ಇಡ್ಲಿ-ದೋಸೆಗೆ ಕಡಲೆಬೀಜ, ತೆಂಗಿನಕಾಯಿ ಚಟ್ನಿ ತಿಂದು ಬೇಸರವಾಗಿದ್ಯಾ? ಮಾಡ್ಕೊಳ್ಳಿ ಕುಡು ಚಟ್ನಿ

Published : Feb 11, 2026, 02:31 PM IST

ಇಡ್ಲಿ, ದೋಸೆಗೆ ಯಾವಾಗಲೂ ಮಾಡುವ ಕಾಯಿ ಅಥವಾ ಕಡಲೆಬೀಜ ಚಟ್ನಿಗಿಂತ ವಿಭಿನ್ನವಾದ, ರುಚಿಕರವಾದ ಕುಡು ಚಟ್ನಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಹುರುಳಿ ಕಾಳು ಮತ್ತು ಇತರ ಸಾಮಗ್ರಿಗಳನ್ನು ಬಳಸಿ ತಯಾರಿಸುವ ಈ ಚಟ್ನಿ ಆರೋಗ್ಯಕ್ಕೂ ಉತ್ತಮವಾಗಿದ್ದು, ಚಪಾತಿ ಮತ್ತು ಅನ್ನದೊಂದಿಗೂ ಸವಿಯಬಹುದು.

PREV
15
ರುಚಿಯಾದ ಕುಡು ಚಟ್ನಿ ರೆಸಿಪಿ

ಸಾಮಾನ್ಯವಾಗಿ ಇಡ್ಲಿ, ದೋಸೆ ಮಾಡಿದ್ರೆ ಕಡಲೆಬೀಜ ಅಥವಾ ತೆಂಗಿನಕಾಯಿ ಚಟ್ನಿ ಮಾಡುತ್ತಾರೆ. ಇನ್ನು ಕೆಲವರು ಆಲೂ ಪಲ್ಯ, ಸಾಂಬಾರ್ ಸಹ ತಯಾರಿಸುತ್ತಾರೆ. ಹೋಟೆಲ್‌ಗಳಲ್ಲಿಯೂ ಇದೇ ಚಟ್ನಿ ನೀಡುತ್ತಾರೆ. ಒಂದೇ ರೀತಿಯ ಚಟ್ನಿ ತಿಂದು ಬೇಸರವಾಗಿದ್ರೆ ರುಚಿಯಾದ ಕುಡು ಚಟ್ನಿ ಮಾಡಿಕೊಳ್ಳಿ. ರುಚಿಯ ಜೊತೆಗೂ ಆರೋಗ್ಯಕ್ಕೂ ಇದು ಉತ್ತಮವಾಗಿದೆ. ಕುಡು ಅಂದ್ರೆ ಹುರುಳಿ ಕಾಳು ಎಂದರ್ಥ.

25
ಕುಡು ಚಟ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳು

ಹುರುಳಿಕಾಳು: 1 ಕಪ್, ಧನಿಯಾ ಬೀಜ: 1 ಟೀ ಸ್ಪೂನ್, ಬ್ಯಾಡಗಿ ಮೆಣಸಿನಕಾಯಿ: 4, ಅಡಿಕೆ ಗಾತ್ರದಷ್ಟು ಹುಣಸೆ ಹಣ್ಣು, ತೆಂಗಿನತುರಿ: ಅರ್ಧ ಕಪ್, ಎಣ್ಣೆ: 2 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಸಾಸಿವೆ-ಜೀರಿಗೆ-ಕರೀಬೇವು, ಕೋತಂಬರಿ ಸೊಪ್ಪು

35
ಕುಡು ಚಟ್ನಿ ಮಾಡುವ ವಿಧಾನ

ಮೊದಲಿಗೆ ಹುರುಳಿ ಕಾಳು, ಧನಿಯಾ ಬೀಜ, ಬ್ಯಾಡಗಿ ಮೆಣಸಿನಕಾಯಿ ಮತ್ತು ಹುಣಸೆಹಣ್ಣು ಸೇರಿಸಿಕಂಡು 3-4 ಗಂಟೆ ಕಾಲ ನೆನಸಿಟ್ಟುಕೊಳ್ಳಬೇಕು. ನಂತರ ಇದೆಲ್ಲವನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ.

45
ಹುರುಳಿ ಕಾಳು

ಈಗ ಒಗ್ಗರಣೆ ಹಾಕಿಕೊಳ್ಳಿ ಒಲೆ ಆನ್ ಮಾಡಿಕೊಂಡು ಪಾತ್ರೆ ಇರಿಸಿಕೊಳ್ಳಿ. ಸಾಸಿವೆ-ಜೀರಿಗೆ-ಕರೀಬೇವಿನ ಒಗ್ಗರಣೆ ಮಾಡಿಕೊಂಡು ರುಬ್ಬಿಕೊಂಡಿರುವ ಹುರುಳಿ ಕಾಳಿನ ಮಸಾಲೆಗೆ ಸೇರಿಸಿಕೊಳ್ಳಿ. ಕೊನೆಯದಾಗಿ ಸಣ್ಣದಾಗಿ ಕತ್ತರಿಸಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿದ್ರೆ ಸವಿಯಲು ಕುಡು ಚಟ್ನಿ ರೆಡಿ.

ಇದನ್ನೂ ಓದಿ: ಹೀಗೂ ಮಾಡಬಹುದು ರುಚಿಯಾದ ಎಗ್‌ರೈಸ್; ವಿಶೇಷ ಮತ್ತು ವಿಭಿನ್ನ ಟೇಸ್ಟಿಯ ಅಮ್ಮನ ರೆಸಿಪಿ

55
ಒಗ್ಗರಣೆ

ಗಮನಿಸಿ: ಒಗ್ಗರಣೆಗೆ ಬೇಕಿದ್ರೆ ಉದ್ದಿನಬೆಳೆ, ಬೆಳ್ಳುಳ್ಳಿ, ಕಡಲೆಬೇಳೆ ಮತ್ತು ಇಂಗು ಸೇರಿಸಿಕೊಳ್ಳಬಹುದು. ನೀವು ಸಿಹಿ ಪ್ರಿಯರಾಗಿದ್ರೆ ಹುರುಳಿಕಾಳು ರುಬ್ಬುವಾಗ ತುಂಡುಬೆಲ್ಲ ಹಾಕಿಕೊಳ್ಳಿ. ಬಿಸಿ ಚಪಾತಿ, ರೊಟ್ಟಿ ಮತ್ತು ಅನ್ನಕ್ಕೂ ಕುಡುಚಟ್ನಿ ಒಳ್ಳೆಯ ಕಾಂಬಿನೇಷನ್ ಆಗುತ್ತದೆ.

ಕುಡು  ಚಟ್ನಿ ವಿಡಿಯೋ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ

ಇದನ್ನೂ ಓದಿ: ರಾತ್ರಿ  ಮಾಡಿ ಉಳಿದ ಅನ್ನದಿಂದ ತಯಾರಿಸಿ ರುಚಿಕರವಾದ ಏಳು ರೆಸಿಪಿಗಳು

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories