ಕಿವಿ ಹಣ್ಣನ್ನು ತಿನ್ನಿ ಆದರೆ ಸಿಪ್ಪೆ ಎಸೆಯೋ ಬದ್ಲು, ಈ ರೀತಿ ಬಳಸಿ

First Published | Dec 14, 2022, 11:04 AM IST

ಕಿವಿ ಹಣ್ಣು ತಿಂದಿದ್ದೀರಿ ಅಲ್ವಾ? ಅದ್ರ ಸಿಪ್ಪೇನಾ ಏನು ಮಾಡ್ತೀರಾ? ಇನ್ನೇನು ಮಾಡಕ್ಕಾಗುತ್ತೆ ಅಲ್ವಾ? ಬೀಸಾಕ್ತೀವಿ… ಇದೇ ತಾನೆ ನಿಮ್ಮ ಉತ್ತರ. ಆದರೆ ಕಿವಿ ಸಿಪ್ಪೆಯಿಂದಲೂ ಏನನ್ನಾದರೂ ತಯಾರಿಸಬಹುದು, ಎಂದು ಎಂದಾದರೂ ಯೋಚಿಸಿದ್ದೀರಾ? ಇಂದು ಈ ಸಿಪ್ಪೆಗಳ ಬಳಕೆಯನ್ನು ತಿಳಿದುಕೊಳ್ಳೋಣ.  

ಚಳಿಗಾಲದಲ್ಲಿ ವಿಟಮಿನ್-ಸಿ (vitamin C) ತಿನ್ನುವುದು ಒಳ್ಳೆಯದು. ಇದು ಆರೋಗ್ಯಕ್ಕೆ ಬಹಳ ಮುಖ್ಯವಾದ ಹಣ್ಣಾಗಿದೆ. ಅದರ ಜ್ಯೂಸ್ ಕುಡಿಯೋದು ಅಥವಾ ಹಣ್ಣಿನ ಸಲಾಡ್ ತಿನ್ನೋದು ನಿಮಗೆ ಬಿಟ್ಟದ್ದು. ಆದರೆ ಕಿವಿ ಸಿಪ್ಪೆಗಳನ್ನು ಸಹ ಬಳಸಬಹುದು ಎಂದು ನೀವು ಯೋಚಿಸಿದ್ದೀರಾ? ಹೌದು, ನೀವು ಕಿವಿ ಹಣ್ಣಿನ ಸಿಪ್ಪೆಗಳನ್ನು ಸಹ ತಿನ್ನಬಹುದು. ಇದರ ಸಿಪ್ಪೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ ಮತ್ತು ಈ ಸಿಪ್ಪೆಗಳು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. 

ಇಲ್ಲಿ ಕಿವಿ ಸಿಪ್ಪೆಗಳ ಕೆಲವು ಉತ್ತಮ ಪಾಕವಿಧಾನಗಳನ್ನು ತಿಳಿಸಲಾಗಿದೆ. ಮುಂದಿನ ಬಾರಿ ಮನೆಗೆ ಕಿವಿ ಹಣ್ಣು (Kiwi fruit) ತಂದಾಗ ಅದರ ಸಿಪ್ಪೆಯನ್ನು ಎಸೆಯುವ ಬದಲು, ಅದರಿಂದ ಏನೆಲ್ಲಾ ತಯಾರಿಸಬಹುದು ಎಂದು ನೋಡಿ, ಅದನ್ನೆ ಮಾಡಿ, ಖಂಡಿತವಾಗಿಯೂ ಎಲ್ಲರೂ ಅದನ್ನು ಇಷ್ಟಪಟ್ಟು ತಿನ್ನುತ್ತಾರೆ.

Tap to resize

ಕಿವಿ ಸಿಪ್ಪೆಯಿಂದ ಜಾಮ್ ಮಾಡಿ (kiwi peel jam)

ನೀವು ಕಿವಿ ಜಾಮ್ ಮಾಡಬಹುದು. ಸಿಪ್ಪೆಗಳನ್ನು ಸೇರಿಸಿ ಮತ್ತು ಅದನ್ನು ಇನ್ನಷ್ಟು ರುಚಿಕರವಾಗಿ ಮಾಡಿ. ಸಿಪ್ಪೆಗಳಿಂದ ಜಾಮ್ ನ ಇನ್ನೂ ಟೇಸ್ಟಿಯಾಗುತ್ತೆ.

