ದ್ವಿದಳ ಧಾನ್ಯಗಳನ್ನು ಮೊಳಕೆ ಕಟ್ಟಿ ತಯಾರಿಸಿದ ಪೌಷ್ಟಿಕ ಮತ್ತು ರುಚಿಕರವಾದ ಹಾಲು ಕೇವಲ ಪಾನೀಯವಲ್ಲ, ಇದು ಆರೋಗ್ಯ, ಶಕ್ತಿ ಮತ್ತು ಪೋಷಣೆಗೆ ಅದ್ಭುತ ಗಿಫ್ಟ್ ಆಗಿದೆ. ಒಂದು ವೇಳೆ ಇದನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಂಡರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಮತ್ತೊಂದು ವಿಚಾರವೆಂದರೆ ಈ ಪೌಷ್ಟಿಕ ಹಾಲು ರುಚಿಕರವಾಗಿ ಮಾತ್ರ ಇರಲ್ಲ, ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಉಬ್ಬುವುದು ಮತ್ತು ಗ್ಯಾಸ್‌ನಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೊಟ್ಟೆ ತುಂಬಿದಂತೆ ಅನಿಸುವುದಿಲ್ಲ, ಪೋಷಕಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ, ತೂಕವನ್ನು ನಿಯಂತ್ರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾದರೆ ಮನೆಯಲ್ಲಿ ಮೊಳಕೆಯೊಡೆದ ಕಾಳುಗಳಿಂದ ಹಾಲನ್ನು ಮಾಡುವುದು ಹೇಗೆಂದು ನೋಡೋಣ...
24
ಬೇಕಾಗುವ ಪದಾರ್ಥಗಳು
ರಾಗಿ ಜೋಳ ಸಜ್ಜೆ ಕಡಲೆಕಾಯಿ ಗೋಡಂಬಿ ಬಾದಾಮಿ ಶುಂಠಿ ಪಿಸ್ತಾ ಕುಂಬಳಕಾಯಿ ಬೀಜ ವಾಲ್ನಟ್ಸ್ ಹಾಲು ನೀರು
34
ತಯಾರಿಸುವ ವಿಧಾನ
ಮೊದಲು ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ 1 ಕಪ್ ರಾಗಿ, 1 ಕಪ್ ಜೋಳ ಮತ್ತು 1 ಕಪ್ ಸಜ್ಜೆ ಸೇರಿಸಿ. ಅವುಗಳನ್ನು ಚೆನ್ನಾಗಿ ತೊಳೆದು 10 ಗಂಟೆಗಳ ಕಾಲ ನೆನೆಸಿ. ಮುಚ್ಚಿಡಿ. 3 ದಿನಗಳ ನಂತರ ಮುಚ್ಚಳ ತೆರೆದರೆ ಮೊಳಕೆ ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಎರಡು ಅಥವಾ ಮೂರು ಬಾರಿ ತೊಳೆದು ಬಟ್ಟೆಯ ಮೇಲೆ ಇರಿಸಿ 2 ಗಂಟೆಗಳ ಕಾಲ ಒಣಗಲು ಬಿಡಿ. ಈಗ ಒಲೆಯ ಮೇಲೆ ಪ್ಯಾನ್ ಇಟ್ಟು ಈ ಮೊಳಕೆ ಕಾಳುಗಳನ್ನು ಹಾಕಿ 15 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಹುರಿಯಿರಿ ಮತ್ತು ಪಕ್ಕಕ್ಕೆ ಇರಿಸಿ. ನಂತರ ಅದೇ ಪ್ಯಾನ್‌ನಲ್ಲಿ ಗೋಡಂಬಿ, ಬಾದಾಮಿ, ಪಿಸ್ತಾ, ಕುಂಬಳಕಾಯಿ ಬೀಜಗಳು, ವಾಲ್ನಟ್ಸ್, ಸ್ವಲ್ಪ ಶುಂಠಿ ಮತ್ತು ನಾಲ್ಕು ಏಲಕ್ಕಿ ಬೀಜಗಳನ್ನು ಹಾಕಿ ಹುರಿದು ಪಕ್ಕಕ್ಕೆ ಇರಿಸಿ.
44
ಆರೋಗ್ಯಕರ ಮೊಳಕೆ ಹಾಲು ಸಿದ್ಧ
ಈಗ, ಒಂದು ಮಿಕ್ಸಿಂಗ್ ಬೌಲ್‌ನಲ್ಲಿ, ಹುರಿದ ಡ್ರೈ ಫ್ರೂಟ್ಸ್ ಮತ್ತು ಹುರಿದಿಟ್ಟುಕೊಂಡ ಮೊಳಕೆಕಾಳುಗಳನ್ನು ಸೇರಿಸಿ. ಅವುಗಳನ್ನು ನುಣ್ಣಗೆ ಪುಡಿ ಮಾಡಿ. ಈ ಹಿಟ್ಟನ್ನು ಒಂದು ಸಣ್ಣ ಲೋಟಕ್ಕೆ ಹಾಕಿ, ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಲೆಯ ಮೇಲೆ ಸ್ವಲ್ಪ ಬಿಸಿನೀರನ್ನು ಕುದಿಸಿ, ಅದಕ್ಕೆ ಈ ಹಿಟ್ಟು ಮಿಶ್ರಿತ ನೀರನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಬಿಸಿ ಮಾಡಿದ ಹಾಲನ್ನು ಇದಕ್ಕೆ ಸೇರಿಸಿದರೆ ಆರೋಗ್ಯಕರ ಮೊಳಕೆ ಕಾಳಿನ ಹಾಲು ಸಿದ್ಧವಾಗುತ್ತದೆ. ನಂತರ ಕುಡಿಯಿರಿ.