ಆರೋಗ್ಯಕರ ಮ್ಯಾಂಗೋ ಪಾಯಸ, ಸಕ್ಕರೆ ಇಲ್ದೆ ಸೂಪರ್ ಟೇಸ್ಟಿ

Published : Apr 19, 2026, 07:51 PM IST

Mango Kheer Recipe : ಬೇಸಿಗೆಯಲ್ಲಿ ಮಾವಿನ ಹಣ್ಣಿನ ಅಬ್ಬರ ಜಾಸ್ತಿ. ಮಾವಿನ ಹಣ್ಣಿನಿಂದ ಶೇಕ್ಸ್, ಐಸ್ ಕ್ರೀಮ್, ಸ್ಮೂಥಿ, ಸಿಹಿತಿಂಡಿ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತೆ. ಆದ್ರೆ ಮಾವಿನ ಖೀರ್ ರುಚಿಯೇ ಬೇರೆ. ಸಕ್ಕರೆ ಇಲ್ಲದೆ ಮಾವಿನ ಪಾಯಸ ತಯಾರಿಸೋದು ಹೇಗೆ ಗೊತ್ತಾ?

PREV
15
ಮಾವಿನ ಪಾಯಸ

ಮಾವಿನ ಪಾಯಸ ತಯಾರಿಸೋದು ಸುಲಭ. ಮಾವಿನ ಪಾಯಸ ತಯಾರಿಸಲು ಮಾವಿನ ಹಣ್ಣು, ಹಾಲು, ಏಲಕ್ಕಿ ಪುಡಿ ಹಾಗೂ ಕೇಸರಿ ಅಗತ್ಯವಿದೆ. ಮಾವಿನ ಖೀರ್ ಮಾಡಲು ನೀವು ಮೊದಲು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಕುದಿಸಬೇಕು. ಹಾಲು ಕ್ರಮೇಣ ದಪ್ಪವಾಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ಹಾಲು ಅರ್ಧದಷ್ಟು ಕಡಿಮೆಯಾಗಿ ಕೆನೆಯ ವಿನ್ಯಾಸವನ್ನು ಪಡೆಯಲು ಪ್ರಾರಂಭಿಸಿದಾಗ ಪಾಯಸ ಮಾಡಲು ಹಾಲು ಸಿದ್ಧ ಎಂದರ್ಥ.

25
ರುಚಿ ಹೆಚ್ಚಿಸುವ ಏಲಕ್ಕಿ

ಹಾಲಿಗೆ ಸಕ್ಕರೆ ಹಾಕಿವ ಬದಲು ನೀವು ದಪ್ಪಗಾದ ಹಾಲಿಗೆ ಕೇಸರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಇದು ಪಾಯಸಕ್ಕೆ ಕೇಸರಿ ಬಣ್ಣ ಮತ್ತು ಪರಿಮಳ ಎರಡನ್ನೂ ಹೆಚ್ಚಿಸುತ್ತದೆ. ಏಲಕ್ಕಿ, ಖೀರ್ಗೆ ವಿಶಿಷ್ಟ ರುಚಿಯನ್ನು ನೀಡುತ್ತದೆ. ಸುಮಾರು 5 ನಿಮಿಷ ಬೇಯಿಸಿ, ನಂತರ ಉರಿಯನ್ನು ಆಫ್ ಮಾಡಿ.

35
ಈ ಹಂತ ಮುಖ್ಯ

ನೀವು ಪಾಯಸ ಮಾಡುವಾಗ ಇದನ್ನು ನೆನಪಿಟ್ಟುಕೊಳ್ಳಬೇಕು. ಹಾಲು ಬಿಸಿ ಇರುವಾಗಲೇ ನೀವು ಮಾವಿನ ಹಣ್ಣನ್ನು ಸೇರಿಸಬಾರದು. ಹಾಲನ್ನು ಮೊದಲು ತಣ್ಣಗಾಗಲು ಬಿಡಿ. ಬಿಸಿ ಹಾಲಿಗೆ ಮಾವಿನ ಹಣ್ಣುನ್ನು ಸೇರಿಸುವುದರಿಂದ ಹಾಲು ಮೊಸರಾಗಬಹುದು. ಹಾಲು ಸಂಪೂರ್ಣ ತಣ್ಣಗಾಗುವವರೆಗೂ ನೀವು ಬಿಡಬೇಕು.

45
ಮಾವಿನ ಹಣ್ಣನ್ನು ಸೇರಿಸಿ

ಸಿಹಿಯಾದ ಮಾವಿನ ಹಣ್ಣನ್ನು ಸಿಪ್ಪೆ ತೆಗೆಯಿರಿ. ನಂತ್ರ ಸಣ್ಣದಾಗಿ ಕತ್ತರಿಸಿ ಅದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಪಾಯಸದ ರುಚಿ ಹೆಚ್ಚಿಸಲು ನೀವು ಮಾವಿನ ಸಣ್ಣ ತುಂಡುಗಳನ್ನು ಕೂಡ ಹಾಕಬಹುದು. ಆದ್ರೆ ಅದನ್ನು ಈಗ್ಲೇ ಹಾಕಬಾರದು.

55
ಪಾಯಸ ಸಿದ್ಧ

ಹಾಲು ತಣ್ಣಗಾದ ನಂತರ, ಮಾವಿನ ರಸವನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಅದು ಕ್ರೀಮ್ ನಂತಾಗಬೇಕು. ನಂತ್ರ ಇದಕ್ಕೆ ಬಾದಾಮಿ, ಗೋಡಂಬಿ ಮತ್ತು ಪಿಸ್ತಾದಂತಹ ಕತ್ತರಿಸಿದ ಒಣ ಹಣ್ಣುಗಳನ್ನು ಸೇರಿಸಿ. ನಿಮಗಿಷ್ಟವಾದ್ರೆ ನೀವು ಈ ಪಾಯಸಕ್ಕೆ ಮಾವಿನ ಹಣ್ಣಿನ ಸಣ್ಣ ತುಂಡುಗಳನ್ನು ಹಾಕಿ. ನಂತರ ಪಾಯಸವನ್ನು 2-3 ಗಂಟೆಗಳ ಕಾಲ ರೆಫ್ರಿಜರೇಟರ್ನಲ್ಲಿ ಇರಿಸಿ. ಅದು ಸಂಪೂರ್ಣವಾಗಿ ತಣ್ಣಗಾದ ನಂತರ ಸರ್ವ್ ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories