ಫ್ರಿಡ್ಜ್‌ನಲ್ಲಿಟ್ಟ ಮೊಟ್ಟೆಗಳು ಕೊಳೆಯುತ್ತವೆಯೇ? ಗೃಹಿಣಿಯರು ತಿಳಿದುಕೊಳ್ಳಬೇಕಾದ ವಿಷಯವಿದು!

Published : Dec 10, 2025, 02:26 PM IST

Why Eggs Are Refrigerated: ಫ್ರಿಡ್ಜ್‌ನಲ್ಲಿಡುವ ಮೊಟ್ಟೆಗಳು ಕೊಳೆಯುತ್ತವೆಯೇ? ಅವುಗಳ ರುಚಿಯಲ್ಲಿ ಬದಲಾವಣೆ ಆಗುತ್ತಾ ಎಂಬ ಚರ್ಚೆಗಳು ನಡೆಯುತ್ತಿರುತ್ತವೆ. ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಏನಾಗುತ್ತೆ ಎಂದು ನೋಡೋಣ ಬನ್ನಿ.

PREV
19
ಮೊಟ್ಟೆ ಮತ್ತು ಪ್ರಶ್ನೆಗಳು

ಮೊಟ್ಟೆ ಸಸ್ಯಾಹಾರ? ಮಾಂಸಹಾರ? ಎಂಬ ಚರ್ಚೆಯ ನಡುವೆ ಇಂದು ಬಹುತೇಕರ ಆಹಾರದ ಒಂದು ಭಾಗವಾಗಿದೆ. ಮನೆಗಳಲ್ಲಿ ಮೊಟ್ಟೆಗಳನ್ನು ಫ್ರಿಡ್ಜ್ ಅಥವಾ ಹೊರಗಿನ ವಾತಾವರಣದಲ್ಲಿ ಸ್ಟೋರ್ ಮಾಡಲಾಗುತ್ತದೆ. ಫ್ರಿಡ್ಜ್‌ನಲ್ಲಿಡುವ ಮೊಟ್ಟೆಗಳು ಕೊಳೆಯುತ್ತವೆಯೇ? ಅವುಗಳ ರುಚಿಯಲ್ಲಿ ಬದಲಾವಣೆ ಆಗುತ್ತಾ ಎಂಬ ಚರ್ಚೆಗಳು ನಡೆಯುತ್ತಿರುತ್ತವೆ.

29
ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಏನಾಗುತ್ತೆ?

ಇಂದು ಬಹುತೇಕರ ಮನೆಗಳಲ್ಲಿ ರೆಫ್ರಿಜರೇಟರ್‌/ಫ್ರಿಡ್ಜ್ ಇದ್ದೇ ಇರುತ್ತವೆ. ಮಾರುಕಟ್ಟೆಯಿಂದ ತೆಗೆದುಕೊಂಡು ಬರುವ ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿಯೇ ಸ್ಟೋರ್ ಮಾಡಲಾಗುತ್ತದೆ. ಕೆಲವರು ಅಡುಗೆಮನೆಯ ಗಾಳಿಯಾಡುವ ಅಥವಾ ಶೆಲ್ಫ್‌ಗಳಲ್ಲಿಡುತ್ತಾರೆ. ಈ ಲೇಖನದಲ್ಲಿ ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಏನಾಗುತ್ತೆ ಎಂದು ನೋಡೋಣ ಬನ್ನಿ.

39
ಮೊಟ್ಟೆ ಸಂಗ್ರಹ ವಿಧಾನ

ಉಪಹಾರ, ಮಧ್ಯಾಹ್ನ ಊಟ, ರಾತ್ರಿ ಊಟ ಮತ್ತು ಸಂಜೆ ತಿಂಡಿಯಲ್ಲೂ ಮೊಟ್ಟೆಯನ್ನು ಬಳಕೆ ಮಾಡಲಾಗುತ್ತದೆ. ಮೊಟ್ಟೆಗಳನ್ನು ಸಂಗ್ರಹಿಸುವ ವಿಧಾನವು ಪ್ರತಿ ಮನೆಯಲ್ಲಿಯೂ ವಿಭಿನ್ನವಾಗಿರುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮೊಟ್ಟೆಯನ್ನು ಫ್ರಿಜ್‌ನಲ್ಲಿ ಇಡಬೇಕೇ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ.

49
4° C ಅಥವಾ ಅದಕ್ಕಿಂತ ಕಡಿಮೆ ತಾಪಮಾನ

ಅಮೆರಿಕದಂತ ದೇಶಗಳಲ್ಲಿ ಮೊಟ್ಟೆಗಳನ್ನು ತೊಳೆದು ಸ್ವಚ್ಛಗೊಳಿಸಿ ಪ್ಯಾಕ್ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮೊಟ್ಟೆ ಮೇಲಿನ ನೈಸರ್ಗಿಕ ರಕ್ಷಣಾತ್ಮಕ ಪದರವಾದ ಬ್ಲೂಮ್ ಹೋಗಿರುತ್ತದೆ. ಬ್ಲೂಮ್ ಪದರು ಮೊಟ್ಟೆಯನ್ನು ಸಾಲ್ಮೊನೆಲ್ಲಾದಂತಹ ಬ್ಯಾಕ್ಟಿರಿಯಾಗಳಿಂದ ರಕ್ಷಣೆ ಮಾಡುತ್ತದೆ. 

