ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನ 90% ಜನರು ತಪ್ಪಾಗಿ ತಿಂತಾರೆ, ಸೇವಿಸುವ ಸರಿಯಾದ ವಿಧಾನ ಇದೇ

Published : Dec 28, 2025, 03:35 PM IST

How to eat raw garlic, onion: ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದು ಜೀರ್ಣಾಂಗ ವ್ಯವಸ್ಥೆಗೆ ಅತ್ಯಂತ ಪ್ರಯೋಜನಕಾರಿ. ಡಾ. ಸೌರಭ್ ಸೇಥಿ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವ ಪ್ರಯೋಜನಗಳು ಮತ್ತು ಸರಿಯಾದ ವಿಧಾನಗಳನ್ನು ಹಂಚಿಕೊಂಡಿದ್ದಾರೆ. 

PREV
16
ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿ

ಈರುಳ್ಳಿ ಮತ್ತು ಬೆಳ್ಳುಳ್ಳಿ ನಾವು ಬಹುತೇಕ ಎಲ್ಲ ಅಡುಗೆಗೂ ಬಳಸುವ ಸಾಮಾನ್ಯ ಪದಾರ್ಥವಾಗಿದೆ. ಕರಿ , ಸಾಂಬಾರ್, ಸಲಾಡ್ , ಚಟ್ನಿ, ಒಗ್ಗರಣೆಗೆ.. ಹೀಗೆ ಎಲ್ಲದಕ್ಕೂ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ನೀವು ಸರಿಯಾಗಿ ಸೇವಿಸಿದರೆ ಎರಡೂ ಅವುಗಳ ರುಚಿಕರವಾದ ಸುವಾಸನೆ ಮತ್ತು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ.

26
ಸೇವಿಸುವ ಪ್ರಯೋಜನಗಳು ಮತ್ತು ಸರಿಯಾದ ವಿಧಾನ

ಆದರೆ ಇವುಗಳನ್ನು ತಿನ್ನಲು ಇಷ್ಟಪಡದ ಕೆಲವು ಜನರಿದ್ದಾರೆ. ಇದಕ್ಕೆ ವಿಭಿನ್ನ ಕಾರಣಗಳನ್ನು ಕೊಡುತ್ತಾರೆ. ಕೆಲವರು ಅವುಗಳನ್ನು ತಾಮಸಿಕ ಆಹಾರವೆಂದು ಪರಿಗಣಿಸಿದರೆ, ಇತರರು ಅವು ದುರ್ವಾಸನೆ ಬೀರುತ್ತವೆ ಎಂದು ಸೇವಿಸುವುದಿಲ್ಲ. ಇನ್ನೂ ಕೆಲವರು ಅವು ಸುವಾಸನೆ ಮತ್ತು ಔಷಧೀಯ ಗುಣಗಳಿಂದ ತುಂಬಿವೆ ಎಂದು ಹೇಳಿಕೊಳ್ಳುತ್ತಾರೆ. ಆದ್ದರಿಂದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವ ಪ್ರಯೋಜನಗಳು ಮತ್ತು ಸರಿಯಾದ ವಿಧಾನಗಳನ್ನು ಹಂಚಿಕೊಂಡಿದ್ದಾರೆ.

36
ದೇಹದಿಂದ ಕಲ್ಮಶ ತೆಗೆದುಹಾಕಲು ಸಹಕಾರಿ

ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸರಿಯಾಗಿ ಬಳಸಿದರೆ ನಮ್ಮ ಜೀರ್ಣಾಂಗ ವ್ಯವಸ್ಥೆ, ರೋಗನಿರೋಧಕ ಶಕ್ತಿ ಮತ್ತು ದೀರ್ಘಾಯುಷ್ಯಕ್ಕೆ ವರದಾನವಾಗುತ್ತವೆ. ಎರಡರಲ್ಲೂ ಕಂಡುಬರುವ ಅಂಶಗಳು ನಿರ್ವಿಶೀಕರಣ ಕಿಣ್ವಗಳನ್ನು ಸಕ್ರಿಯಗೊಳಿಸುತ್ತವೆ ಮತ್ತು ದೇಹದಿಂದ ಕಲ್ಮಶಗಳು ಮತ್ತು ಹಾನಿಕಾರಕ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

46
ಜೀರ್ಣಾಂಗ ವ್ಯವಸ್ಥೆಗೆ ಅತ್ಯಂತ ಪ್ರಯೋಜನಕಾರಿ

ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಅತ್ಯಂತ ಪ್ರಯೋಜನಕಾರಿ. ಅವು ನಮ್ಮ ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತವೆ. ಅವುಗಳನ್ನು ಸೇವಿಸುವುದರಿಂದ ಸರಿಯಾದ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

56
ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನಲು ಸರಿಯಾದ ಮಾರ್ಗ

ಡಾ. ಸೇಥಿ ಅವರ ಪ್ರಕಾರ, ಈರುಳ್ಳಿ ಮತ್ತು ಬೆಳ್ಳುಳ್ಳಿಯ ಪ್ರಯೋಜನಗಳು ಅವುಗಳ ಸಕ್ರಿಯ ಸಂಯುಕ್ತಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ, ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನ ಅಡುಗೆಗೆ ಬಳಸುವಾಗ ಕಟ್ ಮಾಡಿದರೆ ಅಥವಾ ಲಘುವಾಗಿ ಜಜ್ಜಿದರೆ ಅವುಗಳನ್ನು ಸ್ವಲ್ಪ ಸಮಯ ಹಾಗೆಯೇ ಬಿಡಿ. ಅಂದರೆ 10 ನಿಮಿಷದ ನಂತರ ಫ್ರೈ ಮಾಡಿ ಅಥವಾ ರುಬ್ಬಿ ಸೇವಿಸಿ. ಇದು ಬೆಳ್ಳುಳ್ಳಿಯಲ್ಲಿರುವ ಅಲೈನೇಸ್ ಕಿಣ್ವವನ್ನು ಸಕ್ರಿಯಗೊಳಿಸುತ್ತದೆ. ಉತ್ಪಾದಿಸುತ್ತದೆ. ಇದು ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಪರಿಣಾಮಗಳನ್ನು ಒದಗಿಸುವ ಸಂಯುಕ್ತವಾಗಿದೆ. ಒಂದು ವೇಳೆ ಇವುಗಳನ್ನು ತಕ್ಷಣ ಬಿಸಿ ಎಣ್ಣೆಯಲ್ಲಿ ಹುರಿದರೆ ಈ ಎಲ್ಲಾ ಪರಿಣಾಮಗಳು ಕಡಿಮೆಯಾಗಬಹುದು.

66
ಎಷ್ಟು ತಿನ್ನಬೇಕು?

ಇವೆರಡೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದರೂ ಅವುಗಳನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories