ಹಾಗಲಕಾಯಿಯೊಂದಿಗೆ ಈ ಆಹಾರಗಳನ್ನು ತಪ್ಪಿಯೂ ತಿನ್ನಬೇಡಿ!

First Published Dec 15, 2022, 12:53 PM IST

ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದರೂ, ಹಾಗಲಕಾಯಿಯೊಂದಿಗೆ ಕೆಲವು ಆಹಾರಗಳನ್ನು ತಿನ್ನೋದನ್ನು ನಿಷೇಧಿಸಲಾಗಿದೆ ಎಂದು ನಿಮಗೆ ತಿಳಿದಿದ್ಯಾ? ಹಾಗಲಕಾಯಿಯನ್ನು ಈ ಆಹಾರಗಳೊಂದಿಗೆ ತಿನ್ನೋದರಿಂದ ಆರೋಗ್ಯಕ್ಕೆ ಪ್ರಯೋಜನವಾಗೋದಿಲ್ಲ ಬದಲಿಗೆ ಹಾನಿಯಾಗುತ್ತೆ.  

ರುಚಿಯಲ್ಲಿ ಹಾಗಲಕಾಯಿ (Bitter gourd) ಕಹಿಯಾದರೂ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಇದನ್ನು ನಿಯಮಿತವಾಗಿ ಸೇವಿಸುವ ಮೂಲಕ, ಮಧುಮೇಹ ಮಾತ್ರವಲ್ಲದೆ, ವ್ಯಕ್ತಿಯು ಅನೇಕ ರೋಗಗಳಿಂದ ದೂರವಿರುತ್ತಾನೆ. ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದರೂ, ಹಾಗಲಕಾಯಿಯೊಂದಿಗೆ ಕೆಲವು ಆಹಾರಗಳನ್ನು ತಿನ್ನಲೇಬಾರದು ಎಂದು ನಿಮಗೆ ತಿಳಿದಿದ್ಯಾ? ಈ ಆಹಾರಗಳ ಜೊತೆ ಹಾಗಲಕಾಯಿ ತಿನ್ನೋದರಿಂದ ಆರೋಗ್ಯಕ್ಕೆ ಪ್ರಯೋಜನವಲ್ಲ ಆದರೆ ನಷ್ಟ ಅನುಭವಿಸಬೇಕಾಗಬಹುದು. ಅಂತಹ ಕೆಲವು ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ. 

ಮೊದಲಿಗೆ ಹಾಗಲಕಾಯಿಯ ಪ್ರಯೋಜನಗಳ ಬಗ್ಗೆ ತಿಳಿಯೋಣ

ಕಹಿ ರುಚಿಗೆ ಹೆಸರುವಾಸಿಯಾದ ಹಾಗಲಕಾಯಿಯಲ್ಲಿ ಆಂಟಿ-ಆಕ್ಸಿಡೆಂಟ್ಸ್ ಮತ್ತು ಜೀವಸತ್ವಗಳು (Vitamins) ಹೇರಳವಾಗಿವೆ. ಇದನ್ನು ಸೇವಿಸುವ ಮೂಲಕ, ಕ್ಯಾರೋಟಿನ್, ಬೀಟಾ ಕ್ಯಾರೋಟಿನ್, ರಂಜಕ, ಕಬ್ಬಿಣ (Iron), ಸತು, ಪೊಟ್ಯಾಸಿಯಮ್ (Potassium), ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳನ್ನು ದೇಹವು ಪಡೆಯುತ್ತದೆ.

ಹಾಗಲಕಾಯಿ ತಿಂದ ನಂತರ ಈ ಆಹಾರಗಳನ್ನು ಸೇವಿಸಬೇಡಿ :

ಹಾಲು (Milk)-
ಹಾಗಲಕಾಯಿ ತಿಂದ ನಂತರ ಹಾಲನ್ನು ಸೇವಿಸಬಾರದು. ಇದನ್ನು ಮಾಡೋದರಿಂದ,  ಹೊಟ್ಟೆ ಸಮಸ್ಯೆಗಳು ಉಂಟಾಗಬಹುದು. ಹಾಗಲಕಾಯಿ ತಿಂದ ನಂತರ ಹಾಲು ಕುಡಿಯೋದರಿಂದ ಮಲಬದ್ಧತೆ, ನೋವು ಮತ್ತು ಹೊಟ್ಟೆಯಲ್ಲಿ ಕಿರಿಕಿರಿ ಉಂಟಾಗಬಹುದು. 
 

