ಮಳೆಗಾಲದ ಚಳಿಗೆ ಮಾಡ್ಕೊಳ್ಳಿ 6 ರುಚಿಕರ ಪಕೋಡಗಳು

Published : May 28, 2025, 04:32 PM IST

Special Monsoon Snack: ಮಳೆಗಾಲದಲ್ಲಿ ಗರಮ ಪಕೋಡಗಳ ರುಚಿಯೇ ಬೇರೆ. ಈ 6 ಸುಲಭ ಮತ್ತು ರುಚಿಕರ ಪಾಕವಿಧಾನಗಳೊಂದಿಗೆ ನಿಮ್ಮ ಗಂಡ ಅಥವಾ ಕುಟುಂಬವನ್ನು ಖುಷಿ ಪಡಿಸಿ.

PREV
16
ಈರುಳ್ಳಿ ಪಕೋಡ

ಬೇಕಾಗುವ ಸಾಮಗ್ರಿಗಳು: ಈರುಳ್ಳಿ, ಕಡ್ಲೆ ಹಿಟ್ಟು, ಉಪ್ಪು, ಅರಿಶಿನ, ಖಾರದ ಪುಡಿ, ಅಜ್ವೈನ್

ವಿಧಾನ: ಈರುಳ್ಳಿಯನ್ನು ತೆಳುವಾಗಿ ಹೆಚ್ಚಿ. ಕಡ್ಲೆ ಹಿಟ್ಟು, ಮಸಾಲೆ ಮತ್ತು ಸ್ವಲ್ಪ ನೀರು ಬೆರೆಸಿ. ಈರುಳ್ಳಿ ಹಾಕಿ ಮಿಶ್ರಣ ಮಾಡಿ. ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿಕೊಂಡ್ರೆ  ಪಕೋಡ  ರೆಡಿ.

26
ಆಲೂಗಡ್ಡೆ ಪಕೋಡ

ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ, ಕಡ್ಲೆ ಹಿಟ್ಟು, ಉಪ್ಪು, ಕೊತ್ತಂಬರಿ ಪುಡಿ, ಚಾಟ್ ಮಸಾಲ

ವಿಧಾನ: ಆಲೂಗಡ್ಡೆಯನ್ನು ಸಿಪ್ಪೆ ಸುಲಿದು ದುಂಡಗೆ ಹೆಚ್ಚಿ. ಕಡ್ಲೆ ಹಿಟ್ಟಿನಲ್ಲಿ ಮಸಾಲೆ ಬೆರೆಸಿ ಆಲೂಗಡ್ಡೆಯನ್ನು ಅದ್ದಿ ಫ್ರೈ ಮಾಡಿಕೊಳ್ಳಿ. ಚಾಟ್ ಮಸಾಲ ಚಿಮುಕಿಸಿ ಬಿಸಿ ಬಿಸಿಯಾಗಿ ಬಡಿಸಿ.

36
ಪಾಲಕ್ ಪಕೋಡ

ಬೇಕಾಗುವ ಸಾಮಗ್ರಿಗಳು: ಪಾಲಕ್ ಎಲೆಗಳು, ಕಡ್ಲೆ ಹಿಟ್ಟು, ಉಪ್ಪು, ಅರಿಶಿನ, ಹಸಿಮೆಣಸಿನಕಾಯಿ

ವಿಧಾನ: ಪಾಲಕ್ ಎಲೆಗಳನ್ನು ಚೆನ್ನಾಗಿ ತೊಳೆದು ಒಣಗಿಸಿ. ಕಡ್ಲೆ ಹಿಟ್ಟಿನ ಮಿಶ್ರಣ ತಯಾರಿಸಿ. ಪ್ರತಿ ಎಲೆಯನ್ನು ಮಿಶ್ರಣದಲ್ಲಿ ಅದ್ದಿ ಫ್ರೈ ಮಾಡಿ.

46
ಪನ್ನೀರ್ ಪಕೋಡ

ಬೇಕಾಗುವ ಸಾಮಗ್ರಿಗಳು: ಪನ್ನೀರ್ ತುಂಡುಗಳು, ಕಡ್ಲೆ ಹಿಟ್ಟು, ಉಪ್ಪು, ಕರಿಮೆಣಸು, ಕೊತ್ತಂಬರಿ

ವಿಧಾನ: ಪನ್ನೀರ್ ತುಂಡುಗಳನ್ನು ತೆಗೆದುಕೊಳ್ಳಿ. ಕಡ್ಲೆ ಹಿಟ್ಟು ಮತ್ತು ಮಸಾಲೆಗಳ ಮಿಶ್ರಣ ತಯಾರಿಸಿ. ಪನ್ನೀರ್ ಅನ್ನು ಮಿಶ್ರಣದಲ್ಲಿ ಅದ್ದಿ ಕಂದು ಬಣ್ಣ ಬರುವವರೆಗೆ ಪ್ರೈ ಮಾಡಿಕೊಳ್ಳಿ.

56
ಮೆಂತ್ಯ ಪಕೋಡ

ಬೇಕಾಗುವ ಸಾಮಗ್ರಿಗಳು: ಮೆಂತ್ಯ ಸೊಪ್ಪು, ಕಡ್ಲೆ ಹಿಟ್ಟು, ಜೀರಿಗೆ, ಶುಂಠಿ, ಹಸಿಮೆಣಸಿನಕಾಯಿ

ವಿಧಾನ: ಮೆಂತ್ಯ ಸೊಪ್ಪನ್ನು ಹೆಚ್ಚಿ ಕಡ್ಲೆ ಹಿಟ್ಟು ಮತ್ತು ಮಸಾಲೆಗಳಲ್ಲಿ ಮಿಶ್ರಣ ಮಾಡಿ. ಮೆಂತ್ಯ ಸೊಪ್ಪು ಇಲ್ಲದಿದ್ದರೆ, ನೀವು ಕಸೂರಿ ಮೆಂತ್ಯವನ್ನು ಸಹ ಬಳಸಬಹುದು. ಇದಕ್ಕೆ ನೀರು ಸೇರಿಸಿ ದಪ್ಪ ಮಿಶ್ರಣ ತಯಾರಿಸಿ. ಚಮಚದ ಸಹಾಯದಿಂದ ಮಿಶ್ರಣವನ್ನು ಎಣ್ಣೆಯಲ್ಲಿ ಹಾಕಿ ಕರಿ.

66
ಜೋಳ ಪಕೋಡ

ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಸಿಹಿ ಜೋಳ, ಕಡ್ಲೆ ಹಿಟ್ಟು, ಕೊತ್ತಂಬರಿ, ಮೆಣಸಿನಕಾಯಿ, ಶುಂಠಿ

ವಿಧಾನ: ಜೋಳವನ್ನು ಲಘುವಾಗಿ ಮ್ಯಾಶ್ ಮಾಡಿ. ಕಡ್ಲೆ ಹಿಟ್ಟು, ಮಸಾಲೆ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ. ಸಣ್ಣ ಉಂಡೆಗಳನ್ನು ಮಾಡಿ ಕರಿದು ಹಸಿರು ಚಟ್ನಿ ಅಥವಾ ಸಾಸ್‌ನೊಂದಿಗೆ ಬಡಿಸಿ.

Read more Photos on
click me!

Recommended Stories