ಬೇಸಿಗೆ ಬಂತಂದ್ರೆ ಮಾವಿನ ಹಣ್ಣಿನ ಸೀಸನ್. ರಸಭರಿತ ಮಾವಿನ ಹಣ್ಣು ತಿನ್ನೋದ್ರಲ್ಲಿ ಒಂದು ಮಜಾನೇ ಇದೆ. ಆದ್ರೆ ಮಾವಿನ ಹಣ್ಣು ತಿಂದ್ರೆ ಏನೇಲ್ಲಾ ಲಾಭ ಇದೆ, ಅತಿಯಾದ್ರೆ ಏನಾಗುತ್ತೆ ಅಂತ ಗೊತ್ತಾ?
ಮಾವಿನ ಹಣ್ಣಲ್ಲಿ ವಿಟಮಿನ್ A, C, E ಮತ್ತು K ಇದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಬದ್ಧತೆ ನಿವಾರಿಸುತ್ತದೆ.
27
ವಿಟಮಿನ್ A ಮತ್ತು C ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ, ಇದು ಚರ್ಮದ ಕಾಂತಿ ಹೆಚ್ಚಿಸುತ್ತದೆ. ವಿಟಮಿನ್ A ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಮಾವು ಶಕ್ತಿ ನೀಡುತ್ತದೆ.
37
ಜಾಸ್ತಿ ಮಾವು ತಿಂದ್ರೆ ತೂಕ ಹೆಚ್ಚಬಹುದು. ಇದರಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಕ್ಯಾಲೋರಿಗಳು ಹೆಚ್ಚಿವೆ. ಹಾಗಾಗಿ ಮಾವು ತಿನ್ನುವಾಗ ಎಚ್ಚರ.
47
ಸಕ್ಕರೆ ಕಾಯಿಲೆ ಇರುವವರು ಮಾವಿನ ಹಣ್ಣನ್ನು ಮಿತವಾಗಿ ತಿನ್ನಬೇಕು. ಜಾಸ್ತಿ ತಿಂದ್ರೆ ಸಕ್ಕರೆ ಮಟ್ಟ ಹೆಚ್ಚಬಹುದು.
57
ಕೆಲವರಿಗೆ ಜಾಸ್ತಿ ಮಾವು ತಿಂದ್ರೆ ಮೊಡವೆ, ರಾಶಸ್ ಅಥವಾ ಬೇಸಿಗೆ ಅಲರ್ಜಿ ಆಗಬಹುದು.
67
ಜಾಸ್ತಿ ಮಾವು ತಿಂದ್ರೆ ಕೆಲವರಿಗೆ ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬರ ಆಗಬಹುದು.
77
ಕಾರ್ಬೈಡ್‌ನಿಂದ ಹಣ್ಣಾದ ಮಾವು ಆರೋಗ್ಯಕ್ಕೆ ಹಾನಿಕಾರಕ. ತಲೆನೋವು, ವಾಂತಿ ಅಥವಾ ತಲೆಸುತ್ತು ಬರಬಹುದು. ೪ ಗಂಟೆ ನೆನೆಸಿಟ್ಟು ತಿನ್ನಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.