೂ ಸ್ಟ್ರೀಟ್ ಫುಡ್ (street food) ತುಂಬಾನೆ ಗಲೀಜಾಗಿ ತಯಾರಾಗುತ್ತೆ. ಸ್ಟ್ರೀಟ್ ಫುಡ್ ತಿನ್ನೋದ್ರಲ್ಲಿ ನಂ 1 ಆಗಿರುವ ಭಾರತ ಅತ್ಯಂತ ಗಲೀಜಾಗಿರುವ ಸ್ಟ್ರೀಟ್ ಫುಡ್ ಹೊಂದಿರುವ ದೇಶ ಅನ್ನೋದು ಗೊತ್ತಾ ನಿಮಗೆ? 
 

211

ಭಾರತ : ಬೀದಿ ಆಹಾರ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಭಾರತ, ಜನದಟ್ಟಣೆ ಮತ್ತು ಸೀಮಿತ ಮೂಲಸೌಕರ್ಯಗಳಿಂದಾಗಿ ನೈರ್ಮಲ್ಯ ಸಮಸ್ಯೆಗಳನ್ನು ಎದುರಿಸುತ್ತಿವೆ, ಇದು ಮಾಲಿನ್ಯದ ಅಪಾಯಗಳಿಗೆ ಕಾರಣವಾಗುತ್ತದೆ. ಇಲ್ಲಿ ಕೆಲವೆಡೆ ಜನರು ಅತಿ ಕೆಟ್ಟ ರೀತಿಯಲ್ಲಿ ಸ್ಟ್ರೀಟ್ ಫುಡ್ ತಯಾರಿಸುತ್ತಾರೆ. ಕೆಟ್ಟ ಬೀದಿ ಆಹಾರ(dirtiest street food) ಸಿಗುವ ದೇಶಗಳ ಲಿಸ್ಟ್ ನಲ್ಲಿ ಭಾರತವು ಮೊದಲನೇ ಸ್ಥಾನದಲ್ಲಿದೆ. 
 

311

ಬಾಂಗ್ಲಾದೇಶ : ಆಹಾರವು ರುಚಿಕರವಾಗಿದ್ದರೂ, ಕಳಪೆ ನೀರಿನ ಗುಣಮಟ್ಟ ಮತ್ತು ಅಸಮರ್ಪಕ ತ್ಯಾಜ್ಯ ನಿರ್ವಹಣೆ ಹಾಗೂ  ಶುಚಿತ್ವವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿರೋದರಿಂದ ಬಾಂಗ್ಲಾದೇಶ (Bangladesh) ಕೆಟ್ಟ ಸ್ಟ್ರೀಟ್ ಫುಡ್ ಲಿಸ್ಟ್ ನಲ್ಲಿ ಎರಡನೇ ಸ್ಥಾನದಲ್ಲಿದೆ. 
 

411

ಈಜಿಪ್ಟ್ : ಕೋಶಾರಿಯಂತಹ ಜನಪ್ರಿಯ ಭಕ್ಷ್ಯಗಳನ್ನು ಪ್ರಪಂಚದಾದ್ಯಂತ ಇಷ್ಟಪಡುತ್ತಾರೆ, ಆದರೆ ತಾಜಾ ಪದಾರ್ಥಗಳು (frsh ingredients) ಮತ್ತು ನೈರ್ಮಲ್ಯ ಎಲ್ಲಾ ಕಡೆ ಇರದೇ ಇರುವುದರಿಂದ  ಇಲ್ಲಿನ ಸ್ಟ್ರೀಟ್ ಫುಡ್ ಅತಿ ಕೆಟ್ಟದಾಗಿರುವ ಲಿಸ್ಟ್ ನಲ್ಲಿ ಮೂರನೇ ಸ್ಥಾನದಲ್ಲಿದೆ. 

511

ಪಾಕಿಸ್ತಾನ : ಚಾಟ್ ಮತ್ತು ಸಮೋಸಾಗಳಂತಹ ಖಾರ ತಿಂಡಿಗಳಿಗೆ ಹೆಸರುವಾಸಿಯಾಗಿದೆ, ಆದರೆ ಸ್ವಚ್ಛತೆ ಬಗ್ಗೆ ಇಲ್ಲಿ ಗಮನ ಹರಿಸೋದಿಲ್ಲ. ಅಷ್ಟೇ ಯಾಕೆ ಇಲ್ಲಿ ಕಳಪೆ ನೀರಿನ ಪೂರೈಕೆ (poor water supply) ಕೂಡ ಆಗುತ್ತೆ.
 

611

ನೈಜೀರಿಯಾ : ಸೂಯಾ ದಂತಹ ಪ್ರಸಿದ್ಧ ಸ್ಟ್ರೀಟ್ ಫುಡ್ ದೊರಕುತ್ತಿದ್ದರೂ ಸಹ, ಅನುಚಿತ ಆಹಾರ ನಿರ್ವಹಣೆ ಮತ್ತು  ಗಲೀಜಾಗಿರುವ ಪರಿಸರದಿಂದಾಗಿ ಈ ದೇಶ ಐದನೇ ಸ್ಥಾನದಲ್ಲಿದೆ. 

711

ಇಂಡೋನೇಷ್ಯಾ : ಸ್ಯಾಟೇ ಮತ್ತು ನಾಸಿ ಗೊರೆಂಗ್‌ ನಂತಹ ತಿನಿಸುಗಳಿಗೆ ಹೆಸರುವಾಸಿಯಾದ ಇಂಡೋನೇಶ್ಯಾದಲ್ಲಿ ಅಶುದ್ಧ ಅಡುಗೆ ಪರಿಸರಗಳು (unhygienic places) ಮತ್ತು ಕಲುಷಿತ ನೀರಿನ ಬಳಕೆ ಯಥೆಚ್ಚವಾಗಿ ಆಗುತ್ತವೆ. .
 

811

ಫಿಲಿಪೈನ್ಸ್ : ಬಲೂಟ್ ನಂತಹ ಸ್ಟ್ರೀಟ್ ಫುಡ್ ಗಳಿಗೆ ಜನಪ್ರಿಯತೆ ಪಡೆದಿರುಅ ಫಿಲಿಪೈನ್ಸ್ ನಲ್ಲೂ ಸಹ ಆಹಾರ ನೈರ್ಮಲ್ಯ ಇಲ್ಲ, ಇದರ ಜೊತೆಗೆ ಆಹಾರ ಸಂಗ್ರಹಣೆ ಕೂಡ ಸರಿಯಾಗಿ ಮಾಡೋದಿಲ್ಲ. ಅಷ್ಟೇ ಅಲ್ಲ ಶುಚಿತ್ವ ಕೂಡ ಸರಿಯಾಗಿ ಮಾಡಲ್ಲ.

911

ಥೈಲ್ಯಾಂಡ್ : ಜನದಟ್ಟಣೆಯ ಆಹಾರ ಮಾರುಕಟ್ಟೆಗಳಿಗೆ (food market) ಹೆಸರುವಾಸಿಯಾಗಿರುವ ಥೈಲ್ಯಾಂಡಲ್ಲಿ,  ಶುಚಿತ್ವವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿವೆ ಎನ್ನುವ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿವೆ. 

1011

ಹೈಟಿ : ಗ್ರಿಯೋಟ್‌ನಂತಹ ಬೀದಿ ಆಹಾರ ಜನಪ್ರಿಯವಾಗಿದೆ, ಆದರೆ ಶುದ್ಧ ನೀರು ಮತ್ತು ನೈರ್ಮಲ್ಯ ಮೂಲಸೌಕರ್ಯಗಳ ಕೊರತೆಯಿಂದಾಗಿ ಆಹಾರ ತಿನ್ನೋದಕ್ಕೆ ಭಯ ಉಂಟಾಗುತ್ತೆ. 

1111

ಮೆಕ್ಸಿಕೋ : ಇನ್ನು ಕೆಟ್ಟ ಸ್ಟ್ರೀಟ್ ಫುಡ್ ಲಿಸ್ಟ್ ನಲ್ಲಿ 10ನೇ ಸ್ಥಾನದಲ್ಲಿರೋದು ಮೆಕ್ಸಿಕೋ. ಟ್ಯಾಕೋಗಳು ಮತ್ತು ಟ್ಯಾಮೆಲ್‌ಗಳಿಗೆ ಹೆಸರುವಾಸಿಯಾಗಿರುವ ಈ ಸ್ಥಳದಲ್ಲಿ, ಸ್ವಚ್ಛವಾದ ಅಡುಗೆ ಪರಿಸರಕ್ಕೆ ಸರಿಯಾದ ತಾಣ ಇಲ್ಲ. 

Read more Photos on
click me!

Recommended Stories