ಇಂದಿನಂತೆ ರೆಡಿಮೇಡ್ ಆಹಾರವಿಲ್ಲದ 1960ರ ದಶಕದಲ್ಲಿ ಕೆಲ ವಸ್ತುಗಳು ಜನಪ್ರಿಯವಾಗಿದ್ದವು. ಅಮುಲ್ ಸಂಸ್ಥೆಯು ಹಾಲಿನ ಪುಡಿ ಮತ್ತು ಚೀಸ್ ಪರಿಚಯಿಸುವ ಮೂಲಕ ಆಧುನಿಕ ಆಹಾರ ಪದ್ಧತಿಗೆ ಬುನಾದಿ ಹಾಕಿತು.
ಈಗಿನ ಕಾಲದಲ್ಲಿ ನಮಗೆ ಬೇಕಾದಷ್ಟು ಪ್ಯಾಕೇಜ್ಡ್ ಫುಡ್ ಸಿಗುತ್ತದೆ. ಅಂಗಡಿಯಿಂದ ತಂದು ಎರಡೇ ನಿಮಿಷದಲ್ಲಿ ಬೇಯಿಸಿ ತಿನ್ನುತ್ತೇವೆ. ಆದರೆ 1960ರ ದಶಕದಲ್ಲಿ ನಮ್ಮ ತಾತಂದಿರು ಯಾವ ರೀತಿಯ ಆಹಾರ ತಿನ್ನುತ್ತಿದ್ದರು? ಅವರು ಹೊರಗಡೆ ಯಾವೆಲ್ಲಾ ಪ್ಯಾಕೆಟ್ ಫುಡ್ ಖರೀದಿಸುತ್ತಿದ್ದರು ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.
24
ಪೋಲ್ಸನ್ ಬಟರ್
ಈಗಿನ ಹಾಗೆ 1960ರ ದಶಕದಲ್ಲಿ ಸೂಪರ್ ಮಾರ್ಕೆಟ್ ಅಥವಾ ರೆಡಿಮೇಡ್ ಫುಡ್ ಇರಲಿಲ್ಲ. ಆದರೆ ನಗರಗಳಲ್ಲಿ ಪ್ಯಾಕೆಟ್ ಫುಡ್ ನಿಧಾನವಾಗಿ ಜನಪ್ರಿಯವಾಗುತ್ತಿತ್ತು. ಆ ಕಾಲದಲ್ಲಿ ಶುದ್ಧ ತುಪ್ಪದ ಬೆಲೆ ಹೆಚ್ಚಿದ್ದ ಕಾರಣ, ಪ್ರತಿಯೊಂದು ಮನೆಯಲ್ಲೂ 'ಡಾಲ್ಡಾ' (ವನಸ್ಪತಿ) ಬಳಕೆಗೆ ಬಂತು.
ತುಪ್ಪದ ಬದಲಿಗೆ ಸಣ್ಣ ಮತ್ತು ದೊಡ್ಡ ಟಿನ್‌ಗಳಲ್ಲಿ ಡಾಲ್ಡಾ ಸಿಗುತ್ತಿತ್ತು. ಇಂದಿನ ಅಮುಲ್ ಸಂಸ್ಥೆ ಫೇಮಸ್ ಆಗುವ ಮುನ್ನ 'ಪೋಲ್ಸನ್ ಬಟರ್' ಭಾರತೀಯರ ಮನೆಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಸಿತ್ತು. ಆಗ ಬೆಣ್ಣೆ ಅಂದರೆ ಜನರಿಗೆ ಪೋಲ್ಸನ್ ಮಾತ್ರ ನೆನಪಾಗುತ್ತಿತ್ತು.
34
ಗ್ಲೂಕೋಸ್ ಬಿಸ್ಕೆಟ್
ಪ್ಯಾಕೆಟ್ ಆಹಾರಗಳ ಪೈಕಿ ಸಾಮಾನ್ಯ ಜನರಿಗೆ ಬೇಗನೆ ಹತ್ತಿರವಾಗಿದ್ದು ಗ್ಲೂಕೋಸ್ ಬಿಸ್ಕೆಟ್. ಪಾರ್ಲೆ ಮತ್ತು ಬ್ರಿಟಾನಿಯಾ ಕಂಪನಿಗಳು ಕಡಿಮೆ ಬೆಲೆಗೆ ಪೌಷ್ಟಿಕಾಂಶವುಳ್ಳ ಈ ಬಿಸ್ಕೆಟ್‌ಗಳನ್ನು ಮಾರುಕಟ್ಟೆಗೆ ತಂದವು.
1960ರಲ್ಲಿ ಬ್ರಿಟಾನಿಯಾ ಕಂಪನಿಯ 'ಗ್ಲೂಕೋಸ್ ಡಿ' ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೇಲೆ ಇದು ಇನ್ನಷ್ಟು ಫೇಮಸ್ ಆಯಿತು. ಶಾಲಾ ಮಕ್ಕಳ ಲಂಚ್ ಬಾಕ್ಸ್, ರೈಲು ಪ್ರಯಾಣದ ಸ್ನ್ಯಾಕ್ಸ್ ಹಾಗೂ ಮನೆಗೆ ಬರುವ ಅತಿಥಿಗಳಿಗೆ ಚಹಾದ ಜೊತೆ ನೀಡಲು ಗ್ಲೂಕೋಸ್ ಬಿಸ್ಕೆಟ್ ಪ್ಯಾಕೆಟ್ ಹೇಳಿ ಮಾಡಿಸಿದಂತಿತ್ತು.
1960ರ ದಶಕದಲ್ಲಿ ಭಾರತದ ಡೈರಿ ಉತ್ಪನ್ನಗಳ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಬದಲಾವಣೆ ನಡೆಯಿತು. ಅಮುಲ್‌ನಂತಹ ಸಹಕಾರಿ ಸಂಸ್ಥೆಗಳು ಎಮ್ಮೆ ಹಾಲಿನಿಂದ ಬೇಬಿ ಮಿಲ್ಕ್ ಪೌಡರ್ ಮತ್ತು ಚೀಸ್ ತಯಾರಿಸುವುದನ್ನು ದೊಡ್ಡ ಮಟ್ಟದಲ್ಲಿ ಶುರು ಮಾಡಿದವು. ಆಹಾರ ಉದ್ಯಮದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿತ್ತು.
ಅಲ್ಲಿಯವರೆಗೆ ಕೇವಲ ತಾಜಾ ಹಾಲನ್ನು ಮಾತ್ರ ಬಳಸುತ್ತಿದ್ದ ಜನ, ನಿಧಾನವಾಗಿ ಹಾಲಿನ ಪುಡಿ ಮತ್ತು ಬೇಬಿ ಫುಡ್ ಕಡೆಗೆ ಮುಖ ಮಾಡಿದರು. ಇಂದಿನ ಯುವಜನತೆಗೆ ಇವೆಲ್ಲಾ ಸಾಮಾನ್ಯ ಎನಿಸಿದರೂ, 1960ರ ದಶಕದಲ್ಲಿ ಇವೇ ಉತ್ಪನ್ನಗಳು ಆಧುನಿಕ ಭಾರತೀಯ ಆಹಾರ ಪದ್ಧತಿಗೆ ಭದ್ರ ಬುನಾದಿ ಹಾಕಿದ್ದವು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.