ನೀವು ಖರೀದಿಸಿರೋ ಮಾವಿನಹಣ್ಣಿಗೆ ಕೆಮಿಕಲ್ ಹಾಕಿದ್ದಾರೆಯೆ? ಹೀಗೆ ಚೆಕ್ ಮಾಡಿ

Published : May 15, 2025, 11:20 AM ISTUpdated : May 15, 2025, 11:33 AM IST

ಬೇಸಿಗೆಯಲ್ಲಿ ಜನರು ಮಾವಿನ ಹಣ್ಣುಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ವ್ಯಾಪಾರಿಗಳು ಹೆಚ್ಚಿನ ಆದಾಯಕ್ಕಾಗಿ ಕೆಮಿಕಲ್ ಮಿಕ್ಸ್ ಮಾಡ್ತಾರೆ. ನೀವು ಖರೀದಿಸಿರುವ ಮಾವಿನ ಹಣ್ಣಿಗೆ ಕೆಮಿಕಲ್ ಮಿಕ್ಸ್ ಮಾಡಿದ್ದಾರೆಯೇ? ಇಲ್ಲವೇ ಹೀಗೆ ಚೆಕ್ ಮಾಡಿ.   

PREV
19
ನೀವು ಖರೀದಿಸಿರೋ ಮಾವಿನಹಣ್ಣಿಗೆ ಕೆಮಿಕಲ್ ಹಾಕಿದ್ದಾರೆಯೆ? ಹೀಗೆ ಚೆಕ್ ಮಾಡಿ

ಮಾವಿನ ಹಣ್ಣು
ಬೇಸಿಗೆ ಕಾಲದಲ್ಲಿ ಮಾರುಕಟ್ಟೆಯಲ್ಲಿ ಎರಡು ರೀತಿಯ ಮಾವಿನ ಹಣ್ಣುಗಳು (Mango)ಲಭ್ಯವಿರುತ್ತವೆ, ಒಂದು ನೈಸರ್ಗಿಕವಾಗಿ ಮಾಗಿಸಿದರೆ ಹಣ್ಣು, ಇನ್ನೊಂದು ರಾಸಾಯನಿಕವಾಗಿ ಮಾಗಿಸಿದ ಹಣ್ಣು.
 

29

ರಾಸಾಯನಿಕ ಬೆರೆತ ಮಾವು
ಸಾಮಾನ್ಯವಾಗಿ ಜನರು ಎರಡರ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಹಾಗಾಗಿ ಮಾರುಕಟ್ಟೆಯಿಂದ ಕೆಮಿಕಲ್ ಬೆರೆತ ಮಾವಿನಹಣ್ಣನ್ನು (Chemical mixed mango) ಖರೀದಿಸುತ್ತಾರೆ.

39

ವ್ಯತ್ಯಾಸ ಗುರುತಿಸುವುದು ಹೇಗೆ?
ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣು ಮತ್ತು ನೈಸರ್ಗಿಕವಾಗಿ ಮಾಗಿದ ಮಾವಿನಹಣ್ಣುಗಳ (naturally ripened mango) ನಡುವೆ ನೀವು ಹೇಗೆ ವ್ಯತ್ಯಾಸ ಗುರುತಿಸಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

49

ಕ್ಯಾಲ್ಸಿಯಂ ಕಾರ್ಬೈಡ್
ಸಾಮಾನ್ಯವಾಗಿ ಅಂಗಡಿಯವರು ಕ್ಯಾಲ್ಸಿಯಂ ಕಾರ್ಬೈಡ್ (Calcium Carbide) ಎಂಬ ರಾಸಾಯನಿಕವನ್ನು ಬಳಸಿ ಮಾವಿನ ಕಾಯಿಯನ್ನು ಹಣ್ಣಾಗಿಸುತ್ತಾರೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
 

59

ನೀರಿನಲ್ಲಿ ಅದ್ದಿ ಗುರುತಿಸಿ
ರಾಸಾಯನಿಕಗಳನ್ನು ಬಳಸಿ ಮಾವಿನ ಹಣ್ಣುಗಳನ್ನು ಗುರುತಿಸಲು ನೀವು ಬಯಸಿದರೆ, ಒಂದು ಟಬ್‌ನಲ್ಲಿ ನೀರನ್ನು ತೆಗೆದುಕೊಂಡು ಮಾವಿನ ಹಣ್ಣುಗಳನ್ನು ನೀರಿನಲ್ಲಿ ಹಾಕಿ. ನಿಮ್ಮ ಮಾವಿನ ಹಣ್ಣುಗಳನ್ನು ರಾಸಾಯನಿಕಗಳನ್ನು (chemical) ಬಳಸಿ ಮಾಗಿಸಿದರೆ, ಅವು ನೀರಿನಲ್ಲಿ ತೇಲುತ್ತವೆ , ಮುಳುಗುವುದಿಲ್ಲ.

69

ಬಲವಾದ ಸುವಾಸನೆ
ನೈಸರ್ಗಿಕವಾಗಿ ಮಾಗಿದ ಮಾವಿನಹಣ್ಣುಗಳು ಬಲವಾದ ಸುವಾಸನೆಯನ್ನು ಹೊಂದಿರುತ್ತವೆ, ಆದರೆ ರಾಸಾಯನಿಕಗಳನ್ನು ಬಳಸಿದ ಮಾವಿನಹಣ್ಣುಗಳು ರಾಸಾಯನಿಕ ವಾಸನೆಯನ್ನು ಹೊಂದಿರುತ್ತವೆ.

79

ಹೊರಗಿನಿಂದ ಗಟ್ಟಿಯಾಗಿರುತ್ತದೆ
ನೈಸರ್ಗಿಕವಾಗಿ ಮಾಗಿದ ಮಾವಿನಹಣ್ಣುಗಳು ಒಳಗಿನಿಂದ ಹಣ್ಣಾಗಿರುತ್ತವೆ ಮತ್ತು ಹೊರಗಿನಿಂದ ಗಟ್ಟಿಯಾಗಿರುತ್ತವೆ ಆದರೆ ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣುಗಳು ಹೊರಗಿನಿಂದ ಹಣ್ಣಾದಂತೆ ಕಾಣುತ್ತೆ, ಆದರೆ ಒಳಗಡೆ ಸ್ವಲ್ಪ ಮೃದುವಾಗಿರುತ್ತವೆ.

89

ಬಣ್ಣದಲ್ಲಿ ವ್ಯತ್ಯಾಸ
ನೈಸರ್ಗಿಕವಾಗಿ ಮಾಗಿದ ಮಾವಿನಹಣ್ಣುಗಳು ಒಳಗಿನಿಂದ ಒಂದೇ ಬಣ್ಣವನ್ನು ಹೊಂದಿರುತ್ತವೆ, ಆದರೆ ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣುಗಳ ಒಳಗಿನ ಬಣ್ಣಗಳು ವಿಭಿನ್ನವಾಗಿರುತ್ತವೆ. 

99

ಬೇಗನೆ ಹಾಳಾಗುತ್ತವೆ
ನೈಸರ್ಗಿಕವಾಗಿ ಮಾಗಿದ ಮಾವಿನಹಣ್ಣುಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ, ಆದರೆ ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣುಗಳು ಬೇಗನೆ ಹಾಳಾಗುತ್ತವೆ.

Read more Photos on
click me!

Recommended Stories