ಏರ್ ಇಂಡಿಯಾ ಗೆದ್ದ ಟಾಟಾಗೆ ಫ್ಲೈಟ್ ಶೇಪ್ ಕುಕೀಸ್ ಗಿಫ್ಟ್

First Published | Oct 12, 2021, 5:51 PM IST
  • ಚಂದದ ಕುಕೀಸ್ ನೋಡಿ ರತನ್ ಟಾಟ ಫುಲ್ ಹ್ಯಾಪಿ
  • ಫೋಟೋವನ್ನು ಶೇರ್ ಮಾಡಿದ ಉದ್ಯಮಿ

ಟಾಟಾ ಸನ್ಸ್ ನ ಅಧ್ಯಕ್ಷ ರತನ್ ಟಾಟಾ(Ratan Tata) ಸಾಲದ ಶೂಲದಲ್ಲಿದ್ದ ಏರ್ ಇಂಡಿಯಾ(Air India) ಬಿಡ್ ಗೆದ್ದಿದ್ದರಿಂದ ಸಂಭ್ರಮಿಸಿದ್ದಾರೆ. ಟಾಟಾ ಒಂದು ಫೋಟೋ ಶೇರ್ ಮಾಡಿದ್ದಾರೆ. ಇದು ಫ್ಲೈಟ್ ಆಕಾರದ ಕುಕಿಯ ಪೋಟೋ.

ಏರ್ ಇಂಡಿಯಾದ ಕೆಂಪು ಮತ್ತು ಬಿಳಿ ಬಣ್ಣಗಳಲ್ಲಿ ಬಣ್ಣ ಹೊಂದಿರುವ ಕುಕಿಯನ್ನು ಗಿಫ್ಟ್ ಮಾಡಲಾಗಿದೆ. ಸೋಮವಾರ ಹಂಚಿಕೊಂಡ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಸರ್ ರತನ್ ಟಾಟಾ ಇನ್‌ಸ್ಟಿಟ್ಯೂಟ್ (ಆರ್‌ಟಿಐ) ಅನ್ನು ಟ್ಯಾಗ್ ಮಾಡಿದ್ದಾರೆ.

Tap to resize

ಸರ್ ರತನ್ ಟಾಟಾ ಇನ್‌ಸ್ಟಿಟ್ಯೂಟ್ ಈ ಚಂದದ ಕುಕೀಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಸರ್ ರತನ್ ಟಾಟಾ ಇನ್ಸ್ಟಿಟ್ಯೂಟ್ ಫ್ಲೈಟ್ ಆಕಾರದ ಕುಕೀ ಪ್ಯಾಕೆಟ್ ಮೇಲೆ 'ವೆಲ್ ಕಮ್ ಬ್ಯಾಕ್ ಏರ್ ಇಂಡಿಯಾ' ಎಂದು ಬರೆಯಲಾಗಿದೆ.

ಸರ್ ರತನ್ ಟಾಟಾ ಸಂಸ್ಥೆ ಒಂದು ಸರ್ಕಾರೇತರ ಸಂಸ್ಥೆ (NGO) ಆಧಾರಿತ ಬೇಕರಿಯಾಗಿದ್ದು ಇದು ಮುಂಬೈನಲ್ಲಿದೆ. ಅರ್ಥಪೂರ್ಣ ಉದ್ಯೋಗದ ಮೂಲಕ ಸಮುದಾಯದ ಬಡ ಮಹಿಳೆಯರಿಗೆ ಜೀವನೋಪಾಯ ಒದಗಿಸುವ ಉದ್ದೇಶದಿಂದ 1926 ರಲ್ಲಿ ರತನ್ ಟಾಟಾ ಅವರ ಪತ್ನಿ ಲೇಡಿ ನವಜ್ಬಾಯಿ ಟಾಟಾ ಅವರು ಈ ಬೇಕರಿಯನ್ನು ಆರಂಭಿಸಿದರು.

1932 ರಲ್ಲಿ, ನವಜಬಾಯಿ ಸರ್ ರತನ್ ಟಾಟಾ ಟ್ರಸ್ಟ್‌ನ ಅಧ್ಯಕ್ಷರಾದರು. ಮತ್ತು ಟಾಟಾ ಸನ್ಸ್ ಮಂಡಳಿಯ ಪ್ರಮುಖ ಸದಸ್ಯ. ಟ್ರಸ್ಟ್‌ನ ಸಂಪನ್ಮೂಲಗಳ ಸಹಾಯದಿಂದ, ನವಾಜ್ಬಾಯಿ ಬಡತನವನ್ನು ತೊಡೆದುಹಾಕಲು ಮತ್ತು ಆರ್ಥಿಕವಾಗಿ ತೊಂದರೆಗೀಡಾದವರ ಜೀವನದ ಗುಣಮಟ್ಟವನ್ನು ಸುಧಾರಿಸಲು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡರು.

ಟಾಟಾ ಸಮೂಹ ತನ್ನ ಬಳಿ ಇರುವ ಅಪಾರ ಮಿಗತೆ ಹಣ ಬಳಸಿ, ಏರ್‌ ಇಂಡಿಯಾವನ್ನೇನೋ ಖರೀದಿಸಿದೆ. ಆದರೆ ಸರ್ಕಾರಿ ಮನಸ್ಥಿತಿಯ ಕಂಪನಿಯನ್ನು ಮರಳಿ ಸ್ಪರ್ಧಾತ್ಮಕ ಮನಸ್ಥಿತಿಗೆ ತಂದು ಅದನ್ನು ಲಾಭದ ಹಾದಿಯತ್ತ ನಡೆಸುವುದು ದೊಡ್ಡ ಸವಾಲು(Challenge).

Latest Videos

click me!