Lassi Recipe : ಬೇಸಿಗೆ ಬರ್ತಿದ್ದಂತೆ ಬಾಯಾರಿಕೆ ಜಾಸ್ತಿಯಾಗುತ್ತೆ. ಮಾರ್ಕೆಟ್ ನಲ್ಲಿ ಸಿಗುವ ಕೋಲ್ಡ್ ಡ್ರಿಂಕ್ಸ್ ಆರೋಗ್ಯ ಹಾಳು ಮಾಡುತ್ತೆ. ಮನೆಯಲ್ಲೇ ನೀವು ಸಕ್ಕರೆ ಇಲ್ಲದ ಲಸ್ಸಿ ತಯಾರಿಸ್ಬಹುದು. ಅದು ಹೇಗೆ ಗೊತ್ತಾ?
ಉರಿಯೋ ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿಡೋದು ಸುಲಭದ ಕೆಲ್ಸವಲ್ಲ. ಇಡೀ ದಿನ ಮೈ ಬೆವರಿನಿಂದ ಒದ್ದೆಯಾದ್ರೆ ದೇಹಕ್ಕೆ ನೀರಿನ ಅಗತ್ಯ ಹೆಚ್ಚಿರುತ್ತೆ. ದೇಹದಲ್ಲಿ ನೀರಿನಂಶ ಕಡಿಮೆ ಆದ್ರೆ ಆರೋಗ್ಯ ಸಮಸ್ಯೆ ಕಾಡೋದು ಹೆಚ್ಚು. ಬೇಸಿಗೆಯಲ್ಲಿ ಆಗಾಗ ದೇಹಕ್ಕೆ ಏನಾದ್ರೂ ಲಿಕ್ವಿಡ್ ನೀಡ್ತಾನೆ ಇರ್ಬೇಕು. ನೀರಿನ ಜೊತೆ ಮಜ್ಜಿಗೆ, ಎಳೆನೀರು, ಲಸ್ಸಿ, ಜ್ಯೂಸ್ ಅಂತ ಜನ ನಾನಾ ಲಿಕ್ವಿಡ್ ಸೇವನೆ ಇಷ್ಟಪಡ್ತಾರೆ. ಇವು ನಿಮ್ಮ ದೇಹವನ್ನು ಹೈಡ್ರೇಟ್ ಮಾಡೋದಲ್ದೆ, ದೇಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತೆ. ಕೆಲವರಿಗೆ ಲಸ್ಸಿ ಇಷ್ಟವಿದ್ರೂ ಅದಕ್ಕೆ ಸಕ್ಕರೆ ಹಾಕ್ತಾರೆ ಎನ್ನುವ ಕಾರಣಕ್ಕೆ ಲಸ್ಸಿ ಸೇವಿಸೋದಿಲ್ಲ. ನೀವು ಸಕ್ಕರೆ ಇಲ್ದೆ ಮನೆಯಲ್ಲಿ ಲಸ್ಸಿ ತಯಾರಿಸ್ಬಹುದು.
25
ಲಸ್ಸಿಗೆ ಅಗತ್ಯವಿರುವ ಪದಾರ್ಥಗಳು
ಮನೆಯಲ್ಲಿ ಕೆನೆಭರಿತ ಮತ್ತು ದಪ್ಪ ಲಸ್ಸಿಯನ್ನು ಸುಲಭವಾಗಿ ತಯಾರಿಸ್ಬಹುದು. ಲಸ್ಸಿ ತಯಾರಿಸಲು ಮೊಸರು ಅಗತ್ಯ,. ಸೋಂಪು, ಪುದೀನಾ, ತಣ್ಣನೆ ನೀರು, ಐಸ್ ಕ್ಯೂಬ್ ಅಗತ್ಯವಿದೆ. ನೀವು ಸಕ್ಕರೆ ಬದಲು ಬೆಲ್ಲವನ್ನು ಲಸ್ಸಿಗೆ ಬಳಸ್ಬಹುದು.
35
ಲಸ್ಸಿ ತಯಾರಿಸುವ ವಿಧಾನ
ದಪ್ಪ ಮತ್ತು ಕೆನೆಭರಿತ ಲಸ್ಸಿಗೆ, ನೀವು ದಪ್ಪವಾದ ಮೊಸರನ್ನು ಬಳಸಬೇಕು ಮತ್ತು ನೀರಿನ ಪ್ರಮಾಣವನ್ನು ಕಡಿಮೆ ಮಾಡಬೇಕು. ಸೋಂಪನ್ನು ನೀವು ಎರಡು ಗಂಟೆ ನೀರಿನಲ್ಲಿ ನೆನೆ ಹಾಕ್ಬೇಕು. ನಂತ್ರ ಸೋಂಪನ್ನು ಮಿಕ್ಸಿಗೆ ಹಾಕಿ, ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದು ಆಗ್ತಿಲ್ಲ ಅಂದ್ರೆ ನೀವು ಸೋಂಪಿನ ಪುಡಿ ಹಾಕಿ. ನಂತ್ರ ಮಿಕ್ಸಿಗೆ ದಪ್ಪ ಮೊಸರು ಹಾಕಿ, ಅದಕ್ಕೆ ಸ್ವಲ್ಪ ನೀರು, ರುಚಿಗೆ ತಕ್ಕಂತೆ ಸ್ವಲ್ಪ ಬೆಲ್ಲ,ಪುದೀನ ಎಲೆಗಳನ್ನು ಸೇರಿಸಿ ರುಬ್ಬಿಕೊಳ್ಳಿ. ನಂತ್ರ ಮಿಕ್ಸಿಯಿಂದ ಗ್ಲಾಸ್ ಗೆ ಹಾಕಿ, ಐಸ್ ಕ್ಯೂಬ್ ಹಾಕಿ ಸರ್ವ್ ಮಾಡಿ.
ಲಸ್ಸಿಯಲ್ಲಿ ಮೊಸರು ಇರೋದ್ರಿಂದ ಇದನ್ನು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಮೊಸರು ದೇಹವನ್ನು ಒಳಗಿನಿಂದ ತಂಪಾಗಿಸುತ್ತದೆ. ಜೀರ್ಣಕ್ರಿಯೆಗೆ ಒಳ್ಳೆಯದು. ಇದು ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಸಹ ಒದಗಿಸುತ್ತದೆ. ಇದು ಪ್ರೋಬಯಾಟಿಕ್ಗಳು, ಕ್ಯಾಲ್ಸಿಯಂ ಮತ್ತು ಪ್ರೋಟೀನ್ಗಳ ಅತ್ಯುತ್ತಮ ಮೂಲವಾಗಿದೆ. ಮೊಸರು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸಕ್ಕರೆಯ ಬದಲಿಗೆ ಲಸ್ಸಿಗೆ ಬೆಲ್ಲವನ್ನು ಸೇರಿಸುವುದರಿಂದ ಕ್ಯಾಲ್ಸಿಯಂ ದೊರೆಯುತ್ತದೆ. ಮೆಂತ್ಯ ಮತ್ತು ಪುದೀನ ಸಹ ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
55
ಬೇಸಿಗೆಯಲ್ಲಿ ಆರೋಗ್ಯ
ಬೇಸಿಗೆಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮುಖ್ಯ. ದೇಹ ನೀರಿಲ್ಲದೆ ನಾನಾ ರೋಗವನ್ನು ಆಹ್ವಾನಿಸುತ್ತದೆ. ನಿಮಗೆ ಹೆಚ್ಚು ಬೆವರು ಬರ್ತಿದ್ದರೆ ದಿನಕ್ಕೆ 3 -4 ಲೀಟರ್ ನೀರನ್ನು ನೀವು ಕುಡಿಯಿರಿ. ನೀರಿನ ಜೊತೆ ಮನೆಯಲ್ಲಿಯೇ ತಯಾರಿಸಿ ಪಾನೀಯಗಳ ಸೇವನೆ ಮಾಡಿ. ಉರಿ ಬೇಸಿಗೆಯಲ್ಲಿ ಕೋಲ್ಡ್ ಡ್ರಿಂಕ್ಸ್ ಅಥವಾ ಐಸ್ ನೀರಿನಿಂದ ಸಂಪೂರ್ಣ ದೂರ ಇರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.