ಪ್ರಧಾನಿ ಮೋದಿ ಆಹಾರ ಪ್ರಿಯರು ಮಾತ್ರವಲ್ಲ, ಅಡುಗೆ ಮಾಡೋದ್ರಲ್ಲೂ ನಿಪುಣರು

Published : Apr 11, 2026, 07:01 PM IST

PM Narendra Modi : ಪ್ರಧಾನಿ ಮೋದಿ ಒಬ್ಬ ಉತ್ತಮ ಆಹಾರಪ್ರಿಯ ಅನ್ನೋದನ್ನು ನೀವು ಕೇಳಿರಬಹುದು. ಆದರೆ ಅವರಿಗೆ ಅಡುಗೆ ಮಾಡುವುದು ಕೂಡ ತಿಳಿದಿದೆ ಎಂದು ನಿಮಗೆ ತಿಳಿದಿದೆಯೇ? ಹೌದು ಪ್ರಚಾರಕರಾಗಿ ಕೆಲಸ ಆರಂಭಿಸಿದರಿಂದ ಹಿಡಿದು ಹಲವಾರು ಬಾರಿ ಪ್ರಧಾನಿ ತಾವೇ ಅಡುಗೆ ಮಾಡಿ ತಿನ್ನುತ್ತಿದ್ದರಂತೆ. 

PREV
16
ಆಹಾರ ಪ್ರಿಯರು ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರ ಆಹಾರ ಪದ್ಧತಿ ಅತ್ಯಂತ ಶಿಸ್ತುಬದ್ಧ ಮತ್ತು ಸರಳ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅವರು ಆರೋಗ್ಯಕರ ಆಹಾರವನ್ನು ಸಾಮಾನ್ಯವಾಗಿ ಸೇವಿಸುತ್ತಾರೆ. ಪ್ರಧಾನಿ ಮೋದಿಆಹಾರ ಪ್ರಿಯರು ಕೂಡ ಹೌದು, ಜೊತೆಗೆ ಅಡುಗೆ ಮಾಡೋದ್ರಲ್ಲೂ ಪರಿಣಿತರು.

26
ಅಡುಗೆ ಮಾಡುವುದರಲ್ಲೂ ನಿಪುಣರು

ಪ್ರಧಾನಿ ಮೋದಿಯವರಿಗೆ ಆಹಾರ ಸೇವಿಸೋದು ಅಂದ್ರೆ ಎಷ್ಟು ಇಷ್ಟವೋ? ಅದೇ ರೀತಿ ಅಡುಗೆ ಮಾಡುವುದೆಂದರೆ ತುಂಬಾ ಇಷ್ಟ ಅಂತ ನಿಮಗೆ ಗೊತ್ತಾ? ಹೌದು, ಇದು ನಿಮಗೆ ಶಾಕಿಂಗ್ ಎನಿಸಬಹುದು, ಆದರೆ ಇದು ನಿಜ. ಆರ್‌ಎಸ್‌ಎಸ್ ಪ್ರಚಾರಕನಾಗಿ ಕೆಲಸ ಮಾಡುವುದರಿಂದ ಹಿಡಿದು ರಾಜಕೀಯಕ್ಕೆ ಬರುವವರೆಗೂ ಅವರು ತಮ್ಮ ಅಡುಗೆಯನ್ನೇ ತಾವೇ ಮಾಡಿಕೊಳ್ಳುತ್ತಿದ್ದರು ಎಂದು ಅವರೇ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.

36
ಮೆಚ್ಚಿನ ತಿಂಡಿ ಯಾವುದು?

ಇಂದಿಗೂ ಕೆಲವೊಮ್ಮೆ ಪ್ರಧಾನಿ ಮೋದಿ ಸ್ವತಃ ತಾವೇ ಅಡುಗೆ ಮಾಡುತ್ತಾರೆ. ಮೊರಿಂಗಾ ಪರಾಠಾ ಪ್ರಧಾನಿಯವರ ಅಚ್ಚುಮೆಚ್ಚಿನ ಆಹಾರದಲ್ಲಿ ಒಂದು. ಒಂದು ಸಂದರ್ಭದಲ್ಲಿ ಅದರ ಬಗ್ಗೆ ಮಾತನಾಡುತ್ತಾ, ಅವರು ಬಯಸಿದಾಗಲೆಲ್ಲಾ ಈಗಲೂ ಸಹ ಅಡುಗೆ ಮನೆಗೆ ಹೋಗಿ ಮೊರಿಂಗಾ ಪರಾಠಾ ಅಂದರೆ ನುಗ್ಗೆ ಸೊಪ್ಪಿನ ಪರಾಠಾ ತಯಾರಿಸುತ್ತಾರೆ ಎಂದು ಹೇಳಿದ್ದರು. ಇಂದಿಗೂ, ಅವರು ಆರೋಗ್ಯಕರ ಮತ್ತು ಸರಳ ಭಕ್ಷ್ಯಗಳ ಪ್ರಿಯರಾಗಿದ್ದಾರೆ, ಸಾಮಾನ್ಯವಾಗಿ ಅದನ್ನು ಮನೆಯಲ್ಲಿ ಮಾಡುತ್ತಿರುತ್ತಾರೆ.

