ಕರ್ನಾಟಕದ ಜನಪ್ರಿಯ ತಿನಿಸುಗಳು… ಎಲ್ಲವನ್ನೂ ಮಿಸ್ ಮಾಡದೇ ತಿನ್ನಿ

Published : Jul 09, 2025, 06:11 PM IST

ಕರ್ನಾಟಕದಲ್ಲಿ ವಿವಿಧ ಆಹಾರಗಳು ಜನಪ್ರಿಯತೆ ಪಡೆದಿದ್ದರೂ ಸಹ ಕೆಲವೊಂದು ಆಹಾರಗಳನ್ನು ಮಿಸ್ ಮಾಡದೇ ತಿನ್ನಬೇಕು. ಅವುಗಳ ಲಿಸ್ಟ್ ಇಲ್ಲಿದೆ.

PREV
19

ಕರ್ನಾಟಕದಲ್ಲಿ ಇರುವವರಿಗೆ ಇಲ್ಲಿನ ಆಹಾರಗಳ ವೈಶಿಷ್ಟ್ಯತೆ ಬಗ್ಗೆ ಗೊತ್ತೇ ಇದೆ. ಆದರೆ ನೀವು ತಿನ್ನಲೇಬೇಕಾದಂತಹ ಕರ್ನಾಟಕದ ಮುಖ್ಯ ಆಹಾರಗಳ ಲಿಸ್ಟ್ ಇಲ್ಲಿದೆ. ಮಿಸ್ ಮಾಡದೇ ಒಂದು ಸಲನಾದ್ರೂ ತಿಂದು ನೋಡಿ.

29

ಬಿಸಿ ಬೇಳೆ ಬಾತ್ (Bisi Bele Bath)

ಬಿಸಿ ಬೇಳೆ ಬಾತ್ ಕರ್ನಾಟಕದ ಒಂದು ಜನಪ್ರಿಯ ಆಹಾರವಾಗಿದೆ. ಇದು ಅಕ್ಕಿ, ಬೇಳೆ, ತರಕಾರಿ ಮತ್ತು ಮಸಾಲ ಪದಾರ್ಥಗಳನ್ನು ಬಳಸಿ ತಯಾರಿಸುವ ಒಂದು ಮಸಾಲೆಯುಕ್ತ ಅನ್ನದ ಅಡುಗೆ. ಇದನ್ನು ಸಾಮಾನ್ಯವಾಗಿ ಬೂಂದಿ ಅಥವಾ ಚಿಪ್ಸ್ ನೊಂದಿಗೆ ಬಡಿಸಲಾಗುತ್ತದೆ. ಬಿಸಿ ಬೇಳೆ ಬಾತ್ ಮೇಲೆ ತುಪ್ಪ ಹಾಕಿ ತಿಂದ್ರೆ ವಾವ್ ಸಖತ್ ಆಗಿರುತ್ತೆ.

39

ಮೈಸೂರ್ ಮಸಲಾ ದೋಸೆ (Mysore Masala Dosa)

ಹೊರಗೆ ಕ್ರಿಸ್ಮಿ ಒಳಗೆ ಸ್ಮೂತ್ ಆಗಿರುವ ಮೈಸೂರ್ ಮಸಾಲೆ ದೋಸೆ, ಅದರ ಮಧ್ಯದಲ್ಲಿ ಹಾಕಿರುವ ಆಲೂಗಡ್ಡೆ ಪಲ್ಯ… ಹೆಸರು ಹೇಳಿದ್ರೆ ಸಾಕು ಬಾಯಲ್ಲಿ ನೀರೂರುತ್ತೆ.

49

ರಾಗಿ ಮುದ್ದೆ ಜೊತೆ ಬಸ್ಸಾರು (Ragi Mudde)

ರಾಗಿ ಮುದ್ದೆಯ ತಾಕತ್ತು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕರ್ನಾಟಕದ ಗ್ರಾಮೀಣ ಜನರ ಮುಖ್ಯ ಆಹಾರ ಇದು. ರಾಗಿ ಮುದ್ದೆ ಜೊತೆಗೆ ಬಸ್ಸಾರು ಸೇರಿಸಿ ತಿಂದ್ರೆ, ಪೂರ್ತಿ ದಿನಕ್ಕಾಗುವಷ್ಟು ತಾಕತ್ತು ಬರುತ್ತೆ.