ಸಾಮಗ್ರಿಗಳು-
4 ನುಣ್ಣಗೆ ಕತ್ತರಿಸಿದ ಕಿವಿ
1 ಕಪ್ ಕಿವಿ ಹಣ್ಣಿನ ಸಿಪ್ಪೆಗಳು
3/4 ಕಪ್ ಸಕ್ಕರೆ
ಸ್ವಲ್ಪ ನಿಂಬೆ ರಸ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವುದು ಹೇಗೆ?

ಮೊದಲನೆಯದಾಗಿ, ಕಿವಿಯಿಂದ ಸಿಪ್ಪೆಗಳನ್ನು ತೆಗೆದು ಸ್ವಚ್ಛವಾಗಿ ತೊಳೆಯಿರಿ. ಇದರ ನಂತರ, ಅವುಗಳನ್ನು ಕತ್ತರಿಸಿ ಮತ್ತು ಅವುಗಳನ್ನು ಒಂದು ತಟ್ಟೆಯಲ್ಲಿರಿಸಿ.
ಈಗ ಬಾಣಲೆಯನ್ನು ಬಿಸಿ ಮಾಡಿ ಮತ್ತು ಕಿವಿ, ಸಕ್ಕರೆ, ನಿಂಬೆ ರಸ ಮತ್ತು ಉಪ್ಪನ್ನು ಸೇರಿಸಿ ಬೇಯಿಸಿ. ಇದನ್ನು ಕಡಿಮೆ ಉರಿಯಲ್ಲಿ ಇರಿಸಿ. ಚೆನ್ನಾಗಿ ಕೈಯಾಡಿಸಿ.
ಈ ಮಿಶ್ರಣಕ್ಕೆ ಕಿವಿ ಹಣ್ಣಿನ ಸಿಪ್ಪೆಗಳನ್ನು ಸೇರಿಸಿ ಮತ್ತು ಎಲ್ಲವೂ ಕರಗುವವರೆಗೆ 15-20 ನಿಮಿಷಗಳ ಕಾಲ ಬೇಯಿಸಿ.
ಈ ಮಿಶ್ರಣವು ದಪ್ಪವಾದಾಗ, ಗ್ಯಾಸ್ ಆಫ್ ಮಾಡಿ. ಅದನ್ನು ಸಂಪೂರ್ಣವಾಗಿ ತಣ್ಣಗಾಗಿಸಿ ಮತ್ತು ನಂತರ ಅದನ್ನು ಗಾಜಿನ ಜಾರ್ ನಲ್ಲಿ ತುಂಬಿಸಿ. 
ನೀವು ಈ ಜಾರ್ ಅನ್ನು ಫ್ರಿಜ್ ನಲ್ಲಿಡಬಹುದು ಮತ್ತು ಬೇಕಾದಾಗಲೆಲ್ಲಾ ಬ್ರೆಡ್ ನೊಂದಿಗೆ (jam with bread) ಸವಿಯಬಹುದು.

ಕಿವಿ ಸಿಪ್ಪೆಯಿಂದ ಚಿಪ್ಸ್ ಮಾಡಿ (kiwi peel chips)

ನೀವು ಕಿವಿಯಿಂದ ಚಿಪ್ಸ್ ಸಹ ತಯಾರಿಸಬಹುದು. ಇದರ ಚಿಪ್ಸ್ ಹುಳಿ-ಸಿಹಿಯಾಗಿರುತ್ತದೆ, ಇದು ಚಾಟ್ ಮಸಾಲಾದೊಂದಿಗೆ ತಿನ್ನಲು ತುಂಬಾನೆ ಚೆನಾಗಿರುತ್ತೆ.

ಸಾಮಗ್ರಿಗಳು :
2 ಕಪ್ ಕಿವಿ ಸಿಪ್ಪೆಗಳು
ಬೆಣ್ಣೆ
1/2 ಟೀಸ್ಪೂನ್ ಚಾಟ್ ಮಸಾಲಾ

ಮಾಡುವುದು ಹೇಗೆ?

