Top 10 Biryani in India: ಹೈದರಾಬಾದ್ ಬಿರಿಯಾನಿ ಮಾತ್ರ ಅಲ್ಲ… ನೀವು ಟ್ರೈ ಮಾಡಲೇಬೇಕಾದ ಬಿರಿಯಾನಿ ಲಿಸ್ಟ್ ಇಲ್ಲಿದೆ

Published : May 30, 2025, 10:59 AM ISTUpdated : May 30, 2025, 11:02 AM IST

ಭಾರತದಲ್ಲಿ ಅತಿ ಹೆಚ್ಚು ಜನರು ಇಷ್ಟ ಪಟ್ಟು ತಿನ್ನುವ ಆಹಾರ ಅಂದ್ರೆ ಅದು ಬಿರಿಯಾನಿ. ನೀವು ಕೂಡ ಬಿರಿಯಾನಿ ಪ್ರಿಯರಾಗಿದ್ರೆ, ನೀವು ಸಾಯೋ ಮುನ್ನ ಯಾವೆಲ್ಲಾ ಬಿರಿಯಾನಿ ಟ್ರೈ ಮಾಡಬೇಕು ನೋಡಿ.

PREV
111

ಪರಿಮಳಯುಕ್ತ ಅನ್ನ, ರಸಭರಿತವಾದ ಮಾಂಸ ಮತ್ತು ರುಚಿಕರವಾದ ಮಸಾಲೆಗಳಿಂದ ತಯಾರಿಸಲ್ಪಟ್ಟ ಬಿರಿಯಾನಿ (Biryani), ಎಲ್ಲರೂ ಇಷ್ಟಪಡುವ ಬಾಯಲ್ಲಿ ನೀರೂರಿಸುವ ಖಾದ್ಯ. ಭಾರತದಲ್ಲಿ, ವೈವಿಧ್ಯಮಯ ಬಿರಿಯಾನಿ ಕಾಣಬಹುದು. ಸಾಯೋ ಮುಂಚೆ ನೀವು ಟ್ರೈ ಮಾಡಲೇಬೇಕಾದ ಭಾರತದ ವಿಶಿಷ್ಟ ಬಿರಿಯಾನಿಗಳಿವು.

211

​ಹೈದರಾಬಾದ್ ಬಿರಿಯಾನಿ​ (Hyderabad Biryani)

ಇದು ಭಾರತದ ಅತ್ಯಂತ ಜನಪ್ರಿಯ ಬಿರಿಯಾನಿಗಳಲ್ಲಿ ಒಂದಾಗಿದೆ. ನಿಜಾಮರ ಅಡುಗೆಮನೆಗಳಲ್ಲಿ ಹುಟ್ಟಿಕೊಂಡ ಇದು ಬಾಸ್ಮತಿ ಅಕ್ಕಿ, ಕೇಸರಿ ಮತ್ತು ಕ್ಯಾರಮೆಲೈಸ್ ಮಾಡಿದ ಈರುಳ್ಳಿಯ ಪದರದೊಂದಿಗೆ ಮ್ಯಾರಿನೇಡ್ ಮಾಂಸವನ್ನು ಒಳಗೊಂಡಿದೆ. ಇದನ್ನು ಸಾಂಪ್ರದಾಯಿಕವಾಗಿ ಇದ್ದಿಲಿನ ಬೆಂಕಿಯ ಮೇಲೆ ಹಿಟ್ಟಿನಿಂದ ಮುಚ್ಚಿದ ಪಾತ್ರೆಯಲ್ಲಿ ದಮ್ ಪುಖ್ತ್ ವಿಧಾನದಿಂದ ಬೇಯಿಸಲಾಗುತ್ತದೆ.

