ಬರೀ ರಾಗಿ ಹಿಟ್ಟಿನಿಂದ ಇಡ್ಲಿ ಮಾಡಿದ್ರೆ ಕಲ್ಲಿನಂತೆ ಗಟ್ಟಿಯಾಗುತ್ತೆ... ಈ 2 ಪದಾರ್ಥ ಸೇರಿಸಿದ್ರೆ ಬೆಣ್ಣೆಯಂಗೆ ಬರುತ್ತೆ

Published : Sep 16, 2026, 09:33 PM IST

Ragi idli recipe: ಇಡ್ಲಿ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೇದು. ಬರೀ ಅಕ್ಕಿ ಮಾತ್ರವಲ್ಲ, ರಾಗಿ ಹಿಟ್ಟಿನಿಂದಲೂ ನಾವು ಮೃದುವಾದ ಇಡ್ಲಿ ಮಾಡಬಹುದು. ಇದನ್ನ ಮಾಡೋದು ಕೂಡ ತುಂಬಾನೇ ಸುಲಭ. ಕೆಲವು ಸಣ್ಣ ಟ್ರಿಕ್ಸ್ ಫಾಲೋ ಮಾಡಿದ್ರೆ ಸಾಕು, ಬಿಸಿ ಬಿಸಿ ಮೃದುವಾದ ರಾಗಿ ಇಡ್ಲಿ ರೆಡಿಯಾಗುತ್ತೆ.

PREV
13
ರಾಗಿ ಇಡ್ಲಿ ಮಾಡಿ ಟೇಸ್ಟ್ ನೋಡಿ...

ದಿನಾ ಒಂದೇ ತರಹದ ಇಡ್ಲಿ ತಿಂದ್ರೆ ಬೋರ್ ಆಗುತ್ತೆ ಅಲ್ವಾ? ಒಮ್ಮೆ ರಾಗಿ ಇಡ್ಲಿ ಮಾಡಿ ಟೇಸ್ಟ್ ನೋಡಿ. ಇದು ಕಲ್ಲಾಗದಂತೆ, ಹತ್ತಿಯ ಹಾಗೆ ಮೃದುವಾಗಿ ಬರಬೇಕು ಅಂದ್ರೆ ಸರಿಯಾದ ಅಳತೆ ಹಾಗೂ ಮಾಡುವ ವಿಧಾನ ನಮಗೆ ಗೊತ್ತಿರಬೇಕು. ರಾಗಿ ಇಡ್ಲಿ ಹೇಗೆ ಮಾಡೋದು ಅಂತ ಇಲ್ಲಿ ತಿಳಿದುಕೊಳ್ಳಿ.

23
ಬೇಕಾಗುವ ಸಾಮಗ್ರಿಗಳು

ರಾಗಿ ಹಿಟ್ಟು – 1 ಕಪ್
ಇಡ್ಲಿ ರವೆ – 1 ಕಪ್
ಉದ್ದಿನಬೇಳೆ – 1 ಕಪ್
ಅವಲಕ್ಕಿ – ½ ಕಪ್ (ನೆನೆಸಿದ)
ಮೆಂತ್ಯ – ½ ಟೀಸ್ಪೂನ್
ಕಲ್ಲುಪ್ಪು – ರುಚಿಗೆ ತಕ್ಕಷ್ಟು
ತಣ್ಣೀರು – ರುಬ್ಬಲು ಬೇಕಾಗುವಷ್ಟು

33
ಮಾಡುವ ವಿಧಾನ

1. ಉದ್ದಿನಬೇಳೆ ಹಾಗೂ ಮೆಂತ್ಯವನ್ನು ಸೇರಿಸಿ 4 ರಿಂದ 5 ಗಂಟೆಗಳ ಕಾಲ ನೆನೆಸಿಡಿ. ಇಡ್ಲಿ ರವೆ ಮತ್ತು ಅವಲಕ್ಕಿಯನ್ನು ಕೂಡ ಪ್ರತ್ಯೇಕವಾಗಿ ನೆನೆಸಿ.

2. ಉದ್ದಿನಬೇಳೆಯನ್ನು ನೊರೆ ಬರುವ ಹಾಗೆ ನುಣ್ಣಗೆ ರುಬ್ಬಿಕೊಳ್ಳಿ. ಹೀಗೆ ರುಬ್ಬಿದ ಹಿಟ್ಟಿಗೆ ರಾಗಿ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

3. ಈ ಮಿಶ್ರಣಕ್ಕೆ ನೆನೆಸಿ ಹಿಂಡಿದ ಇಡ್ಲಿ ರವೆ ಅಥವಾ ಅವಲಕ್ಕಿ ಪೇಸ್ಟ್ ಹಾಕಿ ಕಲೆಸಿ. ಇದಕ್ಕೆ ಕಲ್ಲುಪ್ಪು ಸೇರಿಸಿದರೆ ಹಿಟ್ಟು ಚೆನ್ನಾಗಿ ಹುದುಗು ಬರುತ್ತದೆ.

4. ಹಿಟ್ಟು ತುಂಬಾ ತೆಳುವಾಗಿ ಇರಬಾರದು, ಸ್ವಲ್ಪ ಜಾರುವ ಹದದಲ್ಲಿ ಇರಲಿ. ಈ ಮಿಶ್ರಣವನ್ನು ಮುಚ್ಚಿ, ಬೆಚ್ಚಗಿನ ಜಾಗದಲ್ಲಿ 8 ರಿಂದ 12 ಗಂಟೆಗಳ ಕಾಲ ಹುದುಗು ಬರಲು ಬಿಡಿ.

5. ಹಿಟ್ಟು ಹುದುಗು ಬಂದ ಮೇಲೆ ಸೌಟಿನಿಂದ ವೇಗವಾಗಿ ತಿರುಗಿಸಬೇಡಿ. ಒಳಗಿರುವ ಗಾಳಿಯ ಗುಳ್ಳೆಗಳು ಒಡೆಯದಂತೆ ನಿಧಾನವಾಗಿ ಒಮ್ಮೆ ಮಾತ್ರ ಕಲೆಸಿ.

6. ಇಡ್ಲಿ ಪ್ಲೇಟ್‌ಗಳಿಗೆ ಈ ಮಿಶ್ರಣವನ್ನು ಹಾಕಿ, ಮೀಡಿಯಂ ಉರಿಯಲ್ಲಿ 10 ರಿಂದ 12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ.

7. ಅಷ್ಟೇ, ರುಚಿಯಾದ ರಾಗಿ ಇಡ್ಲಿಗಳು ಮೃದುವಾಗಿ ರೆಡಿಯಾಗುತ್ತವೆ. ಬರೀ ರಾಗಿ ಹಿಟ್ಟಿನಿಂದ ಮಾಡಿದರೆ ಇಡ್ಲಿ ಕಲ್ಲಿನಂತೆ ಗಟ್ಟಿಯಾಗುತ್ತದೆ. ಹಾಗಾಗಿ ಕಡ್ಡಾಯವಾಗಿ ಉದ್ದಿನಬೇಳೆ, ಇಡ್ಲಿ ರವೆ ಅಥವಾ ಅವಲಕ್ಕಿ ಸೇರಿಸಲೇಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories