ಸ್ಟ್ರಾಬೆರಿಗಳಲ್ಲಿ(Strawberry) ಇರುವ ಬಯೋ ಆಕ್ಟಿವ್ ಸಂಯುಕ್ತ ಪೆಲಾರ್ಗೊನಿಡೈನ್ ಮೆದುಳಿನ ಸಮಸ್ಯೆಗೆ ಪರಿಹಾರ ನೀಡುತ್ತೆ ಎಂದು ಯುಎಸ್ ಮೂಲದ ಆರ್ಎಚ್ಯು ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ. ಮೆದುಳಿನ ಟೌ ಪ್ರೋಟೀನ್‌ನಲ್ಲಿ ಅಸಹಜ ಬದಲಾವಣೆಗಳಿಂದ ಅಲ್ಝೈಮರ್ ಉಂಟಾಗುತ್ತೆ. ಒಟ್ಟಲ್ಲಿ ಅಲ್ಝೈಮರ್ ಕಾಯಿಲೆ ನಿವಾರಿಸುವಲ್ಲಿ ಸ್ಟ್ರಾಬೆರಿ ಸಹಾಯ ಮಾಡುತ್ತೆ.
ಸ್ಟ್ರಾಬೆರಿ ತಿನ್ನುವುದರ ಪ್ರಯೋಜನಗಳು
ಖನಿಜಗಳು ಮತ್ತು ವಿಟಮಿನ್ಸ್ ಗಳಿಂದ(CItamins) ಸಮೃದ್ಧವಾಗಿರುವ ಜೊತೆಗೆ, ಸ್ಟ್ರಾಬೆರಿ ಆಂಟಿ ಒಕ್ಸಿಡಾಂಟ್ಸ್ ಹೊಂದಿರುತ್ತವೆ, ಇದು ದೇಹದ ನೋವನ್ನು ನಿವಾರಿಸಲು ಕೆಲಸ ಮಾಡುತ್ತೆ. ಅಷ್ಟೇ ಅಲ್ಲ ಸ್ಟ್ರಾಬೆರಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.
ಅದೇ ಸಮಯದಲ್ಲಿ ಸ್ಟ್ರಾಬೆರಿ ಹೃದಯ ರಕ್ತನಾಳದ ಆರೋಗ್ಯವನ್ನು ಸುಧಾರಿಸುವ ಕೆಲಸ ಮಾಡುತ್ತೆ. ಸ್ಟ್ರಾಬೆರಿ ಕೊಲೆಸ್ಟ್ರಾಲ್ (Cholestrol), ಕೊಬ್ಬು ಅಥವಾ ಸೋಡಿಯಂ ಹೊಂದಿರೋದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ, ಇದು ಕಡಿಮೆ ಕ್ಯಾಲೋರಿ ಹೊಂದಿರುವ ಹಣ್ಣಾಗಿದೆ. ಆದುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆ ಕೂಡ ಕಡಿಮೆ ಇದೆ.
ಸ್ಟ್ರಾಬೆರಿ ತಿನ್ನೋದರಿಂದ ತೂಕ(Weight) ಹೆಚ್ಚಾಗುತ್ತೆ ಎಂದು ನೀವು ಅನೇಕ ಬಾರಿ ಕೇಳಿರಬಹುದು, ಆದರೆ, ಆರೋಗ್ಯ ತಜ್ಞರ ಪ್ರಕಾರ, ಇದು ಕೇವಲ ಮಿಥ್ಯೆಯಾಗಿದೆ ಮತ್ತು ಸ್ಟ್ರಾಬೆರಿ ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಹೊಂದಿರುತ್ತವೆ, ಇದು ತ್ವರಿತವಾಗಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತೆ. ಇನ್ನು ಮುಂದೆ ಸ್ಟ್ರಾಬೆರಿ ತಿನ್ನುವಾಗ ತೂಕದ ಬಗ್ಗೆ ಯೋಚ್ನೆ ಮಾಡ್ಲೇ ಬೇಡಿ.
ಸ್ಟ್ರಾಬೆರಿ ವಿಟಮಿನ್-ಸಿ(Vitamin C) ಹೊಂದಿರುತ್ತೆ ಅನ್ನೋದು ನಿಮಗೆ ಗೊತ್ತಿದೆ ಅಲ್ವಾ?, ಇದರಲ್ಲಿರುವ ವಿಟಾಮಿನ್ ಸಿ ವಿವಿಧ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತೆ. ಇದು ವಿವಿಧ ರೀತಿಯ ಆಂಟಿ ಇಂಪ್ಲಾಮಟೋರಿ ಎಂಜೈಮ್ ಮತ್ತು ಆಂಟಿ ಒಕ್ಸಿಡಾಂಟ್ಸ್ ಸಹ ಹೊಂದಿರುತ್ತೆ, ಇದರಿಂದ ಸುಲಭವಾಗಿ ತೂಕ ಇಳಿಸಬಹುದು.
ಅಲ್ಲದೇ ಸ್ಟ್ರಾಬೆರಿ ಜೀರ್ಣಕ್ರಿಯೆಯನ್ನು(Digestion) ಉತ್ತೇಜಿಸುತ್ತೆ. ಯಾವುದೆ ಆಹಾರ ಸುಲಭವಾಗಿ ಜೀರ್ಣವಾಗಲು ಇದು ಸಹಕಾರಿಯಾಗಿದೆ. ಸ್ಟ್ರಾಬೆರಿ ಫೈಬರ್ ಜೊತೆಗೆ ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದು ಉತ್ತಮ ಪ್ರಮಾಣದ ನೀರನ್ನು ಸಹ ಹೊಂದಿರುತ್ತೆ, ಆದುದರಿಂದ ತೂಕ ಇಳಿಕೆ ತುಂಬಾನೆ ಸುಲಭ.
ಸ್ಟ್ರಾಬೆರಿಯನ್ನು ನಿಮಗೆ ಹಾಗೆ ತಿನ್ನಲು ಇಷ್ಟವಿಲ್ಲದೇ ಇದ್ದರೆ, ನೀವು ಬೇರೆ ವಿಧಾನಗಳ ಮೂಲಕ ಸ್ಟ್ರಾಬೆರಿ ಸೇವಿಸಬಹುದು. ಅದನ್ನ ನೀವು ಸಲಾಡ್(Salad) ಅಥವಾ ಮೊಸರಿನೊಂದಿಗೆ ತಿನ್ನಬಹುದು. ಅಷ್ಟೇ ಅಲ್ಲ, ಅವುಗಳನ್ನು ಬೆಳಗಿನ ಉಪಾಹಾರದಲ್ಲಿ ಕಾರ್ನ್ ಫ್ಲೇಕ್ಸ್ ಅಥವಾ ಓಟ್ಸ್ ನಲ್ಲಿ ಸಹ ಹಾಕಿ ಸೇವಿಸಬಹುದು.