311

ಲಕ್ನೋವಿ ಬಿರಿಯಾನಿ ​(Lucknowi Biryani)

ಅವಧಿ ಬಿರಿಯಾನಿ ಎಂದೂ ಕರೆಯಲ್ಪಡುವ ಇದು ನವಾಬರ ಅಡುಗೆಮನೆಯಿಂದ ಬಂದಂತಹ ತುಂಬಾನೆ ರುಚಿಕರವಾದ ಬಿರಿಯಾನಿಯಾಗಿದೆ. ನಿಧಾನವಾಗಿ ಬೇಯಿಸುವ ವಿಧಾನವನ್ನು ಬಳಸಿ ತಯಾರಿಸಲಾದ ಈ ಬಿರಿಯಾನಿ ಪರಿಮಳಯುಕ್ತವಾಗಿದೆ. ಖಾದ್ಯದ ಮುಖ್ಯ ಮಸಾಲೆಗಳು ಸೋಂಪು, ದಾಲ್ಚಿನ್ನಿ ಮತ್ತು ಕೇಸರಿ, ಇದು ಸೂಕ್ಷ್ಮವಾದ, ವಿಭಿನ್ನ ರುಚಿಯನ್ನು ನೀಡುತ್ತದೆ.

411

​ಕೋಲ್ಕತ್ತಾ ಬಿರಿಯಾನಿ​ (Kolkata Biryani)

ಪಶ್ಚಿಮ ಬಂಗಾಳದ ಈ ಬಿರಿಯಾನಿ ವಿಶಿಷ್ಟ ರುಚಿಯನ್ನು ಹೊಂದಿದೆ. ಕೋಲ್ಕತ್ತಾ ಬಿರಿಯಾನಿ ಪಾಕವಿಧಾನದಲ್ಲಿ ಆಲೂಗಡ್ಡೆ ಮತ್ತು ಮೊಟ್ಟೆಯೊಂದಿಗೆ ಸೂಕ್ಷ್ಮ ಮಸಾಲೆಗಳನ್ನು ಒಳಗೊಂಡಿದೆ. ಈ ಖಾದ್ಯವನ್ನು 1856 ರಲ್ಲಿ ಲಕ್ನೋದ ನವಾಬ್ ವಾಜಿದ್ ಅಲಿ ಷಾ ಅವರನ್ನು ಕೋಲ್ಕತ್ತಾಗೆ ಗಡಿಪಾರು ಮಾಡಿದಾಗ, ಆ ಸಂದರ್ಭದಲ್ಲಿ ಹುಟ್ಟಿಕೊಂಡ ಬಿರಿಯಾನಿ ಇದಾಗಿದೆ.

511

ತಲಸ್ಸೇರಿ ಬಿರಿಯಾನಿ ​(Thalassery Biryani​)

ಕೇರಳದ ಮಲಬಾರ್ ಪ್ರದೇಶದಿಂದ ಬಂದ ಈ ಬಿರಿಯಾನಿ ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿದೆ. ಇದನ್ನು ಪರಿಮಳಯುಕ್ತ ಬಾಸ್ಮತಿ ಅಕ್ಕಿಯಿಂದ ತಯಾರಿಸಲಾಗುವುದಿಲ್ಲ, ಬದಲಿಗೆ ವಿಶೇಷ ಕೈಮಾ ಅಕ್ಕಿಯನ್ನು ಬಳಸಲಾಗುತ್ತದೆ. ಮಸಾಲೆಗಳು ಮತ್ತು ಮಾಂಸದೊಂದಿಗೆ ತಯಾರಿಸಿದ ಈ ಬಿರಿಯಾನಿ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಆರೋಗ್ಯಕರವಾಗಿದೆ.

