ಪ್ರಪಂಚದಾದ್ಯಂತ ಜನರು ಇಷ್ಟಪಟ್ಟು ತಿನ್ನೋ ಆಹಾರ ಯಾವುದು?

First Published Aug 29, 2023, 3:44 PM IST

ನೀವು ಆಹಾರ ಪ್ರಿಯರಾಗಿದ್ದರೆ, ವಿಶ್ವದ ಹೆಚ್ಚಿನ ಜನರು ತಿನ್ನಲು ಇಷ್ಟಪಡುವ ಖಾದ್ಯ ಯಾವುದು ಎಂಬ ಪ್ರಶ್ನೆಯೂ ನಿಮ್ಮ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಈ ವರ್ಷದ ನೆಚ್ಚಿನ ಆಹಾರಗಳ ಪಟ್ಟಿಯನ್ನು ಚೆಕ್ ಮಾಡಿದ್ರೆ, ಯಾವುದು ಬೆಸ್ಟ್ ಆಹಾರ ಅನ್ನೋದು ಗೊತ್ತಾಗುತ್ತೆ.
 

ನೀವು ಪಿಜ್ಜಾ ಪ್ರಿಯರಾಗಿದ್ದರೆ (Pizza Lover) ನಿಮಗೆ ಒಳ್ಳೆಯ ಸುದ್ದಿ ಇದೆ. ವಿಶ್ವದಾದ್ಯಂತ ಅತ್ಯಂತ ನೆಚ್ಚಿನ ಮತ್ತು ಜನಪ್ರಿಯ ಆಹಾರದ ಪಟ್ಟಿಯಲ್ಲಿ ಪಿಜ್ಜಾ ಮೊದಲ ಸ್ಥಾನ ಪಡೆದಿದೆ. ಪ್ರಪಂಚದಾದ್ಯಂತ ಆಹಾರ ಪ್ರಿಯರು ಇದ್ದಾರೆ. ದೇಶದ ಗಡಿಗಳನ್ನು ದಾಟುವ ಮತ್ತು ಪ್ರತಿ ಹೃದಯಕ್ಕೂ ಇಷ್ಟವಾಗುವ ಕೆಲವು ವಿಶೇಷ ಭಕ್ಷ್ಯಗಳಿವೆ. 

ನೀವು ಸಹ ಆಹಾರ ಪ್ರಿಯರಾಗಿದ್ದರೆ, ವಿಶ್ವದ ಈ ನೆಚ್ಚಿನ ಆಹಾರಗಳ ಪಟ್ಟಿಯನ್ನು ನೀವು ನೋಡಬೇಕು ಇದರಿಂದ ನಿಮ್ಮ ನೆಚ್ಚಿನ ಆಹಾರವನ್ನು ಎಷ್ಟು ಜನರು ಇಷ್ಟಪಡುತ್ತಾರೆ ಎಂದು ನಿಮಗೆ ತಿಳಿಯುತ್ತೆ. ವಿಶ್ವದ ನೆಚ್ಚಿನ ಆಹಾರಗಳ ಪಟ್ಟಿಯಲ್ಲಿ (Most popular food list) ನಮ್ಮ ದೇಶದ ಯಾವ ಭಕ್ಷ್ಯಗಳನ್ನು ಸೇರಿಸಲಾಗಿದೆ ಎಂದು ಇಲ್ಲಿ ತಿಳಿಯೋಣ.
 

Latest Videos


ಪಿಜ್ಜಾ ಅಗ್ರಸ್ಥಾನದಲ್ಲಿದೆ  
ಸಾಕಷ್ಟು ತರಕಾರಿ, ಚಿಕನ್ ಮತ್ತು ಟಾಪಿಂಗ್‌ಗಳಿಂದ ಅಲಂಕರಿಸಲ್ಪಟ್ಟ ಚೀಸ್ ಪಿಜ್ಜಾದ (Cheese Pizza) ಹೆಸರನ್ನು ಕೇಳಿದರೆ ಬಾಯಿಯಲ್ಲಿ ನೀರು ಬರುತ್ತದೆ. ಈ ಬಾರಿ ಪಿಜ್ಜಾವನ್ನು ವಿಶ್ವದ ಅತ್ಯಂತ ನೆಚ್ಚಿನ ಆಹಾರವೆಂದು ಪರಿಗಣಿಸಲಾಗಿದೆ. ನಿಮಗೂ ಸಹ ಪಿಜ್ಜಾ ಅಂದ್ರೆ ಇಷ್ಟ ಅಲ್ವಾ? 