46
ಹಳೆಯ ದಿನಗಳಲ್ಲಿ ಅವರು ಏನು ಅಡುಗೆ ಮಾಡುತ್ತಿದ್ದರು?

ಪ್ರಧಾನಿ ಮೋದಿ ಅವರು ಹಲವಾರು ಸಂದರ್ಶನಗಳಲ್ಲಿ, ಹಿಂದೆ, ತಾವು ಬೆಳಿಗ್ಗೆ ಸ್ವತಃ ಚಹಾ ತಯಾರಿಸಿಸುತ್ತಿದ್ದುದು; ತಾವು ಸ್ವತಃ ಪೋಹಾ ತಯಾರಿಸಿಕೊಳ್ಳುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ಖಿಚಡಿ ಕೂಡ ಮಾಡಿ ತಿನ್ನುತ್ತಿದ್ದರಂತೆ. ಖಿಚಡಿ ತಯಾರಿಸಲು ಸುಲಭ ಹಾಗೂ ಪೌಷ್ಟಿಕಾಂಶ ಭರಿತವಾಗಿರುವುದರಿಂದ ಜೀರ್ಣಕ್ರಿಯೆಗೆ ಉತ್ತಮವಾಗಿದ್ದು, ಆರ್‌ಎಸ್‌ಎಸ್ ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳಿಗೂ ಖಿಚಡಿ ಮಾಡಿ ಬಡಿಸುತ್ತಿದ್ದರಂತೆ.

56
ಸಬುದಾನ ಖಿಚಡಿ ಬಲು ಇಷ್ಟ

ಅಷ್ಟೇ ಅಲ್ಲ, ಪ್ರಧಾನಿ ಮೋದಿ ಅವರಿಗೆ ಸಬುದಾನ ಖಿಚಡಿಯನ್ನು ಹೇಗೆ ತಯಾರಿಸಬೇಕೆಂದು ತಿಳಿದಿದೆಯಂತೆ. ಹಿಮಾಚಲ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಅವರು ಒಬ್ಬ ಮಹಿಳೆಗೆ ಅದನ್ನು ತಯಾರಿಸುವ ಸಂಪೂರ್ಣ ವಿಧಾನವನ್ನು ಕುಡ ಕಲಿಸಿದ್ದರು. ಪ್ರಧಾನಿ ಮೋದಿಯವರ ತುಂಬಾ ಮೆಚ್ಚಿನ ತಿಂಡಿ ಅಂದರೆ ಅದು ಮೊರಿಂಗಾ ಪರಾಠಾ ಅದನ್ನು ಅವರದಲ್ಲಿ 2-3 ಬಾರಿಯಾದರೂ ಮಾಡಿ ಸವಿಯುತ್ತಾರೆ ಮೋದಿ.

66
ಇತರ ನೆಚ್ಚಿನ ಭಕ್ಷ್ಯಗಳು

ಪ್ರಧಾನಿ ಮೋದಿ ಕೆಲವು ಆಹಾರಗಳನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಅಂತಹ ಒಂದು ತಿನಿಸು ಅಂದ್ರೆ, ಮಖಾನ.ಇದಲ್ಲದೇ ಧೋಕ್ಲಾ, ಖಂಡವಿ, ಇಡ್ಲಿ-ದೋಸೆ, ಖಾಖ್ರಾ, ಮೊಳಕೆ ಕಾಳುಗಳು, ಸೊಪ್ಪುಗಳು ಮತ್ತು ತಿಳಿ ಬೇಳೆ ಮತ್ತು ತರಕಾರಿಯಿಂದ ತಯಾರಿಸಿದ ಆಹಾರಗಳನ್ನು ಸಹ ತುಂಬಾ ಇಷ್ಟಪಡುತ್ತಾರೆ. ಭೋಜನಕ್ಕೆ, ಅವರು ಸಾಮಾನ್ಯವಾಗಿ ಖಿಚಡಿ ಅಥವಾ ರೋಟಿ ಜೊತೆಗೆ ಲಘು ಸೂಪ್ ಸೇವಿಸುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories