ರಾತ್ರಿ ರುಬ್ಬಿರೋ ಇಡ್ಲಿಹಿಟ್ಟು ಹುದುಗಿಲ್ಲವೇ? ಈ 1 ವಸ್ತು ಸೇರಿಸಿ ಮ್ಯಾಜಿಕ್ ನೋಡಿ

Published : Sep 21, 2026, 02:52 PM IST

ವಾತಾವರಣದ ಬದಲಾವಣೆಯಿಂದ ಇಡ್ಲಿ ಹಿಟ್ಟು ಹುದುಗದೆ ಇದ್ದಾಗ ಚಿಂತಿಸುವ ಅಗತ್ಯವಿಲ್ಲ. ಈ ಒಂದು ಪದಾರ್ಥ ಸೇರಿಸುವುದರಿಂದ ಸುಲಭವಾಗಿ ಮೃದುವಾದ ಇಡ್ಲಿ ತಯಾರಿಸಬಹುದು. ಇದು ಹಿಟ್ಟನ್ನು ಬೇಗನೆ ಹುದುಗುವಂತೆ ಮಾಡಿ ರುಚಿಯನ್ನು ಹೆಚ್ಚಿಸುತ್ತದೆ.

PREV
15
ಹುದುಗುವಿಕೆ ಬಾರದ ಇಡ್ಲಿಹಿಟ್ಟು

ಕೆಲವೊಮ್ಮೆ ಕ್ರಮಬದ್ಧವಾಗಿ ಇಡ್ಲಿ ಹಿಟ್ಟು ರುಬ್ಬಿಕೊಂಡರೂ ಬೆಳಗ್ಗೆಯಾದ್ರೂ ಹುದುಗು ಬಂದಿರಲ್ಲ. ಇದಕ್ಕೆ ಕಾರಣ ಹಲವು. ಇಂತಹ ಸಮಯದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳದೇ ಒಂದೇ ಒಂದು ಪದಾರ್ಥ ಸೇರಿಸೋದರಿಂದ ಯಾವುದೇ ಚಿಂತೆಯಿಲ್ಲದೇ ರುಚಿಯಾದ ಮೃದು ಇಡ್ಲಿ ತಯಾರಿಸಬಹುದು.

25
ಇಡ್ಲಿ ರವೆ ಅಥವಾ ಅಕ್ಕಿ

ಇಂದು ಮಾರುಕಟ್ಟೆಗಳಲ್ಲಿ ಇಡ್ಲಿ ರವೆ ಸಿಗುತ್ತದೆ. ನೆನೆಸಿಟ್ಟುಕೊಂಡಿರುವ ಉದ್ದಿನಬೇಳೆಯನ್ನು ರುಬ್ಬಿಕೊಳ್ಳಬೇಕು. ನಂತರ ಇಡ್ಲಿರವೆಯನ್ನು ನೀರಿನಲ್ಲಿ ತೊಳೆದುಕೊಂಡು ಚೆನ್ನಾಗಿ ಹಿಂಡಿ ಉದ್ದಿನಬೇಳೆ ಮಿಶ್ರಣಕ್ಕೆ ಸೇರಿಸಿಕೊಳ್ಳಬೇಕು. ಇನ್ನು ಕೆಲವರು ಮನೆಯಲ್ಲಿಯೇ ಅಕ್ಕಿಯನ್ನು ನೆನೆಸಿಟ್ಟುಕೊಂಡು ಇಡ್ಲಿಗೆ ಬೇಕಾದ ಹಿಟ್ಟನ್ನು ಸಿದ್ಧ ಮಾಡಿಕೊಳ್ಳುತ್ತಾರೆ.

35
ಹುದುಗುವಿಕೆ

ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ರಾತ್ರಿಯೇ ಇಡ್ಲಿಗೆ ಬೇಕಾದ ಹಿಟ್ಟನ್ನು ರೆಡಿ ಮಾಡಿಕೊಂಡಿರುತ್ತಾರೆ. ಬೆಳಗ್ಗೆ ಹಿಟ್ಟು ಹುದುಗು ಬಂದ್ರೆ ಮಹಿಳೆಯರಿಗೆ ಇದು ಅಂದಿನ ದೊಡ್ಡ ಸಂತಸದ ಸುದ್ದಿಯಾಗಿರುತ್ತೆ. ಆದ್ರೆ ಕೆಲವೊಮ್ಮೆ ಬದಲಾದ ವಾತಾವರಣ ಅಥವಾ ರುಬ್ಬಿಕೊಳ್ಳುವಾಗ ಮಾಡುವಾಗ ಮಾಡುವ ಸಣ್ಣ ತಪ್ಪು ಹಿಟ್ಟು ಹುದುಗುವಿಕೆಯನ್ನು ತಡೆಯುತ್ತದೆ.

45
ಈ ವಸ್ತು ಸೇರಿಸಿಕೊಳ್ಳಿ

ಹಿಟ್ಟು ಹುದುಗುವಿಕೆ ಬರದಿದ್ರೆ ಒಂದು ಕಪ್‌ನಷ್ಟು ಮೊಸರು ತೆಗೆದುಕೊಂಡು ಮಜ್ಜಿಗೆ ಮಾಡಿಕೊಳ್ಳಿ. ಮಜ್ಜಿಗೆ ಮಾಡಿಕೊಳ್ಳುವಾಗ ಮೊಸರಿಗೆ ನೀರು ಸೇರಿಸಬೇಡಿ. ಈಗ ಮಜ್ಜಿಗೆಯನ್ನು ನಿಮ್ಮ ಇಡ್ಲಿಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಮುಚ್ಚಳ ಮುಚ್ಚಿ 15 ರಿಂದ 20 ನಿಮಿಷ ಎತ್ತಿಟ್ಟು

55
ರುಬ್ಬುವಾಗ ಯೀಸ್ಟ್ ಸೇರಿಸಿಕೊಳ್ಳಿ

ಈ 15-20 ನಿಮಿಷದಲ್ಲಿ ಇಡ್ಲಿ ಮಾಡಲು ಬೇಕಾಗುವ ಸಿದ್ಧತೆಯನ್ನು ಮಾಡಿಕೊಳ್ಳಬಹುದು ಅಥವಾ ಚಟ್ನಿ/ಸಾಂಬಾರ್ ಮಾಡಿಕೊಳ್ಳಬಹುದು. 15-20 ನಿಮಿಷದ ಬಳಿಕ ಮುಚ್ಚಳ ತೆಗೆದು ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡ್ರೆ ಹಿಟ್ಟು ರೆಡಿಯಾಗುತ್ತದೆ. ಮಜ್ಜಿಗೆ ಸೇರಿಸೋದರಿಂದ ಇಡ್ಲಿ ಸಾಫ್ಟ್‌ ಆಗಿಯೋ ಟೇಸ್ಟಿಯಾಗಿಯೂ ಬರುತ್ತದೆ.

ಗಮನಕ್ಕೆ: ವಾತಾವರಣ ತಂಪಾಗಿದ್ರೆ ಹಿಟ್ಟು ರುಬ್ಬಿಕೊಂಡ ನಂತ್ರ ಚಿಟಿಕೆಯಷ್ಟು ಯೀಸ್ಟ್ ಸೇರಿಸಿಕೊಳ್ಳಬೇಕು. ಇದು ಹುದುಗುವಿಕೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories