'ಬೊಂಬಾಟ್ ಭೋಜನ'ದಲ್ಲಿ ಓಣಂ ಸದ್ಯ ಸವಿದ ಮೀಟೂ ಶೃತಿ

Published : Aug 24, 2023, 10:59 AM ISTUpdated : Aug 24, 2023, 11:02 AM IST

ಮೀಟೂ ಆರೋಪದ ನಂತರ ತೆರೆ ಮರೆಗೆ ಸರಿದಿದ್ದ ಶೃತಿ ಹರಿಹರನ್ ಸದ್ಯ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಓಣಂ ಸೀರೆಯುಟ್ಟು, ಪೂಕಳಂ ರಚಿಸಿ, ಓಣಂ ಸ್ಪೆಷಲ್ ಓಟ ಒಣಂ ಸದ್ಯವನ್ನು ಸವಿದಿದ್ದಾರೆ.

PREV
18
'ಬೊಂಬಾಟ್ ಭೋಜನ'ದಲ್ಲಿ ಓಣಂ ಸದ್ಯ ಸವಿದ ಮೀಟೂ ಶೃತಿ

ಮೀಟೂ ಆರೋಪದ ನಂತರ ತೆರೆ ಮರೆಗೆ ಸರಿದಿದ್ದ ಶೃತಿ ಹರಿಹರನ್ ಸದ್ಯ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಓಣಂ ಪ್ರಯುಕ್ತ ಆಯೋಜಿಸಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಶೃತಿ ಹರಿಹರನ್ ಭಾಗವಹಿಸಿದ್ದು, ಈ ಬಗ್ಗೆ ನಟಿ ಶೃತಿ ಹರಿಹರನ್‌ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. 

28

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಬೊಂಬಾಟ್ ಭೋಜನ ಕಾರ್ಯಕ್ರಮವನ್ನು ಹಿರಿಯ ನಟ ಸಿಹಿಕಹಿ ಚಂದ್ರು ನಡೆಸಿಕೊಡುತ್ತಾರೆ. ಪ್ರತೀ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ.

38

ಅದೇ ರೀತಿ ಈ ಬಾರಿ ಓಣಂ ಪ್ರಯುಕ್ತ ನಟಿ ಶೃತಿ ಹರಿಹರನ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ನಟಿ ಬಿಳಿ ಬಣ್ಣದ ಓಣಂ ಸೀರೆಯಲ್ಲಿ ಮಿಂಚಿದ್ದು, ಓಣಂ ಸದ್ಯ ಅಡುಗೆ ಮಾಡಿ ಸವಿದರು. ಹೂವಿನ ರಂಗೋಲಿ ಪೂಕಳಂ ರಚಿಸಿ ಖುಷಿಪಟ್ಟರು.

48

'ನಗು, ಪ್ರೀತಿ, ಆಹಾರ ಮತ್ತು ಕಾರ್ಯಕ್ರಮ. ಇವೆಲ್ಲವೂ @bombaatbhojanaನ ಓಣಂ ಸಂಚಿಕೆಯನ್ನು ಸೂಪರ್ ಸ್ಮರಣೀಯ ಅನುಭವವನ್ನಾಗಿ ಮಾಡಿದೆ. @sihikahichandru ಸರ್ ನೀವು ಸಕಾರಾತ್ಮಕತೆಯನ್ನು ಹೊರಸೂಸುವ ವ್ಯಕ್ತಿ ಮತ್ತು ತುಂಬಾ ಪ್ರೀತಿಯನ್ನು ನಾನು ಯಾವಾಗಲೂ ನಿಮ್ಮೊಂದಿಗೆ ಕೆಲಸ ಮಾಡಲು ಮತ್ತು ಸಮಯ ಕಳೆಯಲು ಇಷ್ಟಪಡುತ್ತೇನೆ. @madanramvenkatesh ತುಂಬಾ ವರ್ಷಗಳ ನಂತರ ನಿಮ್ಮನ್ನು ನೋಡಲು ತುಂಬಾ ಸಂತೋಷವಾಯಿತು' ಎಂದು ಬರೆದುಕೊಂಡಿದ್ದಾರೆ.

58

ಶೃತಿ ಹರಿಹರನ್ ಮೂಲತಃ ಮಲಯಾಳಿ. ಕೇರಳದ ತಿರುವನಂತಪುರದಲ್ಲಿ ತಮಿಳು ಅಯ್ಯರ್ ಕುಟುಂಬದಲ್ಲಿ ಜನಿಸಿದವರು. ಆದರೆ ಕನ್ನಡ ಸಿನೆಮಾಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

68

ಶೃತಿ ಹರಿಹರನ್‌, ರಂಗಭೂಮಿಯಲ್ಲಿ ನಟಿಸಿ, ಚಿತ್ರಗಳಲ್ಲಿ ಹಿನ್ನೆಲೆ ನೃತ್ಯಗಾರ್ತಿಯಾಗಿ ಕೆಲಸ ಮಾಡಿದ ನಂತರ ಚಲನಚಿತ್ರಗಳಲ್ಲಿ ನಟಿಸುವ ವೃತ್ತಿಯನ್ನು ಆರಂಭಿಸಿದರು. 

78

ಶೃತಿ ಹರಿಹರನ್ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಎರಡು ಫಿಲಂ ಫೇರ್ ಅವಾರ್ಡ್ ಸೌತ್ ಪ್ರಶಸ್ತಿ, ಸೈಮಾ ಪ್ರಶಸ್ತಿ ಮತ್ತು ನಾತಿಚರಾಮಿ ಚಿತ್ರದ ಅಭಿನಯಕ್ಕಾಗಿ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ (ವಿಶೇಷ ಉಲ್ಲೇಖ) ದೊರಕಿದೆ. ಬೆಂಗಳೂರು ಟೈಮ್ಸ್ ಪತ್ರಿಕೆಯ 2018ರ ಅತ್ಯಂತ ಅಪೇಕ್ಷಣೀಯ ಮಹಿಳೆ ಆಯ್ಕೆಯಾಗಿದ್ದರು.

88

ನಟಿ ಶೃತಿ ಹರಿಹರನ್‌ ಭಾಗಿಯಾಗಿರುವ ಬೊಂಬಾಟ್ ಭೋಜನ ಕಾರ್ಯಕ್ರಮ @starsuvarna ವಾಹಿನಿಯಲ್ಲಿ ಆಗಸ್ಟ್ 29ರಂದು ಈ ಸಂಚಿಕೆ ಪ್ರಸಾರವಾಗಲಿದೆ.

Read more Photos on
click me!

Recommended Stories