ಬಿಲಿಯನೇರ್ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಸಮಾರಂಭಗಳು ಅದ್ಧೂರಿಯಾಗಿ ನಡೆದಿವೆ. ಗುಜರಾತ್‌ನ ಜಾಮ್ನಾನಗರದಲ್ಲಿ ನಡೆದ ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ದೇಶ-ವಿದೇಶದ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಮಾರ್ಚ್ 1ರಿಂದ 3ರ ವರೆಗೆ ನಡೆದ ಇವೆಂಟ್‌ನಲ್ಲಿ ಜಾಗತಿಕ ಟೆಕ್ ಸಿಇಒಗಳು, ಬಾಲಿವುಡ್ ತಾರೆಯರು, ಪಾಪ್ ಐಕಾನ್‌ಗಳು ಮತ್ತು ರಾಜಕಾರಣಿಗಳು ಪಾಲ್ಗೊಂಡರು. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್, ಇವಾಂಕಾ ಟ್ರಂಪ್ ಮೊದಲಾದವರು ಉಪಸ್ಥಿತರಿದ್ದರು.
ಇಶಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ, ಆನಂದ್ ಪಿರಾಮಲ್ ಮತ್ತು ಕೋಕಿಲಾಬೆನ್ ಅಂಬಾನಿ ಸೇರಿದಂತೆ ಇಡೀ ಅಂಬಾನಿ ವಂಶಸ್ಥರು ಮದುವೆಯಲ್ಲಿ ಪಾಲ್ಗೊಂಡಿದ್ದರು. ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಅದ್ಧೂರಿ ಭೋಜನವನ್ನು ಏರ್ಪಡಿಸಲಾಗಿತ್ತು.
ವಿಶೇಷ ಕಾರ್ಯಕ್ರಮದಲ್ಲಿ 1,000 ಅತಿಥಿಗಳು ಭಾಗವಹಿಸಿದ್ದರು. ಔತಣಕೂಟ ವೈವಿಧ್ಯಮಯ ಪಾಕಪದ್ಧತಿಗಳನ್ನು ಒಳಗೊಂಡಿತ್ತು. ಇಂದೋರ್‌ನ 25ಕ್ಕೂ ಹೆಚ್ಚು ಬಾಣಸಿಗರ ತಂಡವು ತಮ್ಮ ಪಾಕಶಾಲೆಯ ಪರಿಣತಿಯನ್ನುಇಲ್ಲಿ ಪ್ರದರ್ಶಿಸಿತು.
ದೇಶ-ವಿದೇಶಗಳಿಂದ ಅತಿಥಿಗಳಿಗಾಗಿ ಬರೋಬ್ಬರಿ 2,500 ಬಗೆಯ ಆಹಾರ ಸಿದ್ಧಗೊಳಿಸಲಾಯಿತು. 100ಕ್ಕೂ ಹೆಚ್ಚು ಬಾಣಸಿಗರ ತಂಡ ಅಡುಗೆ ತಯಾರಿ ಮಾಡಿತು.
ಥಾಯ್, ಜಪಾನೀಸ್, ಮೆಕ್ಸಿಕನ್, ಪಾರ್ಸಿ ಮತ್ತು ಪ್ಯಾನ್ ಏಷ್ಯನ್ ಖಾದ್ಯಗಳು ಒಳಗೊಂಡಿತ್ತು. ವಿಶೇಷ ಇಂದೋರ್ ಸರಾಫಾ ಫುಡ್ ಕೌಂಟರ್ ಸಹ ಸ್ಥಾಪಿಸಲಾಗಿತ್ತು
ವರದಿಗಳ ಪ್ರಕಾರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಒಟ್ಟು 3 ದಿನಗಳ ಹಬ್ಬಕ್ಕೆ ಅಂದಾಜು 1260 ಕೋಟಿ ರೂ. ಖರ್ಚು ಮಾಡಲಾಗಿದೆ.
ಫೋರ್ಬ್ಸ್ ಪ್ರಕಾರ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯವ 117 ಬಿಲಿಯನ್ ಆಗಿದೆ. ಕೇವಲ ಅಡುಗೆ ಗುತ್ತಿಗೆಗೆ 200 ಕೋಟಿ ರೂ. ನೀಡಲಾಗಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭಕ್ಕೆ ಆಗಮಿಸಿದ ಭಾರತೀಯ ಮತ್ತು ಅಂತಾರಾಷ್ಟ್ರೀಯ ಅತಿಥಿಗಳಿಗೆ ಮುಖೇಶ್ ಅಂಬಾನಿ ಖಾಸಗಿ ವಿಮಾನಗಳ ವ್ಯವಸ್ಥೆ ಮಾಡಿದ್ದರು. ವಿಶೇಷವಾಗಿ ಈ ಸಂದರ್ಭಕ್ಕಾಗಿ ನಿರ್ಮಿಸಲಾದ ಐಷಾರಾಮಿ ವಸತಿಗೃಹಗಳಲ್ಲಿ ಉಳಿದುಕೊಂಡರು. ಪಾಪ್ ಐಕಾನ್ ರಿಹಾನ್ನಾ ಅವರಿಂದ ಮನರಂಜನೆ ಪಡೆದರು.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜನವರಿ 2023 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಈ ವರ್ಷ ಜುಲೈನಲ್ಲಿ ಮದುವೆಯಾಗಲಿದ್ದಾರೆ.