ಬ್ಲೂಮ್ ಪದರವಿರದ ಮೊಟ್ಟೆಗಳನ್ನು ಕಡಿಮೆ ತಾಪಮಾನದಲ್ಲಿ ಸ್ಟೋರ್ ಮಾಡಬೇಕಾಗುತ್ತದೆ. ಇಂತಹ ಮೊಟ್ಟೆಗಳನ್ನು 4° C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕಾಗುತ್ತದೆ.

59
ಎಷ್ಟು ದಿನ ಫ್ರೆಶ್ ಆಗಿರುತ್ತೆ ಮೊಟ್ಟೆ?

ಯುರೋಪ್ ಮತ್ತು ಏಷ್ಯಾ ದೇಶಗಳಲ್ಲಿ ಮೊಟ್ಟೆಯನ್ನು ತೊಳೆಯದೇ ಪ್ಯಾಕ್ ಮಾಡಲಾಗುತ್ತದೆ. ಹಾಗಾಗಿ ಇದರಲ್ಲಿ ಬ್ಲೂಮ್ ಪದರು ಇರುತ್ತದೆ. ನೈಸರ್ಗಿಕ ರಕ್ಷಣಾತ್ಮಕ ಪದರು ಹೊಂದಿರುವ ಮೊಟ್ಟೆಯನ್ನು ಹೊರಗಿನ ವಾತಾವರಣದಲ್ಲಿ ಇರಿಸಬಹುದು. ಚಳಿಗಾಲದ ವೇಳೆ ಹೊರಗಿನ ವಾತಾವರಣದಲ್ಲಿ ಮೊಟ್ಟೆಗಳು ಒಂದು ವಾರದವರೆಗೆ ತಾಜಾ ಆಗಿರುತ್ತವೆ. ಬೇಸಿಗೆಗಾಲಲ್ಲಿ 4-5 ದಿನ ಮಾತ್ರ ತಾಜಾ ಆಗಿರುತ್ತವೆ.

69
ಫ್ರಿಡ್ಜ್ ನಲ್ಲಿ ಸಂಗ್ರಹಿಸುವ ವಿಧಾನ

*ಸೂಪರ್ ಮಾರ್ಕೆಟ್‌ನ ರೆಫ್ರಿಜರೇಟರ್ ವಿಭಾಗದಿಂದ ಖರೀದಿಸಿದ ಮೊಟ್ಟೆಯನ್ನು ಮನೆಯಲ್ಲಿಯೂ ರೆಫ್ರಿಜರೇಟರ್‌ನಲ್ಲಿ ಇರಿಸಬೇಕಾಗುತ್ತದೆ. ಸ್ಟೋರ್ ಮಾಡುವಾಗ ಮೊಟ್ಟೆಯ ಶೆಲ್ ಮುರಿಯದಂತೆ ನೋಡಿಕೊಳ್ಳಿ.

*ಮೊಟ್ಟೆಗಳನ್ನು ರೆಫ್ರಿಜರೇಟರ್ ಬಾಗಿಲಲ್ಲಿ ಇಡಬೇಡಿ, ಏಕೆಂದರೆ ಅಲ್ಲಿ ತಾಪಮಾನವು ಆಗಾಗ್ಗೆ ಬದಲಾಗುತ್ತದೆ

79
ಫ್ರಿಡ್ಜ್‌ನಿಂದ ಪದೇ ಪದೇ ಹೊರಗೆ ತೆಗೆಯುವುದು ಏಕೆ ಕೆಟ್ಟದು?

ಮೊಟ್ಟೆಗಳನ್ನು ರೆಫ್ರಿಜರೇಟರ್‌ನಿಂದ ಹೊರಗಿಟ್ಟಾಗ ಅವುಗಳ ಮೇಲ್ಮೈಯಲ್ಲಿ ತೇವಾಂಶ ಸಂಗ್ರಹವಾಗಬಹುದು. ಈ ತೇವಾಂಶವು ಬ್ಯಾಕ್ಟೀರಿಯಾಗಳು ಬೆಳೆಯಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಆದ್ದರಿಂದ ಒಮ್ಮೆ ಮೊಟ್ಟೆಗಳನ್ನು ರೆಫ್ರಿಜರೇಟರ್‌ನಲ್ಲಿಟ್ಟ ನಂತರ ಅವುಗಳನ್ನು ಆಗಾಗ್ಗೆ ಹೊರಗೆ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

89
ಮೊಟ್ಟೆ ತಾಜಾತನ ಪರೀಕ್ಷೆ ಮಾಡೋದು ಹೇಗೆ?

ಒಂದು ಗ್ಲಾಸ್‌ ತುಂಬಾ ನೀರು ತೆಗೆದುಕೊಂಡು ಅದರೊಳಗೆ ಮೊಟ್ಟೆಯನ್ನು ಹಾಕಿ. ಮೊಟ್ಟೆ ಕೆಳಭಾಗಕ್ಕೆ ಮುಳುಗಿದರೆ, ಅದು ತಾಜಾವಾಗಿರುತ್ತದೆ. ಅದು ತೇಲುತ್ತಿದ್ದರೆ ಅಥವಾ ನೇರವಾಗಿ ನಿಂತಿದ್ದರೆ ಅದನ್ನು ಸೇವಿಸಬೇಡಿ

99
ಫ್ರಿಡ್ಜ್ ನಲ್ಲಿಟ್ಟರೆ ರುಚಿ ಕೆಡುತ್ತದೆಯೇ?

ಮೊಟ್ಟೆಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅವುಗಳ ರುಚಿ ಬದಲಾಗುವುದಿಲ್ಲ ಅಥವಾ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಇದು ಅವುಗಳ ತಾಜಾತನ ಮತ್ತು ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.

Read more Photos on
click me!

Recommended Stories