ಈ 5 ಬಿಳಿ ವಸ್ತುಗಳು ನಿಮ್ಮ ರಕ್ತವನ್ನು 'ವಿಷಕಾರಿ'ಯಾಗಿಸಬಹುದು! ಎಚ್ಚರ

First Published | Jun 6, 2022, 6:19 PM IST

ನಮ್ಮ ದೇಹಕ್ಕೆ ಯಾವಾಗ ಯಾವ ಸಮಸ್ಯೆ, ಕಾಯಿಲೆ ಉಂಟಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿವರೆಗೆ ಕಂಡರಿಯದ, ಕೇಳರಿಯದ ಸಮಸ್ಯೆಗಳಿಗೆ ತುತ್ತಾಗುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ನೀವು ಸೇವಿಸುವ ಆಹಾರಗಳು. ಕೆಲವು ಆಹಾರಗಳ ಮೂಲಕ ಬ್ಯಾಕ್ಟೀರಿಯಾ ದೇಹವನ್ನು ಸೇರಿ ರಕ್ತವನ್ನು ವಿಷಕರವಾಗಿಸುತ್ತೆ. ಅಂತಹ ಆಹಾರಗಳ ಬಗ್ಗೆ ಎಚ್ಚರವಿರಬೇಕು. 

ಹೌದು, ಕೆಲವೊಂದು ವಿಷಕಾರಿ ಬ್ಯಾಕ್ಟೀರಿಯಾಗಳು(Bacteria) ಆಹಾರದ ಮೂಲಕ ರಕ್ತವನ್ನು ಪ್ರವೇಶಿಸಿದಾಗ ರಕ್ತ ವಿಷಕಾರಿಯಾಗಬಹುದು. ವೈದ್ಯಕೀಯ ಭಾಷೆಯಲ್ಲಿ ರಕ್ತದ ವಿಷವನ್ನು ‘ಸೆಪ್ಟಿಸಿಮಿಯಾ’ ಎಂದು ಕರೆಯಲಾಗುತ್ತೆ. ಇದರರ್ಥ ಬ್ಯಾಕ್ಟೀರಿಯಾವು ರಕ್ತವನ್ನು ತಲುಪುವ ಮೂಲಕ, ರಕ್ತವನ್ನು ಅಶುದ್ಧವಾಗಿಸುತ್ತೆ,  ಇದು ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು. 

ಸೆಪ್ಸಿಸ್ ಎಂದೂ ಕರೆಯಲ್ಪಡುವ ಸೆಪ್ಟಿಸಿಮಿಯಾ ರೋಗವು, ದೇಹದ ಇಮ್ಮ್ಯೂನಿಟಿ ಸಿಸ್ಟಮ್ ನ್ನು ವೀಕ್ ಆಗುವಂತೆ ಮಾಡುತ್ತೆ.ಇದು ರಿಯಾಕ್ಷನ್ ಆದಾಗ, ಊತ ಉಂಟಾಗುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಗಳು ಸಂಭವಿಸುತ್ತವೆ. ಇದು ಗಂಭೀರ ಅನಾರೋಗ್ಯಕ್ಕೆ ಕಾರಣವಾಗಬಹುದು.  ಆದುದರಿಂದ ನಾವು ತಿನ್ನೋ ಆಹಾರದ(Food) ಕಡೆಗೆ ನಾವು ಗಮನ ಹರಿಸಬೇಕು. ರಕ್ತವು 'ವಿಷಕಾರಿ' ಆಗಲು ಕಾರಣವಾಗಬಹುದಾದ 5 ಆಹಾರಗಳ ಬಗ್ಗೆ ನೋಡೋಣ.

Tap to resize

ಬೆಣ್ಣೆಯಲ್ಲಿ(Butter) ಕೊಬ್ಬು ಮತ್ತು ಸೋಡಿಯಂ ಅಧಿಕವಾಗಿದೆ. ಇದರ ಅತಿಯಾದ ಸೇವನೆಯು ರಕ್ತ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಒಬೆಸಿಟಿ ಕೂಡ ಹೆಚ್ಚಿಸುತ್ತೆ. ಆದ್ದರಿಂದ, ಹಾಲಿನಿಂದ ಮಾಡಿದ ಬೆಣ್ಣೆಯ ಬಳಕೆಯನ್ನು ಕಡಿಮೆ ಮಾಡಬೇಕು.
 

ಆಹಾರದಲ್ಲಿ ಸಕ್ಕರೆ(Sugar) ಮತ್ತು ಉಪ್ಪಿನ ಸೇವನೆಯನ್ನು ಕಡಿಮೆ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ. ಸಿಡಿಸಿಯ ಪ್ರಕಾರ, ಸಕ್ಕರೆಯ ಅತಿಯಾದ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇದು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಆದುದರಿಂದ ಸಕ್ಕರೆಯನ್ನು ಸಾಧ್ಯವಾದಷ್ಟು ಕಡಿಮೆ ಬಳಕೆ ಮಾಡಿ. 