ಇಟಲಿಯ ಈ  ಫ್ಯಾನ್ಸಿ ಖಾದ್ಯವನ್ನು ಅನೇಕ ರೀತಿಯಲ್ಲಿ ತಯಾರಿಸಲಾಗುತ್ತದೆ ಮತ್ತು ಚೀಸ್ ಅನ್ನು ಭಾರತದಲ್ಲಿ ಅದರೊಳಗೆ ತುಂಬಲಾಗುತ್ತದೆ. ಇನ್ನು ಎರಡನೇ ಸ್ಥಾನದಲ್ಲಿ  ಡೋನರ್ ಕಬಾಬ್‌ಗಳು ಇವೆ. ಹ್ಯಾಂಬರ್ಗರ್ ಮೂರನೇ ಸ್ಥಾನದಲ್ಲಿದೆ. ಫಲಾಫಲ್ ನಾಲ್ಕನೇ ಸ್ಥಾನದಲ್ಲಿದ್ದರೆ, ಗೈರೊ ಐದನೇ ಸ್ಥಾನದಲ್ಲಿದ್ದಾರೆ. 
 

ಇದಲ್ಲದೆ, ಡಿಮ್ ಸಮ್, ಕೇವಿಯರ್ ಮತ್ತು ಸ್ಪೆಗೆಟಿ ಕೂಡ ನೆಚ್ಚಿನ ಆಹಾರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ರಾಮನ್ ಸೂಪ್, ಗಾರ್ಲಿಕ್ ಸೂಪ್ (Garlic Soup) ಮತ್ತು ಕಿಮ್ಚಿ ಕೂಡ ನೆಚ್ಚಿನ ಆಹಾರಗಳ (Favourtie Food) ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇನ್ನು ಸುಶಿ, ಟ್ಯಾಕೋಸ್, ಸ್ಪ್ರಿಂಗ್ ರೋಲ್ಸ್ (spring roll), ಸಾಶಿಮಿ ಕೂಡ ಈ ಲಿಸ್ಟ್ ನಲ್ಲಿದೆ ಗೊತ್ತಾ? . 

ಪ್ರಪಂಚದಾದ್ಯಂತದ ಅತ್ಯಂತ ಪ್ರಸಿದ್ಧ ಆಹಾರಗಳು:
ಪಿಜ್ಜಾ
ಡೋನರ್ ಕಬಾಬ್
ಹ್ಯಾಂಬರ್ಗರ್
ಫಲಾಫೆಲ್
ಗೈರೊ
ಹಮ್ಮಸ್
ಕೇವಿಯರ್
ಪೆಕ್ಕಿಂಗ್ ಡಕ್
ಡಿಮ್ ಸಮ್
ಸ್ಪೆಗೆಟಿ
ಲಸಾಗ್ನೆ
ಬಿರಿಯಾನಿ ರೈಸ್
ಥಾಲಿ
ಚಿಕನ್ ತಂದೂರಿ
ಪಾಯೆಲ್ಲಾ

ಪ್ರಪಂಚದಲ್ಲಿ ಜನಪ್ರಿಯತೆ ಪಡೆದಿರುವ ಭಾರತದ ಖಾದ್ಯಗಳು ಯಾವುವು ಗೊತ್ತಾ? 
ನಮ್ಮ ದೇಶದ ಜನಪ್ರಿಯ ಭಕ್ಷ್ಯಗಳ ಬಗ್ಗೆ ಮಾತನಾಡುವುದಾದರೆ, ಬಿರಿಯಾನಿ ರೈಸ್, ಭಾರತದ ವಿಶೇಷ ಥಾಲಿ ಮತ್ತು ಚಿಕನ್ ತಂದೂರಿಯನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಚಿಕನ್ ತಂದೂರಿ (Chicken Tandoori) ಅನೇಕ ಜನರ ಬಾಯಿಯಲ್ಲಿ ನೀರೂರಿಸುತ್ತೆ.  ಇನ್ನು ರುಚಿಕರವಾದ ಬಿರಿಯಾನಿಯ ಬಗ್ಗೆ ಹೇಳೋದಾದ್ರೆ, ಇದನ್ನು ಭಾರತದಲ್ಲಿ ಮಾತ್ರವಲ್ಲದೆ ಅನೇಕ ದೇಶಗಳಲ್ಲಿ ಜನರು ಇಷ್ಟಪಟ್ಟು ತಿಂತಾರೆ. 
 

click me!