ಡಸ್ಟ್ ಅಲರ್ಜಿ ಸಮಸ್ಯೆಯೇ? ಹಾಗಿದ್ರೆ ಈ ಫುಡ್ ಸೇವಿಸಿ

Published : Aug 05, 2022, 04:32 PM IST

ಹೆಚ್ಚಿನ ಜನಕ್ಕೆ ಈ ಡಸ್ಟ್ ಅಲರ್ಜಿ ಇರುತ್ತೆ. ಆದ್ರೆ ಯಾವತ್ತೂ ಧೂಳನ್ನು ಸಣ್ಣದೆಂದು ಪರಿಗಣಿಸುವ ತಪ್ಪನ್ನು ಮಾಡಬೇಡಿ, ಯಾಕೆಂದ್ರೆ ಅದು ತುಂಬಾ ಗಂಭೀರ ಅಲರ್ಜಿಗಳಿಗೆ ಕಾರಣವಾಗಬಹುದು. ಅಷ್ಟೇ ಅಲ್ಲದೇ ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಇದ್ದರೆ, ಸಮಸ್ಯೆ ದೀರ್ಘ ಕಾಲದವರೆಗೆ ಉಳಿಯಬಹುದು. ಆದ್ದರಿಂದ ನೀವು ಡಸ್ಟ್ ಅಲರ್ಜಿ ಹೊಂದಿದ್ದರೆ, ಈ ಆಹಾರಗಳನ್ನು ನಿಮ್ಮ ಡಯಟ್ ಲಿಸ್ಟ್ ನಲ್ಲಿ ಸೇರಿಸಿ.

PREV
110
ಡಸ್ಟ್ ಅಲರ್ಜಿ ಸಮಸ್ಯೆಯೇ? ಹಾಗಿದ್ರೆ ಈ ಫುಡ್ ಸೇವಿಸಿ

ಡಸ್ಟ್ (Dust)ಮನೆಯ ಹೊರಗೆ ಅಥವಾ ಒಳಗೆ ಇರುತ್ತೆ, ಈ ಎರಡೂ ರೀತಿಯ ಡಸ್ಟ್ ನಮ್ಮ ಆರೋಗ್ಯಕ್ಕೆ ಹಾನಿಕಾರಕ. ಮನೆಯಲ್ಲಿ ನಾವು ನಮ್ಮ ಕಣ್ಣುಗಳಿಂದ ನೇರವಾಗಿ ನೋಡಲು ಸಾಧ್ಯವಾಗದ ಅನೇಕ ಧೂಳಿನ ಕಣಗಳು ಇರುತ್ತವೆ. ಅಂತಹ ಧೂಳುಗಳು ಮತ್ತು ಮಾಲಿನ್ಯಕಾರಕಗಳು ಮನೆಯೊಳಗೆ ಕೆಟ್ಟ ವಾತಾವರಣವನ್ನು ಸೃಷ್ಟಿಸುತ್ತವೆ, ಇದರಿಂದ ಉಸಿರಾಟಕ್ಕೆ ತೊಂದರೆಯುಂಟಾಗುತ್ತದೆ. 

210

ಮನೆಯೊಳಗಿನ ಕೆಟ್ಟ ಗಾಳಿಯಿಂದಾಗಿ, ಅನೇಕ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ಅಸ್ತಮಾಕ್ಕೆ(Asthama) ನೇರವಾಗಿ ಸಂಬಂಧಿಸಿದೆ. ಒಂದು ವೇಳೆ ನಿಮಗೂ ಧೂಳಿನ ಅಲರ್ಜಿ ಇದ್ದರೆ, ಇದಕ್ಕಾಗಿ ನಿಮ್ಮ ಆಹಾರದಲ್ಲಿ ಕೆಲವು ರೀತಿಯ ಹಣ್ಣುಗಳು, ತರಕಾರಿಗಳು ಮತ್ತು ಮಸಾಲೆಗಳನ್ನು ಸೇರಿಸಿ, ಇದು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಹಾಗಿದ್ರೆ ನೀವು ಸೇವಿಸಬೇಕಾದ ಆಹಾರಗಳು ಯಾವುವು ಅನ್ನೋದನ್ನು ನೋಡೋಣ. 

310
ಮಧು(Honey)

ಜೇನುತುಪ್ಪದ ಸೇವನೆ ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಇದರ ಉರಿಯೂತ ಶಮನಕಾರಿ ಗುಣಲಕ್ಷಣಗಳು ಅಲರ್ಜಿ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ ಮತ್ತು ಅದರಲ್ಲಿ ಪರಿಹಾರವನ್ನು ಸಹ ಒದಗಿಸುತ್ತವೆ. ಆದುದರಿಂದ ನಿಯಮಿತವಾಗಿ ಜೇನು ಸೇರಿಸೋದನ್ನು ಮರೆಯಬೇಡಿ.

410
ಅರಿಶಿನ(Turmeric)

ಅರಿಶಿನವು ಉಪಶಮನಕಾರಿ ಮತ್ತು ರೋಗ ನಿರೋಧಕ ಶಕ್ತಿಯ ಗುಣಗಳನ್ನು ಹೊಂದಿದೆ. ಆದ್ದರಿಂದ ನೀವು ಧೂಳಿನ ಅಲರ್ಜಿ ಹೊಂದಿದ್ದರೆ, ಅರಿಶಿನವನ್ನು ವಿಶೇಷವಾಗಿ ನಿಮ್ಮ ಆಹಾರದಲ್ಲಿ ಸೇರಿಸಿ. ಅದು ನೀವು ಸೇವಿಸುವ ಅಡುಗೆ ಇರಬಹುದು, ಹಾಲು ಇರಬಹುದು, ಅದಕ್ಕೆ ಸ್ವಲ್ಪ ಅರಿಶಿನ ಸೇರಿಸೋದನ್ನು ಮರೆಯಬೇಡಿ. 

510
ಶುಂಠಿ(Ginger)

ಧೂಳಿನ ಅಲರ್ಜಿ ರೋಗಿಗಳಿಗೆ ಶುಂಠಿ ಅತ್ಯುತ್ತಮ ಸೂಪರ್ ಫುಡ್ ಆಗಿದೆ. ಧೂಳಿನ ಅಲರ್ಜಿಯಿಂದಾಗಿ ಉಂಟಾಗುವ ಮೂಗಿನ ದಟ್ಟಣೆ ಮತ್ತು ಊತ ಮೊದಲಾದ ಸಮಸ್ಯೆಗಳಿಗೆ ಶುಂಠಿ ಪರಿಹಾರವನ್ನು ಒದಗಿಸುತ್ತದೆ. ಆದುದರಿಂದ ಶುಂಠಿಯನ್ನು ಆಹಾರದಲ್ಲಿ ಸೇರಿಸಲು ಮರೆಯಬೇಡಿ.

610
ಟೊಮಾಟೋ(Tomato)

ಟೊಮೆಟೊದಲ್ಲಿರುವ ಲೈಕೋಪೀನ್ ಒಂದು ಉತ್ಕರ್ಷಣ ನಿರೋಧಕವಾಗಿದ್ದು, ಇದು ನಮ್ಮ ಜೀವಕೋಶಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ಟೊಮ್ಯಾಟೋವನ್ನು ನಿಮ್ಮ ಆಹಾರದಲ್ಲಿ ಒಂದಲ್ಲ, ಒಂದು ವಿಧಾನದಲ್ಲಿ ಸೇವಿಸಿ. 

710
ಗ್ರೀನ್ ಟೀ (Green Tea)

ನಿಯಮಿತವಾಗಿ ಗ್ರೀನ್ ಟೀ ಸೇವನೆಯು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ. ಅಲರ್ಜಿಗಳಿಂದ ಉಂಟಾಗುವ ಉಸಿರಾಟದ ಸಮಸ್ಯೆಗಳಿಗೆ ಗ್ರೀನ್ ಟೀ ಸೇವನೆಯು ಪ್ರಯೋಜನಕಾರಿಯಾಗಿದೆ. 

810
ಬೆಳ್ಳುಳ್ಳಿ(Garlic)

ಬೆಳ್ಳುಳ್ಳಿಯ ಪ್ರಯೋಜನಗಳು ಸಹ ಹೆಚ್ಚಾಗಿ ಶುಂಠಿಯಂತೆಯೇ ಇವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಕೆಲಸ ಮಾಡುತ್ತದೆ. ಬೆಳ್ಳುಳ್ಳಿಯನ್ನು ಹಸಿಯಾಗಿ ಅಥವಾ ಸುಟ್ಟು ಅಥವಾ ಅಡುಗೆಯಲ್ಲಿ ಬೆರೆಸಿ ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ. 
 

910
ದಾಲ್ಚಿನ್ನಿ(Dhalchini)

ದಾಲ್ಚಿನ್ನಿ ಸೇವನೆ ಅಲರ್ಜಿಯ ಲಕ್ಷಣಗಳನ್ನು ಸಹ ಕಡಿಮೆ ಮಾಡುತ್ತದೆ. ಆದ್ದರಿಂದ ಇದನ್ನು ನಿಮ್ಮ ಆಹಾರದ ಒಂದು ಭಾಗವನ್ನಾಗಿ ಮಾಡಿ ಮತ್ತು ಆರೋಗ್ಯಕರವಾಗಿರಿ. ದಾಲ್ಚಿನ್ನಿ ಚಹಾವನ್ನು ಸಹ ಮಾಡಿ ಸೇವನೆ ಮಾಡೋದು ಆರೋಗ್ಯಕ್ಕೆ ಒಳ್ಳೆಯದು.

1010
ಬೀಜಗಳು

ಡ್ರೈ ಫ್ರುಟ್ಸ್(Dry fruits) ಆರೋಗ್ಯಕ್ಕೆ ತುಂಬಾ ಉತ್ತಮ. ಇವು ಅನೇಕ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉರಿಯೂತದ ಸಮಸ್ಯೆಯನ್ನು ತೆಗೆದುಹಾಕುತ್ತದೆ. ಡಸ್ಟ್ ಅಲರ್ಜಿ ನಿವಾರಣೆಯಾಗುತ್ತೆ.
 

click me!

Recommended Stories