ನಿನ್ನೆ ಮಾಡಿಟ್ಟ ಹಿಟ್ಟಿನಿಂದ ಚಪಾತಿ ಮಾಡಿ ತಿಂತೀರಾ...? ಆರೋಗ್ಯಕ್ಕೆ ಮಾರಕ

First Published Oct 20, 2021, 7:30 PM IST

ರೊಟ್ಟಿ (Roti), ಚಪಾತಿ ಅಥವಾ ಫುಲ್ಕಾ ಭಾರತೀಯ ಆಹಾರದ (Indian Food) ಬಹಳ ಪ್ರಮುಖ ಭಾಗವಾಗಿದೆ. ದಿನದ ಆಹಾರವಾಗಿರಲಿ ಅಥವಾ ರಾತ್ರಿ ಊಟವಾಗಿರಲಿ (Dinner), ಚಪಾತಿಯನ್ನು ಸಾಮಾನ್ಯವಾಗಿ ಪ್ರತಿ ಮನೆಯಲ್ಲಿ ತಯಾರಿಸಲಾಗುತ್ತದೆ. ಸುಲಭ ಮತ್ತು ವೇಗದ ಅಡುಗೆ ಜೀವನದ ದೃಷ್ಟಿಯಿಂದ, ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಹಿಟ್ಟು ತಯಾರಿಸಿ ಫ್ರಿಜ್ ನಲ್ಲಿ ಇಟ್ಟಿರುತ್ತಾರೆ. ಇದು ಆರೋಗ್ಯಕ್ಕೆ ಉತ್ತಮವೇ? 

ಜನ ಸಮಯ ಉಳಿತಾಯಕ್ಕಾಗಿ ಒಂದು ಬಾರಿ ಹಿಟ್ಟು ತಯಾರಿಸಿ. ಒಂದೇ ಹಿಟ್ಟಿನಿಂದ ಎರಡು ಅಥವಾ ಮೂರು ದಿನಗಳವರೆಗೆ ರೊಟ್ಟಿಗಳನ್ನು ತಯಾರಿಸುತ್ತಾರೆ, ಆದರೆ ಹಿಟ್ಟಿನ ಚಪಾತಿ ತಿನ್ನುವುದರಿಂದ ದೇಹಕ್ಕೆ ಹಾನಿಯಾಗುತ್ತದೆ (Health problem) ಎಂದು ನಾವು ವರ್ಷಗಳಿಂದ ಕೇಳುತ್ತಿದ್ದೇವೆ. ಇದರ ಹಿಂದಿನ ವೈಜ್ಞಾನಿಕ ಕಾರಣ (Scientific reason) ಏನು ಮತ್ತು ಹಳಸಿದ ಹಿಟ್ಟಿನ ರೊಟ್ಟಿಗಳನ್ನು ನಾವು ಏಕೆ ಮಾಡಬಾರದು ಎಂಬುದನ್ನು ತಿಳಿಯಿರಿ.

ವಿಜ್ಞಾನಿಗಳ ಪ್ರಕಾರ, ಹಿಟ್ಟನ್ನು ತಕ್ಷಣವೇ ಬಳಸಬೇಕು, ಇಲ್ಲದಿದ್ದರೆ ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾದ ರಾಸಾಯನಿಕ (Harmful chemical) ಬದಲಾವಣೆಗಳನ್ನು ಉಂಟುಮಾಡುತ್ತದೆ. ಆಯುರ್ವೇದದಲ್ಲಿ ಇದನ್ನು ಹಾನಿಕಾರಕ ಎಂದೂ ಕರೆಯಲಾಗುತ್ತದೆ.

ಕೆಲವೊಮ್ಮೆ ರೆಫ್ರಿಜರೇಟರ್ (Refrigerator) ನಲ್ಲಿರುವ ಹಿಟ್ಟು ಸ್ವಲ್ಪ ಹುಳಿಯಾಗುತ್ತದೆ. ನೀವು ಅದನ್ನೆ ರೊಟ್ಟಿ ಮಾಡಿ ತಿಂದರೆ, ಅದು ಫೂಡ್ ಪಾಯಿಸನ್ (food poison)ಆಗಿ ಬದಲಾಗಬಹುದು. ಈ ಸಂದರ್ಭದಲ್ಲಿ, ರೆಫ್ರಿಜರೇಟರಿನಲ್ಲಿ ಇರಿಸಲಾದ ಹಿಟ್ಟಿನ ರೊಟ್ಟಿಗಳನ್ನು ತಿನ್ನಬಾರದು. ಇದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ. 

ತಾಜಾ ಹಿಟ್ಟಿನ ಚಪಾತಿ ಹಳಸಿದ ಹಿಟ್ಟಿಗಿಂತ ಹೆಚ್ಚು ರುಚಿಕರ ಮತ್ತು ಪೌಷ್ಟಿಕವಾಗಿದೆ ಮತ್ತು  ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಹಳೆಯ ಹಿಟ್ಟು ಹುಳಿ ಬಂದಿರುತ್ತದೆ ಮತ್ತು ಅದರಲ್ಲಿ ಬ್ಯಾಕ್ಟೀರಿಯಾ (bacteria) ಬೆಳೆಯಲು ಪ್ರಾರಂಭಿಸುತ್ತದೆ. ಇದು ಆರೋಗ್ಯಕ್ಕೆ ಮಾರಕವಾಗುತ್ತದೆ. 

ಹಿಟ್ಟನ್ನು ಮುಚ್ಚಿ ರೆಫ್ರಿಜರೇಟರ್ ನಲ್ಲಿ ಇರಿಸಿದಾಗ, ಅದರಲ್ಲಿಇರುವ ಬ್ಯಾಕ್ಟೀರಿಯಾ ಅಂಟಿಕೊಳ್ಳುತ್ತದೆ ಎಂದು ವೈದ್ಯರು ನಂಬುತ್ತಾರೆ. ಇದು ಹೆಚ್ಚಿನ ಬ್ಯಾಕ್ಟೀರಿಯಾ ಉತ್ಪತ್ತಿಗೆ ಕಾರಣವಾಗಬಹುದು, ಇದು  ಆರೋಗ್ಯಕ್ಕೆ ಸಾಕಷ್ಟು ಹಾನಿ ಉಂಟುಮಾಡಬಹುದು.

ಅದೇ ಸಮಯದಲ್ಲಿ, ಹಿಟ್ಟನ್ನು ಫ್ರಿಜ್‌ಗೆ ತೆರೆದು ಇಡುವುದರಿಂದ ಫ್ರಿಡ್ಜ್ ನ ಹಾನಿಕಾರಕ ಕಿರಣಗಳು (Harmful chemical Rays) ಅದರೊಳಗೆ ಹೋಗಿ ಅದನ್ನು ಹಾಳುಮಾಡುತ್ತದೆ. ಈ ರೀತಿಯ ಹಿಟ್ಟಿನಿಂದ ಚಪಾತಿ ತಯಾರಿಸಿ ತಿಂದಾಗ ಅದು ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಹುದು.

ಭಾರತೀಯ ಶಾಸ್ತ್ರಗಳ ಪ್ರಕಾರ, ಮನೆಯಲ್ಲಿ ಉಳಿದ ಹಿಟ್ಟನ್ನು ಫ್ರಿಜ್ ನಲ್ಲಿ ಇಟ್ಟಾಗ, ಅದು ಗಟ್ಟಿಯಾಗಿ ದೇಹದ ರೂಪವನ್ನು ಪಡೆಯುತ್ತದೆ. ಇದರಿಂದ ಮನೆಯಲ್ಲಿ ದೆವ್ವಗಳು ಅಥವಾ ನಕಾರಾತ್ಮಕ ಎನರ್ಜಿ (negative energy) ಸುಳಿಯುವ ಸಾಧ್ಯತೆ ಇದೆ ಎಂದು ಶಾಸ್ತ್ರಗಳು ನಂಬುತ್ತವೆ. 

click me!