ಅಷ್ಟೇ ಅಲ್ಲ, ಸಕ್ಕರೆ ರಕ್ತವನ್ನು ಪೂರೈಸುವ ನಾಳಗಳನ್ನು ಹಾನಿಗೊಳಿಸುತ್ತದೆ. ಅಷ್ಟೇ ಅಲ್ಲ ಇದು ಮೂತ್ರಪಿಂಡದ ಕಾಯಿಲೆ, ಪಾರ್ಶ್ವವಾಯು, ಹೃದ್ರೋಗ (Heart diseases)ಮತ್ತು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ನೀವು ಸಕ್ಕರೆಯ ಬದಲು ಬೆಲ್ಲ ಅಥವಾ ಜೇನುತುಪ್ಪವನ್ನು ಬಳಸಬಹುದು. ಆದರೆ ಅವುಗಳ ಪ್ರಮಾಣವೂ ಕಡಿಮೆ ಇರಬೇಕು.

ಚೀಸ್(Cheese), ಹಾಲು ಮುಂತಾದ ಡೈರಿ ಉತ್ಪನ್ನಗಳು ಸಹ ಕೊಬ್ಬಿನಂಶವನ್ನು ಹೊಂದಿರುತ್ತವೆ. ಎನ್ಸಿಬಿಐನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹೆಚ್ಚಿನ ಪ್ರಮಾಣದ ಕೊಬ್ಬಿನಿಂದಾಗಿ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಾಗುತ್ತದೆ. ಇದು ರಕ್ತದ ಮೇಲೂ ಪರಿಣಾಮ ಬೀರುತ್ತದೆ. ಆದುದರಿಂದ ಇವುಗಳನ್ನು ಸಹ ಸಾಧ್ಯವಾದಷ್ಟು ಅವಾಯ್ಡ್ ಮಾಡಿ.

ಹೆಚ್ಚು ಉಪ್ಪು(Salt) ಸೇವಯಿಂದ ರಕ್ತದ ಸಮಸ್ಯೆಗಳು ಸಹ ಹೆಚ್ಚುತ್ತೆ. ಉಪ್ಪು ದೇಹದಲ್ಲಿ ನೀರನ್ನು ಹೆಚ್ಚಿಸುವ ಕೆಲಸ ಮಾಡುತ್ತೆ, ಇದು ರಕ್ತದ ರಕ್ತನಾಳಗಳ ಮೇಲೆ ಒತ್ತಡವನ್ನು ಸೃಷ್ಟಿಸುತ್ತದೆ. ಉಪ್ಪಿನಿಂದಾಗಿ ರಕ್ತದೊತ್ತಡ ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಯ ಅಪಾಯವು ಹೆಚ್ಚಾಗುತ್ತದೆ. ಆದ್ದರಿಂದ, ನೀವು ಹೆಚ್ಚು ಉಪ್ಪನ್ನು ಬಳಸುವುದನ್ನು ತಪ್ಪಿಸಬೇಕು. ಬಿಳಿ ಉಪ್ಪಿನ ಬದಲಿಗೆ, ಸೆಂಧಾ ಉಪ್ಪನ್ನು ಬಳಸಿ. 

ಮೈದಾ(Maida) ಆರೋಗ್ಯಕ್ಕೆ ಕೆಟ್ಟದು ಅನ್ನೋದು ನಿಮಗೆ ತಿಳಿದಿರಬಹುದು. ಮೈದಾ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ. ಇದು ರಕ್ತದಲ್ಲಿ ಗ್ಲೂಕೋಸ್ ಹೆಚ್ಚಿಸುವ ಮೂಲಕ ರಾಸಾಯನಿಕ ಕ್ರಿಯೆಗೆ ಕಾರಣವಾಗುತ್ತದೆ. ಈ ಕಾರಣದಿಂದಾಗಿ, ರಕ್ತದ ಸೋಂಕುಗಳು ಬರುವ ಸಾಧ್ಯ ಹೆಚ್ಚಾಗುತ್ತವೆ. ಆದ್ದರಿಂದ, ನೀವು ಮೈದಾವನ್ನು ಹೆಚ್ಚು ಬಳಸಬಾರದು. 
 

ಈ ಸಮಸ್ಯೆಯ ಲಕ್ಷಣಗಾಳೇನು?
ಸೆಪ್ಸಿಸ್ ಒಂದು ಗಂಭೀರ ಕಾಯಿಲೆ ಅನ್ನೋದಂತೂ ನಿಜಾ, ಆದುದರಿಂದ ನಿಮಗೆ ಜ್ವರ, ಶೀತ, ತ್ವರಿತ ಉಸಿರಾಟ, ವೇಗದ ಹೃದಯ ಬಡಿತ, ತಲೆತಿರುಗುವಿಕೆ, ಗೊಂದಲ, ವಾಂತಿ(Vomit) ಅಥವಾ ವಾಕರಿಕೆಯಂತಹ ಭಾವನೆಗಳು ಇದರ ಲಕ್ಷಣಗಳಾಗಿವೆ. ನಿಮಗೆ ಈ ಲಕ್ಷಣ ಕಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲಾಂದ್ರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತೆ ಎಚ್ಚರವಿರಲಿ… 
 

Latest Videos

click me!