611

ಅಂಬೂರ್ ಬಿರಿಯಾನಿ ​ (Ambur biryani)

ತಮಿಳುನಾಡಿನ ವೆಲ್ಲೂರು ಜಿಲ್ಲೆಯಿಂದ ಬಂದ ಅಂಬೂರ್ ಬಿರಿಯಾನಿಯನ್ನು ಮೊಸರಿನಲ್ಲಿ ಮ್ಯಾರಿನೇಟ್ ಮಾಡಿದ ಮಾಂಸದಿಂದ ತಯಾರಿಸಲಾಗುತ್ತದೆ ಮತ್ತು ಎನ್ನೈ ಕಥಿರಿಕೈ - ಒಂದು ರೀತಿಯ ಬದನೆಕಾಯಿ ಕರಿಯೊಂದಿಗೆ ಬಡಿಸಲಾಗುತ್ತದೆ. ಅಂಬೂರ್ ಬಿರಿಯಾನಿಯನ್ನು ಆಕರ್ಷಕವಾಗಿ ಕಾಣಲು ಒಣಗಿದ ಮೆಣಸಿನಕಾಯಿ ಪೇಸ್ಟ್ ಜೊತೆಗೆ ಸಣ್ಣ ಧಾನ್ಯದ ಸಾಂಬಾ ಅಕ್ಕಿಯನ್ನು ಬಳಸಲಾಗುವುದು.

711

ಬಾಂಬೆ ಬಿರಿಯಾನಿ ​(Bombay Biryani)

ಡ್ರೀಮ್ ಸಿಟಿ ಮುಂಬೈನಲ್ಲಿ ನೀವು ಸೌಮ್ಯವಾದ ಆದರೆ ರುಚಿಕರವಾದ ಬಿರಿಯಾನಿಯನ್ನು ಸವಿಯಬಹುದು, ಈ ಬಿರಿಯಾನಿ ಕೇವ್ರಾ ನೀರು (ಸುವಾಸನೆಯ ಹೂವಿನಿಂದ ಪಡೆಯಲಾಗಿದೆ) ಮತ್ತು ಒಣಗಿದ ಪ್ಲಮ್‌ಗಳನ್ನು ಒಳಗೊಂಡಿರುತ್ತದೆ. ಇದನ್ನು ಕೋಳಿ ಮತ್ತು ಮಟನ್ ಹಾಗೂ ಹುರಿದ ಆಲೂಗಡ್ಡೆ ಎರಡನ್ನೂ ಬಳಸಿ ತಯಾರಿಸಬಹುದು. ಬಾಂಬೆ ಬಿರಿಯಾನಿ ಸಿಹಿ ಮತ್ತು ಆರೊಮ್ಯಾಟಿಕ್ ಸುವಾಸನೆಯನ್ನು ಹೊಂದಿದ್ದು. ಇದನ್ನ ಒಂದು ಸಲನಾದ್ರೂ ಟ್ರೈ ಮಾಡ್ಲೇಬೇಕು.

811

ದಿಂಡಿಗಲ್ ಬಿರಿಯಾನಿ ​(Dindigul Biriyani)

ತಮಿಳುನಾಡಿನ ಮತ್ತೊಂದು ರುಚಿಕರವಾದ ಬಿರಿಯಾನಿ. ದಿಂಡಿಗಲ್ ಎಂಬ ಪಟ್ಟಣದಲ್ಲಿ ಹುಟ್ಟಿಕೊಂಡ ಇದು ಸ್ಟ್ರಾಂಗ್ ಮತ್ತು ಕಟುವಾದ ಸುವಾಸನೆಯನ್ನು ಹೊಂದಿರುತ್ತದೆ. ಸೀರಗ ಸಾಂಬಾ ಅಕ್ಕಿಯನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ, ತುಪ್ಪದ ಸುವಾಸನೆ ಮತ್ತು 'ದಿಂಡಿಗಲ್ ಮಸಾಲ' ಎಂಬ ವಿಶೇಷ ಮಸಾಲೆ ಮಿಶ್ರಣವನ್ನು ಹೊಂದಿರುತ್ತದೆ. ನೀವು ಇದನ್ನು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಸವಿಯಬಹುದು.

911

ಸಿಂಧಿ ಬಿರಿಯಾನಿ ​(Sindhi Biryani​)

ಹೆಸರೇ ಸೂಚಿಸುವಂತೆ, ಸಿಂಧಿ ಬಿರಿಯಾನಿ ಸಿಂಧ್ ಪ್ರಾಂತ್ಯದಲ್ಲಿ (ಇಂದಿನ ಪಾಕಿಸ್ತಾನ) ಹುಟ್ಟಿಕೊಂಡಿತು. ಬಾಸ್ಮತಿ ಅಕ್ಕಿ ಮತ್ತು ತರಕಾರಿಗಳಿಂದ ತಯಾರಿಸಲ್ಪಟ್ಟ ಇದು, ಮಸಾಲೆಗಳು ಮತ್ತು ಮೆಣಸಿನಕಾಯಿಗಳಿಂದ ತುಂಬಿದ್ದು, ಕುಟುಂಬ ಭೋಜನಕ್ಕೆ ಅತ್ಯುತ್ತಮವಾಗಿದೆ. ಇದು ಹೆಚ್ಚಾಗಿ ಆಲೂಗಡ್ಡೆ ಮತ್ತು ಪ್ಲಮ್‌ಗಳನ್ನು ಒಳಗೊಂಡಿರುತ್ತದೆ.

1011

ಮೆಮೋನಿ ಬಿರಿಯಾನಿ ​(Memoni Biryani​)

ಮೆಮೋನಿ ಸಮುದಾಯದ ಸಾಮಾನ್ಯ ಭಾಗವಾಗಿರುವ ಈ ಬಿರಿಯಾನಿ ಸಿಂಧಿ ಖಾದ್ಯದಿಂದ ಪ್ರಭಾವಿತವಾಗಿದೆ. ಕುರಿ, ಮೊಸರು, ಹುರಿದ ಈರುಳ್ಳಿ ಮತ್ತು ಆಲೂಗಡ್ಡೆಗಳಿಂದ ತಯಾರಿಸಲಾದ ಇದು ಸಿಂಧಿ ಬಿರಿಯಾನಿಗಿಂತ ಭಿನ್ನವಾಗಿ ಕಡಿಮೆ ಟೊಮೆಟೊ ಮತ್ತು ಆಹಾರ ಬಣ್ಣವನ್ನು ಬಳಸಿ ಮಾಡಲಾಗುತ್ತೆ. ಇದರಲ್ಲಿ ಡ್ರೈ ಫ್ರುಟ್ಸ್ ಮತ್ತು ನಟ್ಸ್ ಕೂಡ ಇರುತ್ತೆ.

1111

ಭಟ್ಕಳ ಬಿರಿಯಾನಿ ​(Bhatkali Biryani​)

ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಬಹಳ ಜನಪ್ರಿಯವಾಗಿರುವ ಇದು ನವಾಯತ್ ಪಾಕಪದ್ಧತಿಯ ಉಡುಗೊರೆಯಾಗಿದೆ. ಭಟ್ಕಳ ಬಿರಿಯಾನಿಯನ್ನು ಪರ್ಷಿಯನ್ ವ್ಯಾಪಾರಿಗಳು ಭಾರತಕ್ಕೆ ತಂದಿದ್ದಾರೆಂದು ನಂಬಲಾಗಿದ್ದರೂ, ಭಟ್ಕಳ ಪ್ರದೇಶದಲ್ಲಿ ಇದು ಪ್ರಧಾನ ಖಾದ್ಯವಾಗಿದೆ. ಈ ಬಿರಿಯಾನಿಯ ವಿಶಿಷ್ಟ ಮತ್ತು ಖಾರದ ಪರಿಮಳವು ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಗಳೊಂದಿಗೆ ಬೇಯಿಸಿದ ಮಾಂಸದಿಂದ ಬರುತ್ತದೆ.

Read more Photos on
click me!

Recommended Stories