ನಿಮ್ಮ ಮನೆಯಲ್ಲೂ ರಾತ್ರಿ ಉಳಿದ ಅನ್ನವನ್ನು ಮರುದಿನ ಬೆಳಗ್ಗೆ ಎಸೆಯುತ್ತೀರಾ? ಇನ್ನು ಮುಂದೆ ಹಾಗೆ ಮಾಡಬೇಡಿ! ಉಳಿದ ಅನ್ನದಿಂದ ನೀವು 7 ಸುಲಭ ಮತ್ತು ಆರೋಗ್ಯಕರ ರೆಸಿಪಿಗಳನ್ನು ಮಾಡಬಹುದು.
ಉಳಿದ ಅನ್ನ, ಮೊಸರು, ಕರಿಬೇವು, ಸಾಸಿವೆ, ಹಸಿಮೆಣಸು, ಗೋಡಂಬಿ, ಮತ್ತು ಸ್ವಲ್ಪ ಉಪ್ಪು ತೆಗೆದುಕೊಳ್ಳಿ. ಅನ್ನ ಮತ್ತು ಮೊಸರನ್ನು ಚೆನ್ನಾಗಿ ಮಿಶ್ರಣ ಮಾಡಿ, ಮೇಲೆ ಒಗ್ಗರಣೆ ಹಾಕಿ ಸವಿಯಿರಿ.
ಉಳಿದ ಅನ್ನ, ಸ್ವಲ್ಪ ರವೆ ಅಥವಾ ಬೇಯಿಸಿದ ಆಲೂಗಡ್ಡೆ, ಮೊಸರು, ಉಪ್ಪನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಹಿಟ್ಟನ್ನು 15-20 ನಿಮಿಷ ಹಾಗೆಯೇ ಬಿಡಿ. ನಂತರ ಬಿಸಿ ತವಾ ಮೇಲೆ ದೋಸೆ ಹಾಕಿರಿ.
ಉಳಿದ ಅನ್ನ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್, ಸೋಯಾ ಸಾಸ್, ಹಸಿಮೆಣಸು, ಉಪ್ಪು, ಎಣ್ಣೆ ತೆಗೆದುಕೊಳ್ಳಿ. ಮೊದಲು ತರಕಾರಿಗಳನ್ನು ಹುರಿದು, ಅನ್ನ ಸೇರಿಸಿ. ಸೋಯಾ ಸಾಸ್, ಉಪ್ಪು ಹಾಕಿ ಮಿಶ್ರಣ ಮಾಡಿ.
ಅನ್ನ, ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಮಸಾಲೆ, ಬ್ರೆಡ್ ಕ್ರಂಬ್ಸ್ ಬಳಸಿ. ಎಲ್ಲಾ ಸಾಮಗ್ರಿ ಮಿಶ್ರಣ ಮಾಡಿ ಟಿಕ್ಕಿ ಆಕಾರಕ್ಕೆ ತಂದು ಶಾಲೋ ಫ್ರೈ ಮಾಡಿ. ಇದು ಸಂಜೆಯ ಸ್ನ್ಯಾಕ್ಸ್‌ಗೆ ಉತ್ತಮ ಮತ್ತು ಆರೋಗ್ಯಕರ ಆಯ್ಕೆ.
ಉಳಿದ ಅನ್ನ, ಗೋಧಿ ಹಿಟ್ಟು, ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ತೆಗೆದುಕೊಳ್ಳಿ. ಅನ್ನವನ್ನು ಮಸಾಲೆಗಳೊಂದಿಗೆ ಬೆರೆಸಿ ಹಿಟ್ಟಿನಲ್ಲಿ ಕಲಸಿ. ನಂತರ ಪರಾಠ ಲಟ್ಟಿಸಿ, ತುಪ್ಪ ಹಾಕಿ ಬೇಯಿಸಿ. !
ಅನ್ನ, ಹಾಲು, ಸಕ್ಕರೆ, ತುಪ್ಪ, ಏಲಕ್ಕಿ, ಡ್ರೈ ಫ್ರೂಟ್ಸ್ ಬೇಕು. ತುಪ್ಪದಲ್ಲಿ ಅನ್ನವನ್ನು ಹುರಿದು, ಹಾಲು ಮತ್ತು ಸಕ್ಕರೆ ಸೇರಿಸಿ, ಸಣ್ಣ ಉರಿಯಲ್ಲಿ ಬೇಯಿಸಿ. ಸಿಹಿ ತಿನ್ನಬೇಕೆನಿಸಿದಾಗ ಇದು ಅತ್ಯುತ್ತಮ ಆಯ್ಕೆ.
ಉಳಿದ ಅನ್ನ, ರವೆ ಮತ್ತು ಮೊಸರನ್ನು ಮಿಕ್ಸಿಯಲ್ಲಿ ರುಬ್ಬಿ ಸ್ವಲ್ಪ ದಪ್ಪ ಹಿಟ್ಟು ತಯಾರಿಸಿ. ಇದನ್ನು 15-20 ನಿಮಿಷ ನೆನೆಯಲು ಬಿಡಿ. ನಂತರ ENO ಸೇರಿಸಿ ಮಿಶ್ರಣ ಮಾಡಿ. 10-12 ನಿಮಿಷ ಹಬೆಯಲ್ಲಿ ಬೇಯಿಸಿ.