59

ನೀರು ದೋಸೆ (Neer Dose)

ಕರಾವಳಿ ಕಡೆ ಮಾಡುವಂತಹ ತಿಂಡಿ ನೀರು ದೋಸೆ, ಅಕ್ಕಿ ಹಿಟ್ಟನ್ನು ಕಾದ ಕಬ್ಬಿಣದ ಹೆಂಚಿನಲ್ಲಿ ತೆಳುವಾಗಿ ಹಾಕಿದರೆ, ಅದುವೇ ನೀರು ದೋಸೆ. ಇದರ ಜೊತೆ ಕೋಳಿ ಸುಕ್ಕ, ಚಟ್ನಿ, ಪಲ್ಯ, ಸಾರು ಏನೇ ತಿಂದ್ರೂನು ಸಖತ್ ಆಗಿರುತ್ತೆ.

69

ಮದ್ದೂರು ವಡೆ (Maddur Vade)

ಮಂಡ್ಯದ ಮದ್ದೂರಿನ ಹೆಸರನ್ನು ಹೊಂದಿರುವ ಈ ತಿಂಡಿ ಮದ್ದೂರು ವಡೆ. ಇದನ್ನ ನೀವು ಸ್ನಾಕ್ಸ್ ಆಗಿ ಯಾವ ಸಮಯದಲ್ಲೂ ತಿನ್ನೋದಕ್ಕೆ ಟೇಸ್ಟಿಯಾಗಿರುತ್ತೆ. ಮದ್ಧೂರು ವಡೆಯನ್ನು ಅಕ್ಕಿ, ರವೆ, ಮೈದಾ, ಈರುಳ್ಳಿ, ಕೊಬ್ಬರಿ ಎಲ್ಲವನ್ನೂ ಹಾಕಿ ತಯಾರಿಸಲಾಗುತ್ತದೆ.

79

ಅಕ್ಕಿ ರೊಟ್ಟಿ (Akki Rotti)

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಿವಿಧ ರೀತಿಯಲ್ಲಿ ಅಕ್ಕಿ ರೊಟ್ಟಿ ಮಾಡಿ ತಿನ್ನುತ್ತಾರೆ. ಇದರ ಸವಿ ಸಖತ್ ಆಗಿರುತ್ತೆ. ಅಕ್ಕಿ ಹಿಟ್ಟಿಗೆ ಈರುಳ್ಳಿ, ಸೊಪ್ಪು , ತರಕಾರಿಗಳನ್ನೆಲ್ಲಾ ಮಿಕ್ಸ್ ಮಾಡಿ ರೊಟ್ಟಿ ತಯಾರಿಸುತ್ತಾರೆ, ಅಥವಾ ಕೇವಲ ಅಕ್ಕಿ ಹಿಟ್ಟಿನಲ್ಲೇ ರೊಟ್ಟಿ ತಯಾರಿಸುತ್ತಾರೆ. ಇದರ ಜೊತೆಗೆ ಬದ್ನೆಕಾಯಿ ಎಣ್ಣೆಕಾಯಿ ಇದ್ರೆ ಚೆನ್ನಾಗಿರುತ್ತೆ.

89

ಮಂಗಳೂರು ಬನ್ಸ್ (Mangalore Buns)

ಇದು ಅಂತಿಂಥ ಬನ್ ಅಲ್ಲ. ಮೈದಾ,ಬಾಳೆಹಣ್ಣು, ಮೊಸರಿನ ಮಿಶ್ರಣದಿಂದ ತಯಾರಾಗುವ, ಹೊರಗಡೆ ಕಂದು ಬಣ್ಣದಲ್ಲಿ, ಒಳಗಡೆ ತಿಳಿ ಹಳದಿ, ಬಿಳಿ ಬಣ್ಣದಲ್ಲಿರುವ ರುಚಿಯಲ್ಲಿ ಸಿಹಿಯಾಗಿರುವ ಪ್ಲಫಿಯಾಗಿರುವ ಬನ್. ಇದನ್ನ ತಿಂದ್ರೆ ಮತ್ತೆ ಮತ್ತೆ ತಿನ್ನೋ ಬಯಕೆ ಉಂಟಾಗೋದು ಖಚಿತಾ.

99

ದಾವಣಗೆರೆ ಬೆಣ್ಣೆ ದೋಸೆ (Davanagere Benne Dose)

ವಿಶೇಷವಾಗಿ ದಾವಣೆಗೆರೆಯಲ್ಲಿ ಸಿಗುವಂತಹ ದೋಸೆ ಇದು. ದೋಸೆ ಮೇಲೆ ಒಂದು ಮುದ್ದೆ ಬೆಣ್ಣೆ ಹಾಕಿ ಈ ದೋಸೆಯನ್ನು ಸರ್ವ್ ಮಾಡಲಾಗುತ್ತೆ. ಆ ಫ್ರೆಶ್ ಬೆಣ್ಣೆಯ ಘಮ, ರುಚಿಯಾದ ದೋಸೆ, ಎರಡೂ ಸಖತ್ ಆಗಿರುತ್ತೆ.

Read more Photos on
click me!

Recommended Stories