ಮೊದಲನೆಯದಾಗಿ, ಓವನ್ ಅನ್ನು 200 ಡಿಗ್ರಿ ಸೆಲ್ಸಿಯಸ್ ಗೆ ಪ್ರೀಹೀಟ್ ಮಾಡಿ. 
ಸಿಪ್ಪೆಗಳನ್ನು ತೊಳೆದು ಬಟ್ಟೆ ಅಥವಾ ಕಾಗದದಲ್ಲಿ ಹರಡಿ, ಇದರಿಂದ ಸಿಪ್ಪೆಗಳು ಒಣಗುತ್ತವೆ.
ಇದರ ನಂತರ, ಕಿವಿ ಸಿಪ್ಪೆಗಳನ್ನು ಬೇಕಿಂಗ್ ಪ್ಲೇಟ್ ನಲ್ಲಿ ಹರಡಿ ಮತ್ತು ಅದರ ಮೇಲೆ ಬೆಣ್ಣೆಯನ್ನು ಹಚ್ಚಿ. 
ಇದನ್ನು ಓವನ್ ನಲ್ಲಿ ಹಾಕಿ, 10 ನಿಮಿಷಗಳ ಕಾಲ ಬೇಕ್ ಮಾಡಿ. ನಂತರ, ಅದನ್ನ ತೆಗೆದು ಅದರ ಮೇಲೆ ಚಾಟ್ ಮಸಾಲಾ ಹಾಕಿ. ನೀವು ಇದನ್ನು ಗ್ರೀನ್ ಚಟ್ನಿ ಅಥವಾ ಟೊಮೆಟೊ ಸಾಸ್ ನೊಂದಿಗೆ ತಿನ್ನಬಹುದು.

ಕಿವಿ ಸಿಪ್ಪೆಯಿಂದ ಕ್ಯಾಂಡಿ ತಯಾರಿಸಿ

ಕಿವಿ ಸಿಪ್ಪೆಯಿಂದ ನೀವು ರುಚಿಕರವಾದ ಕ್ಯಾಂಡಿ ಸಹ ತಯಾರಿಸಬಹುದು. ಈಗಾಗಲೇ ನೀವು ಕಿವಿ ಮಿಠಾಯಿ ತಿಂದಿರಬಹುದು, ಈಗ ಅದರ ಸಿಪ್ಪೆಯಿಂದ ಕ್ಯಾಂಡಿಯನ್ನು ತಯಾರಿಸಬಹುದು. ಹೇಗೆ ಅನ್ನೋದನ್ನು ನೋಡೋಣ.

ಸಾಮಗ್ರಿಗಳು-
1 ದೊಡ್ಡ ಕಪ್ ಸಕ್ಕರೆ
1.5 ಕಪ್ ನೀರು
2 ಕಪ್ ಕಿವಿ ಸಿಪ್ಪೆಗಳು
ಗ್ರೀನ್ ಫುಡ್ ಕಲರ್ (ಬೇಕಾದಲ್ಲಿ ಮಾತ್ರ) (green food color)

ಮಾಡುವುದು ಹೇಗೆ?

ಕಿವಿಯ ಸಿಪ್ಪೆ ಮುರಿಯದಂತೆ ಅದನ್ನು ಹಣ್ಣಿನಿಂದ ಬೇರ್ಪಡಿಸಿ. ನೀವು ಅವುಗಳನ್ನು ಉದ್ದವಾಗಿ ಅಥವಾ ಉಂಗುರ ಆಕಾರದಲ್ಲಿ ಸಿಪ್ಪೆ ಸುಲಿಯಬಹುದು.
ಇದರ ನಂತರ, ಬಾಣಲೆಯಲ್ಲಿ ಸಕ್ಕರೆ ಮತ್ತು ನೀರು ಸೇರಿಸಿ ಬಿಸಿ ಮಾಡಿ. ಸಕ್ಕರೆ ಸಂಪೂರ್ಣವಾಗಿ ಕರಗಿದಾಗ, ಅದಕ್ಕೆ 1 ಹನಿ ಗ್ರೀನ್ ಫುಡ್ ಕಲರ್ ಸೇರಿಸಿ.
ಈಗ ಅದಕ್ಕೆ ಕಿವಿ ಹಣ್ಣಿನ ಸಿಪ್ಪೆಗಳನ್ನು ಸೇರಿಸಿ. ನೀವು ಕಿವಿಯ ತೆಳುವಾದ ಹೋಳುಗಳನ್ನು ಕತ್ತರಿಸಿ ಅದರಲ್ಲಿ ಹಾಕಬಹುದು. 
ಇದನ್ನು ಸುಮಾರು 10 ನಿಮಿಷಗಳ ಕಾಲ ಬೇಯಿಸಿ ಮತ್ತು ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. 
ಈ ಸಿರಪ್ ನಿಂದ ಕಿವಿಯ ತುಂಡುಗಳು ಮತ್ತು ಸಿಪ್ಪೆಗಳನ್ನು ತೆಗೆದು ಕಾಗದದ ಮೇಲೆ ಒಂದು ಅಂತರದಲ್ಲಿ ಹರಡಿ. ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ, ಈಗ ಕಿವಿ ಸಿಪ್ಪೆ ಕ್ಯಾಂಡಿ ತಿನ್ನಲು ತಯಾರಿರುತ್ತೆ.

Latest Videos

click me!