ಬೆಂಡೆಕಾಯಿ -(Ladies finger)

ಹಾಗಲಕಾಯಿ ತಿಂದ ನಂತರ ಬೆಂಡೆಕಾಯಿಯಂತಹ ತರಕಾರಿಗಳನ್ನು ಸಹ ಸೇವಿಸಬಾರದು. ಇದನ್ನು ತಿನ್ನೋದರಿಂದ, ಹಾಗಲಕಾಯಿಯೊಂದಿಗೆ ಬೆಂಡೆಕಾಯಿಯನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ತೊಂದರೆಯಾಗಬಹುದು. 

ಮಾವಿನ ಹಣ್ಣು- (Mango)

ಹಾಗಲಕಾಯಿಯೊಂದಿಗೆ ಮಾವಿನ ಹಣ್ಣನ್ನು ಸೇವಿಸಿದರೆ ಆರೋಗ್ಯ ಹಾಳುಮಾಡಬಹುದು. ಇದು ವಾಂತಿ, ಕಿರಿಕಿರಿ, ವಾಕರಿಕೆ ಮತ್ತು ಅಸಿಡಿಟಿ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಎರಡೂ ವಿಷಯಗಳನ್ನು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತೆ.
 

ಮೂಲಂಗಿ-(Radish)

ಹಾಗಲಕಾಯಿ ಸೇವಿಸಿದ ನಂತರ ಮೂಲಂಗಿ ಅಥವಾ ಮೂಲಂಗಿಯಿಂದ ಮಾಡಿದ ಆಹಾರ ಸೇವಿಸಬೇಡಿ. ಮೂಲಂಗಿ ಮತ್ತು ಹಾಗಲಕಾಯಿಯ ವಿಭಿನ್ನ ರುಚಿಯಿಂದಾಗಿ, ಇದು ನಿಮಗೆ ಗಂಟಲಿನಲ್ಲಿ ಏನೋ ಕಸಿವಿಸಿಯಾಗಬಹುದು. ಕೆಮ್ಮು ಮತ್ತು ಆ್ಯಸಿಡಿಟಿ ಕಾಡಬಹುದು. 

ಮೊಸರು-

ಹಾಗಲಕಾಯಿಯೊಂದಿಗೆ ಮೊಸರನ್ನು ಸೇವಿಸಬೇಡಿ. ಹಾಗಲಕಾಯಿ ಸೇವಿಸಿದ ನಂತರ ನೀವು ಮೊಸರನ್ನು ಸೇವಿಸಿದರೆ, ನಿಮಗೆ ಚರ್ಮದ ದದ್ದಿನ ಸಮಸ್ಯೆಗಳು ಉಂಟಾಗಬಹುದು. ಆದುದರಿಂದ ಈ ತಪ್ಪನ್ನು ಮಾಡಬೇಡಿ.

ಹಾಗಲಕಾಯಿಯನ್ನು ರಾತ್ರಿ ಸೇವಿಸಬೇಡಿ

ರಾತ್ರಿ ಹಾಗಲಕಾಯಿ ಸೇವಿಸೋದನ್ನು ಅವಾಯ್ಡ್ ಮಾಡಿ. ಏಕೆಂದರೆ ಹಾಗಲಕಾಯಿ ವಾತದ ಅಂಶವೆಂದು ಪರಿಗಣಿಸಲಾಗುತ್ತದೆ, ನೀವು ರಾತ್ರಿಯಲ್ಲಿ ಹಾಗಲಕಾಯಿ ಸೇವಿಸಿದರೆ, ಅದು ಹೊಟ್ಟೆಯಲ್ಲಿ ಗ್ಯಾಸ್ (Gas) ಸೃಷ್ಟಿಸುತ್ತದೆ ಮತ್ತು ಹೊಟ್ಟೆ ನೋವು, ಹೊಟ್ಟೆ ಸೆಳೆತದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತೆ. ಹಾಗಾಗಿ ರಾತ್ರಿಯಲ್ಲಿ ಹಾಗಲಕಾಯಿ ತಿನ್ನುವುದನ್ನು ತಪ್ಪಿಸಿ.

click me!