ನಾವು ಎಷ್ಟೇ ಕೆಲಸ ಮಾಡಿದರೂ, ಕೆಲಸ ಮುಗಿಯೋದಿಲ್ಲ. ಆದ್ದರಿಂದ, ಕೆಲಸವನ್ನು ಸುಲಭಗೊಳಿಸಲು ಕೆಲವು ಅಡುಗೆ ಮನೆ ಟಿಪ್ಸ್ (Kitchen tips) ಫಾಲೋ ಮಾಡಬೇಕು. ವಾರಕ್ಕೊಮ್ಮೆ ಮಾಡಬಹುದಾದ ಮತ್ತು ಕೆಲಸವನ್ನು ಕಡಿಮೆ ಮತ್ತು ಸುಲಭಗೊಳಿಸುವ ಕೆಲವು ವಿಷಯಗಳಿವೆ. ಈ ಲೇಖನದಲ್ಲಿ ಅಂತಹ ಕೆಲವು ಸಲಹೆಗಳು ಮತ್ತು ತಂತ್ರಗಳ ಬಗ್ಗೆ ಕಲಿಯಿರಿ, ಅದರ ಸಹಾಯದಿಂದ ನೀವು ವಾರದ ಕೆಲಸವನ್ನು ಕಡಿಮೆ ಮಾಡಬಹುದು. ಈ ಸಲಹೆಗಳು ಯಾವುವು ಎಂದು ತಿಳಿಯೋಣ.
ಈರುಳ್ಳಿಯನ್ನು(Onion) ಫ್ರೈ ಮಾಡಿಡಿ
ಪ್ರತಿದಿನ ಬೆಳಿಗ್ಗೆ ಎದ್ದೇಳೋದು ಮತ್ತು ಅಡುಗೆಗಾಗಿ ಈರುಳ್ಳಿಯನ್ನು ಕತ್ತರಿಸೋದು ತುಂಬಾ ಬೇಜಾರಿನ ಕೆಲಸ. ಆದ್ದರಿಂದ ಈ ಕೆಲಸವನ್ನು ಈಸಿ ಏಕೆ ಮಾಡಬಾರದು. ಇದಕ್ಕೆ ಉತ್ತಮ ಮಾರ್ಗವೆಂದರೆ ಈರುಳ್ಳಿ ಸಿಪ್ಪೆ ಸುಲಿದು ಕತ್ತರಿಸೋದು. ನಿಮಗೆ ಬೇಕಾದ ರೀತಿಯಲ್ಲಿ ಈರುಳ್ಳಿಯನ್ನು ಸಣ್ಣ ಅಥವಾ ದೊಡ್ಡದಾಗಿ ಕತ್ತರಿಸಿ.
ಈ ಕತ್ತರಿಸಿದ ಈರುಳ್ಳಿಗಳನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ಮತ್ತು ಸ್ವಲ್ಪ ಎಣ್ಣೆಯೊಂದಿಗೆ ಕರಿಯಿರಿ, ಅದನ್ನು ಚೆನ್ನಾಗಿ ಫ್ರೈ(Fry) ಮಾಡಿದ ನಂತರ, ಅವುಗಳನ್ನು ಗಾಜಿನ ಜಾರ್ ನಲ್ಲಿ ಇರಿಸಿ. ಈರುಳ್ಳಿಯನ್ನು ಹುರಿಯುವಾಗ, ಅದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ, ಇದರಿಂದ ಈರುಳ್ಳಿ ಚೆನ್ನಾಗಿ ಬೇಯುತ್ತೆ.
ಬೆಳ್ಳುಳ್ಳಿಯನ್ನು(Garlic) ಬಳಸೋದು ಹೇಗೆ?
ಬೆಳ್ಳುಳ್ಳಿ ಅಡುಗೆಗೆ ವಿಶಿಷ್ಟ ರುಚಿ ನೀಡುತ್ತೆ. ಸ್ವಾಧ ಹೆಚ್ಚಿಸುತ್ತೆ. ಬೆಳ್ಳುಳ್ಳಿಯನ್ನು ಆಹಾರದಲ್ಲಿ ಬಳಸುವಾಗಲೆಲ್ಲಾ, ಪ್ರತಿದಿನ ಅವುಗಳನ್ನು ಸಿಪ್ಪೆ ಸುಲಿದು ಬಳಸುತ್ತೇವೆ, ಆದರೆ ಇದು ತುಂಬಾ ಟೈಮ್ ತೊಗೊಳ್ಳೋ ಕೆಲಸವಾಗಿದೆ. ಇದಕ್ಕಾಗಿ, ನೀವು ಮಾಡಬೇಕಾದ ಏಕೈಕ ಕೆಲಸವೆಂದರೆ ಮೊದಲೇ ಬೆಳ್ಳುಳ್ಳಿ ಸುಲಿಯಿರಿ.
ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು(Oil) ಬಿಸಿ ಮಾಡಿ ಮತ್ತು ಅದರಲ್ಲಿ ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಬೇಯಿಸಿ. ಬೆಳ್ಳುಳ್ಳಿಯನ್ನು ಹೀಗೆ ಮಾಡುವ ಮೂಲಕ, ನೀವು ಯಾವುದೇ ಅಡುಗೆ ತಯಾರಿಸಬೇಕಾದಾಗಲೆಲ್ಲಾ, ಅದನ್ನು ನೇರವಾಗಿ ಬಳಸಬಹುದು. ಅದನ್ನು ಸಂಗ್ರಹಿಸಲು ಏರ್ ಟೈಟ್ ಜಾರ್ ಬಳಸಿ.
ಟೊಮೆಟೊ(Tomato) ಬೇಯಿಸೋದು ಹೇಗೆ?
ಸಣ್ಣ ವಸ್ತುಗಳು ನಮ್ಮ ಸಮಯ ತಿನ್ನುತ್ತವೆ ಮತ್ತು ಅವುಗಳಲ್ಲಿ ಒಂದು ಟೊಮೆಟೊ. ಬೆಳಗಿನ ಹೆಚ್ಚಿನ ಸಮಯವು ಈ ಕೆಲಸಗಳನ್ನು ಮಾಡಲು ಹೋಗುತ್ತೆ. ಇದಕ್ಕಾಗಿ, ನಿಮ್ಮ ರಜಾದಿನಗಳಲ್ಲಿ ನೀವು ಸ್ವಲ್ಪ ಸಮಯ ತೆಗೆದುಕೊಳ್ಳಬೇಕು ಮತ್ತು ಎಣ್ಣೆ ಮತ್ತು ನೀರನ್ನು ಸೇರಿಸದೆ ಟೊಮೆಟೊವನ್ನು ಬೇಯಿಸಬೇಕು.
ಟೊಮೆಟೊ ನೀರನ್ನು ಬಿಡಲು ಪ್ರಾರಂಭಿಸಿದಾಗ, ಅದಕ್ಕೆ 2 ಟೀಸ್ಪೂನ್ ಎಣ್ಣೆ ಸೇರಿಸಿ. ಇದು ನಿಮ್ಮ ಟೊಮೆಟೊವನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತೆ. ಹೀಗೆ ಮಾಡೋದ್ರಿಂದ ಹೆಚ್ಚು ದಿನ ಟೊಮೇಟೊ ಕೆಡದಂತೆ ನೋಡಿಕೊಳ್ಳಬಹುದು.
ಶುಂಠಿಯನ್ನು(Ginger) ಈ ರೀತಿ ಸ್ಟೋರ್ ಮಾಡಿ
ಅಡುಗೆಗೆ ಶುಂಠಿಯನ್ನು ಸೇರಿಸೋದಾದ್ರೆ, ಈ ವಿಧಾನವನ್ನು ಪ್ರಯತ್ನಿಸಬಹುದು. ಮೊದಲನೆಯದಾಗಿ, ಶುಂಠಿಯನ್ನು ಜಾರ್ ನಲ್ಲಿ ಬಿಗಿಯಾಗಿ ಹಾಕಿ. ಗಾಳಿಯಾಡದ ಪಾತ್ರೆಯಲ್ಲಿ ಶುಂಠಿಯನ್ನು ಇರಿಸಿ ಮತ್ತು ಅದರಲ್ಲಿ ಏಲಕ್ಕಿ ಹಾಕಿ, ಇದು ಶುಂಠಿ ಹಾಳಾಗೋದನ್ನು ತಡೆಯುತ್ತೆ. ಅದನ್ನು ಬೇಯಿಸುವ ಅಗತ್ಯವಿಲ್ಲ. ಈಗ ಇದನ್ನು ಅಡುಗೆಗೆ ಮತ್ತು ಚಹಾದಲ್ಲಿ ಬಳಸಬಹುದು. ಇವೆಲ್ಲವನ್ನೂ ಏರ್ ಟೈಟ್ ಕಂಟೇನರ್ ನಲ್ಲಿ ಇರಿಸಿ.
ನೀವು ಸಹ ಈ ಟಿಪ್ಸ್(Tips) ಅನುಸರಿಸಿ ಮತ್ತು ಅದರಿಂದ ಎಷ್ಟು ಸಹಾಯವಾಗುತ್ತೆ ನೀವೇ ನೋಡಿ